ಮನೋರಂಜನೆ

ಟಿಕ್‌ಟಾಕ್‌ ನಲ್ಲಿ ಸವಾಲೆಸೆದ ವಿವಾದದಲ್ಲಿ ಸಿಲುಕಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

Pinterest LinkedIn Tumblr


ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ ಚಿತ್ರ “ಚಪಾಕ್‌’ನಲ್ಲಿ ಆ್ಯಸಿಡ್‌ ದಾಳಿಯ ದುರ್ದೈವಿಯೊಬ್ಬರ ಪಾತ್ರ ನಿರ್ವಹಿಸಿದ ನಟಿ ದೀಪಿಕಾ ಪಡುಕೋಣೆ, ಟಿಕ್‌ಟಾಕ್‌ ಆ್ಯಪ್‌ ಬಳಕೆದಾರರಿಗೆ ಹೊಸ ಸವಾಲೊಂದನ್ನು ಹಾಕಿ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ಚಪಾಕ್‌ನಲ್ಲಿ ಆ್ಯಸಿಡ್‌ನಿಂದ ಮುಖ ಬೆಂದು ಹೋದಂತೆ ಮೇಕಪ್‌ ಮಾಡಿಕೊಂಡು ನಟಿಸಿದ್ದ ಅವರು, ಆ ಚಿತ್ರದಲ್ಲಿ ತಾವು ಕಾಣುವಂತೆಯೇ ಮೇಕಪ್‌ ಮಾಡಿಕೊಂಡು ಅದರ ವಿಡಿಯೋವೊಂದನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ದೀಪಿಕಾರ ಸೂಚನೆ ಅಸಂಬಂದ್ಧ, ಅವಿವೇಕತನದ್ದು ಎಂದಿರುವ ಹಲವಾರು ಮಂದಿ, ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ದೀಪಿಕಾರ ಈ ಸವಾಲು ಆ್ಯಸಿಡ್‌ ಸಂತ್ರಸ್ತೆಯರಿಗೆ ಮಾಡಿದ ಅವಮಾನ ಎಂದೂ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

Comments are closed.