ಮನೋರಂಜನೆ

20ನೇ ಲವ್ ಆನಿವರ್ಸರಿ- ನಟ ಶ್ರೀಮುರಳಿ ದಂಪತಿಯ ಫೋಟೋಶೂಟ್

Pinterest LinkedIn Tumblr


ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇದೀಗ ಸ್ಯಾಂಡಲ್‍ವುಡ್ ನಟ ಶ್ರೀಮುರಳಿ ತಮ್ಮ ಲವ್ ವಾರ್ಷಿಕೋತ್ಸವವನ್ನು ಸೆಲಬ್ರೇಷನ್ ಮಾಡಿ, ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಹೌದು, ನಟ ಶ್ರೀಮುರಳಿ ತಮ್ಮ 20ನೇ ಲವ್ ಆನಿವರ್ಸರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಅಂದರೆ 1999 ಡಿಸೆಂಬರ್ 30 ರಂದು ಶ್ರೀಮುರಳಿ ತಮ್ಮ ಪತ್ನಿ ವಿದ್ಯಾ ಅವರಿಗೆ ಪ್ರಪೋಸ್ ಮಾಡಿದ್ದರು. ಹೀಗಾಗಿ ಅದೇ ದಿನ ತಮ್ಮ ಪ್ರೀತಿಯ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ್ದಾರೆ.

“1999ರಿಂದ ನೀವು ನನ್ನ ಪಕ್ಕದ್ದಲ್ಲಿದ್ದೀರಿ, ಹೀಗಾಗಿ ಜೀವನದಲ್ಲಿ ನಾನು ತುಂಬಾ ಸಂತೋಷದಿಂದ ಇದ್ದೇನೆ. ನನ್ನ ಕಾಲೇಜಿನ ಪ್ರಿಯತಮೆ, ನಮ್ಮ ಎರಡು ಮಕ್ಕಳ ತಾಯಿ, ನಿಮ್ಮೊಂದಿಗೆ ನಾನು 2 ದಶಕಗಳನ್ನು ಕಳೆದಿದ್ದೇನೆ. ನಿಜಕ್ಕೂ ಇದೊಂದು ಸುಂದರ ಪ್ರಯಾಣವಾಗಿದೆ. ನಾನು ಬದುಕಿರುವವರೆಗೂ ತುಂಬಾ ಪ್ರೀತಿಸುತ್ತೇನೆ. 20ನೇ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಶ್ರೀಮುರಳಿ ಬಿಳಿ ಬಣ್ಣ ಕುರ್ತಾ ಧರಿಸಿದರೆ, ವಿದ್ಯಾ ಅವರು ಕೂಡ ಬಿಳಿ ಬಣ್ಣದ ಸೀರೆ ತೊಟ್ಟಿದ್ದರು. ಇಬ್ಬರು ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು. ಶ್ರೀಮುರಳಿ ಮತ್ತು ವಿದ್ಯಾ ಇಬ್ಬರು 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

Comments are closed.