ಮನೋರಂಜನೆ

ಸಾಕಷ್ಟು ಸಲ ಭೂಮಿ ಶೆಟ್ಟಿ ಟ್ರೋಲ್‌ ಪೇಜ್‌ಗಳಿಗೆ ಭರ್ಜರಿ ಆಹಾರವಾಗುತ್ತಿರುವುದೇಕೇ?

Pinterest LinkedIn Tumblr


ಕಳೆದ ವಾರದ ಲಕ್ಷುರಿ ಟಾಸ್ಕ್ ಗೆದ್ದ ಪಂಜಾ ಫ್ಯಾಕ್ಟರಿ ತಂಡ ತಮಗೆ ಬೇಕಾದ ತಿಂಡಿಗಳನ್ನು ಆರ್ಡರ್ ಮಾಡಿದ್ದರು. ಟಾಸ್ಕ್‌ನಲ್ಲಿ ಸೋತ ಪುಟಾಣಿ ಪಂಟ್ರು ತಂಡ ಮಾತ್ರ ಬೇಜಾರು ಮಾಡಿಕೊಂಡು ಬೆಡ್‌ಮೇಲೆ ಸುಮ್ಮನೆ ಕುಳಿತಿತ್ತು. ಕುರಿ ಪ್ರತಾಪ್, ದೀಪಿಕಾ ದಾಸ್, ವಾಸುಕಿ ವೈಭವ್, ಹರೀಶ್ ರಾಜ್, ಶೈನ್ ಶೆಟ್ಟಿ ಗೆದ್ದ ಟೀಂನಲ್ಲಿದ್ದರೆ, ಭೂಮಿ ಶೆಟ್ಟಿ, ಪ್ರಿಯಾಂಕಾ, ಚಂದನ್ ಆಚಾರ್, ಚಂದನಾ ಸೋತ ತಂಡದಲ್ಲಿದ್ದರು.

ಬೇರೆಯವರು ಚಿಕನ್ ತಿನ್ನುತ್ತಿರೋದಕ್ಕೆ ಮಕ್ಕಳಂತೆ ಅತ್ತ ಭೂಮಿ ಶೆಟ್ಟಿ
ಪಂಜಾ ಫ್ಯಾಕ್ಟರಿ ತಂಡದವರು ಮೈಸೂರು ಪಾಕ್, ಚಿಕನ್, ಐಸ್‌ಕ್ರೀಮ್‌ನ್ನು ಬೋರ್ಡ್‌ ಮೇಲೆ ಬರೆದಿದ್ದರು. ಚಾಕಲೇಟ್, ಬೆಣ್ಣೆ ಬಿಸ್ಕೇಟ್ ಈ ಬಾರಿ ಲಕ್ಷುರಿ ಟಾಸ್ಕ್‌ನಲ್ಲಿ ಇಲ್ಲ ಎಂದು ಗೆದ್ದ ತಂಡ ಸ್ವಲ್ಪ ಬೇಸರ ಮಾಡಿಕೊಂಡಿದೆ. ಇದನ್ನು ದೂರದಿಂದಲೇ ನೋಡಿದ ಭೂಮಿ ಶೆಟ್ಟಿ ಮರುಗಿದ್ದಾರೆ. ಐಸ್‌ಕ್ರೀಮ್ ತಿನ್ನಲಿ, ಬಿಸ್ಕೇಟ್ ತಿನ್ನಲಿ ಆದರೆ ಅವರೆಲ್ಲ ಚಿಕನ್ ತಿನ್ನುತ್ತಿದ್ದಾರೆ ಎಂದು ಭೂಮಿ ಬೇಸರ ಮಾಡಿಕೊಂಡಿದ್ದಾರೆ. ಭೂಮಿಗೆ ಇನ್ನಷ್ಟು ಬೇಜಾರಾಗುವಂತೆ ದೀಪಿಕಾ ಎಲ್ಲ ತಿಂಡಿಗಳನ್ನು ಅವರಿಗೆ ತೋರಿಸಿ ಇನ್ನಷ್ಟು ಆಸೆ ಹುಟ್ಟುವಂತೆ ಮಾಡಿದ್ದಾರೆ.

ಶೈನ್ ಶೆಟ್ಟಿ ರೇಗಿಸಿದ್ರು; ಚಂದನ್ ಆಚಾರ್ ಸಮಾಧಾನ ಮಾಡಿದ್ರು
ಶೈನ್ ಶೆಟ್ಟಿ ಕೂಡ ಭೂಮಿಯನ್ನು ಎಷ್ಟು ಸಾಧ್ಯವೋ ಅಷ್ಟು ರೇಗಿಸಿದ್ದಾರೆ. ಆದರೆ ಪುಟಾಣಿ ಪಂಟ್ರು ತಂಡದಲ್ಲಿದ್ದ ಚಂದನ್ ಆಚಾರ್ ಮಾತ್ರ ಮುಂದೆ ಚಿಕನ್ ಸಿಕ್ಕಾಗ ಚಿಕನ್ ಲಾಲಿಪಾಪ್ ನಿನಗೆ ಮಾಡಿಕೊಡುತ್ತೇನೆ ಎಂದು ಭೂಮಿಗೆ ಸಮಾಧಾನ ಮಾಡಿದ್ದಾರೆ. ಆದರೆ ಭೂಮಿ ಶೆಟ್ಟಿ ಮಾತ್ರ ಚಿಕನ್ ಸಿಗದೇ ಇದ್ದದ್ದಕ್ಕಾಗಿ ಅತಿಯಾಗಿ ರಂಪಾಟ-ಚೀರಾಟ ಮಾಡಿದ್ದಾರೆ. ಈ ಹಿಂದೆ ಫಿಶ್‌ಗಾಗಿ ಕೂಡ ಭೂಮಿ ಅತ್ತಿದ್ದರು, ಬಿಗ್ ಬಾಸ್ ಬಳಿ ಹಲವು ಬಾರಿ ಈ ಕುರಿತು ಮನವಿ ಮಾಡಿದ್ದರು.

Comments are closed.