ಮನೋರಂಜನೆ

ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆಗೆ ಮಹೂರ್ತ ಫಿಕ್ಸ್ !

Pinterest LinkedIn Tumblr

ಬೆಂಗಳೂರು: ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಸೆಮಣೆಯೇರಲು ಸಜ್ಜಾಗಿದ್ದು, ಮದುವೆ ದಿನಾಂಕ ಫಿಕ್ಸ್ ಆಗಿದೆ.

2019ರ ಅಕ್ಟೋಬರ್ 21ರಂದು ಇಬ್ಬರು ಎಂಗೇಜ್ ಆಗಿದ್ದರು.ಇತ್ತೀಚೆಗೆ ಸಂದರ್ಶನವೊಂದಲ್ಲಿ ಮಾತನಾಡಿದ ನಿವೇದಿತಾ ಗೌಡ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ತಿಳಿಸಿದ್ದಾರೆ.

ಚಂದನ್ ಹಾಗೂ ನಿವೇದಿತಾ ಮುಂದಿನ ತಿಂಗಳು ಫೆಬ್ರವರಿ 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಮದುವೆ ಮೈಸೂರಿನ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಎರಡು ಮನೆಯವರು ಮದುವೆಯ ತಯಾರಿ ನಡೆಸುತ್ತಿದ್ದಾರೆ.

ಮದುವೆ ತಯಾರಿ ನಡುವೆಯೂ ನಿವೇದಿತಾ ಗೌಡ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ನಮ್ಮಿಬ್ಬರ ಇಷ್ಟದಂತೆ ಮದುವೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರು ಕೆಲಸದಲ್ಲಿ ಬ್ಯುಸಿಯಿದ್ದೇವೆ. ಮನೆಯವರು ಮದುವೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಮದುವೆಯ ತಯಾರಿಯ ಬಗ್ಗೆ ನಿವೇದಿತಾ ಹೇಳಿದ್ದಾರೆ.

Comments are closed.