ರಾಷ್ಟ್ರೀಯ

ಸಮಸ್ಯೆ ಇರುವುದು ಜನಸಂಖ್ಯೆಯಿಂದಲ್ಲ ಎಂದು ಮೋಹನ್ ಭಾಗ್ವತ್ ಗೆ ಓವೈಸಿ

Pinterest LinkedIn Tumblr


ಹೈದರಾಬಾದ್: ದೇಶದ ಸಮಸ್ಯೆ ಜನಸಂಖ್ಯೆಯಲ್ಲ. ದೇಶದ ನಿಜವಾದ ಸಮಸ್ಯೆ ನಿರುದ್ಯೋಗ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು. ಹೀಗಾಗಿ ಪ್ರತಿ ದಂಪತಿಗೆ ಎರಡು ಮಕ್ಕಳ ಮಿತಿ ಇರಬೇಕು ಎಂಬ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಓವೈಸಿ ತಿರುಗೇಟು ನೀಡಿದ್ದಾರೆ.

ಮೋಹನ್ ಭಾಗವತ್ ಅವರಿಗೆ ತಿರುಗೇಟು ನೀಡಿದ ಅಸಾದುದ್ದೀನ್ ಓವೈಸಿ, ನನಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಬಹುತೇಕ ಬಿಜೆಪಿ ನಾಯಕರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಆದರೂ ಆರ್ ಎಸ್ ಎಸ್ ನವರಿಗೆ ಮುಸ್ಲಿಂ ಜನಸಂಖ್ಯೆ ನಿಯಂತ್ರಣದ ಕಾಳಜಿಯಿದೆ. ಈ ದೇಶದ ನಿಜವಾದ ಸಮಸ್ಯೆ ಇರುವುದು ಜನಸಂಖ್ಯೆಯಲ್ಲ. ನಿಜವಾದ ಸಮಸ್ಯೆ ನಿರುದ್ಯೋಗ ಎಂದಿದ್ದಾರೆ.

ಆರ್ ಎಸ್ ಎಸ್ ಮುಖ್ಯಸ್ಥ ಭಾಗ್ವತ್ ಮೇಲೆ ಮತ್ತಷ್ಟು ವಾಗ್ದಾಳಿ ಮುಂದುವರಿಸಿದ ಓವೈಸಿ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೀವು ಎಷ್ಟು ಜನ ಯುವಕರಿಗೆ ಉದ್ಯೋಗ ಸೌಲಭ್ಯ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧವು ವಾಗ್ದಾಳಿ ನಡೆಸಿದ ಓವೈಸಿ, ಕೇಂದ್ರ ಸರಕಾರ ನಿರುದ್ಯೋಗ ನಿರ್ಮೂಲನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 2018ರಲ್ಲಿ ನಿರುದ್ಯೋಗ ಸಮಸ್ಯೆಯಿಂದ ಪ್ರತಿ ನಿತ್ಯ 36 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದರು.

Comments are closed.