ರಾಷ್ಟ್ರೀಯ

ಕೆಟ್ಟ ಸಿನಿಮಾ ನೋಡಲು ಕಾಶ್ಮೀರದಲ್ಲಿ ಇಂಟರ್ನೆಟ್ ಬಳಕೆ: ನೀತಿ ಆಯೋಗ ಸದಸ್ಯ

Pinterest LinkedIn Tumblr


ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಬಳಕೆಯಾಗುವುದು ಕೇವಲ ಕೆಟ್ಟ ಸಿನಿಮಾಗಳನ್ನು ನೋಡಲು ಮಾತ್ರ. ಹಾಗಾಗಿ ಅಲ್ಲಿ ಇಂಟರ್ನೆಟ್ ನಿಷೇಧದಿಂದ ಆರ್ಥಿಕವಾಗಿ ಯಾವುದೇ ನಷ್ಟವಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ ಸಾರಸ್ವತ್ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಮೇಲೆ ನಿಷೇಧ ಹೇರಿದ್ದನ್ನು ಸಮರ್ಥಿಸಿಕೊಂಡರು.

ರಾಜಕಾರಣಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಯಾಕೆ ಹೋಗಲು ಬಯಸುತ್ತಾರೆ. ಕಾಶ್ಮೀರದಲ್ಲಿನ ದೆಹಲಿ ರಸ್ತೆಯಲ್ಲಿನ ಪ್ರತಿಭಟನೆಗಳನ್ನು ಮತ್ತೆ ಆಯೋಜಿಸಲು ಹೋಗುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಯ ಕಿಚ್ಚು ಹಚ್ಚುತ್ತಾರೆ. ಹೀಗಾಗಿ ಇಂಟರ್ನೆಟ್ ಇಲ್ಲದೆ ಅಲ್ಲಿ ಏನಾಗಬಹುದು. ಅಲ್ಲಿಯವರು ಇಂಟರ್ನೆಟ್ ನಲ್ಲಿ ಏನು ನೋಡುತ್ತಾರೆ? ಕೆಟ್ಟ ಸಿನಿಮಾಗಳನ್ನು ಬಿಟ್ಟು ಮತ್ತೇನು ಇಲ್ಲ ಎಂದು ವಿ.ಕೆ. ಸಾರಸ್ವತ್ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಸಮಯದಲ್ಲಿ ಕೇಂದ್ರ ಸರಕಾರ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ನಿಷೇಧಿಸಲಾಗಿತ್ತು.

ಸದ್ಯ ಜಮ್ಮು ಕಾಶ್ಮೀರದಲ್ಲಿ ನಿಷೇಧ ಸಡಿಲಿಸಲಾಗಿದೆ. ಪ್ರೀಪೇಯ್ಡ್ ಮೊಬೈಲ್ ಸೇವೆಯನ್ನು ಶನಿವಾರದಿಂದ ಆರಂಭಿಸಲಾಗಿದೆ. 2ಜಿ ಇಂಟರ್ನೆಟ್ ಕೂಡ ಮರು ಆರಂಭಿಸಲಾಗಿದೆ.

Comments are closed.