ಮನೋರಂಜನೆ

ಅಮಿತಾಭ್ ಗೆ ದೊರೆತ ‘ದಾದಾ ಸಾಹೇಬ ಅವಾರ್ಡ್’ ಪ್ರಶಸ್ತಿಯ ವಿಶೇಷತೆ ಏನು?

Pinterest LinkedIn Tumblr


ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಇಂದು ದಾದಾ ಸಾಹೇಬ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ ಅವರು ರಾಷ್ಟ್ರಪತಿ ಭವನದಲ್ಲಿ ಅಮಿತಾಭ್‌ಗೆ ಪ್ರಶಸ್ತಿ ವಿತರಿಸಿದ್ದಾರೆ.

ದಾದಾ ಸಾಹೇಬ ಪ್ರಶಸ್ತಿ ವಿಶೇಷತೆ ಏನು?
77 ವರ್ಷದ ಅಮಿತಾಭ್ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ ‘ದಾದಾ ಸಾಹೇಬ’ ಪ್ರಶಸ್ತಿ ನೀಡಲಾಗುತ್ತಿದೆ.
ಭಾರತೀಯ ಸಿನಿಮಾ ರಂಗದ ಪಿತಾಮಹ ದುಂಡಿರಾಜ್ ಗೋವಿಂದ ಫಾಲ್ಕೆ ಸ್ಮರಣೀಯವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. 1969ರಲ್ಲಿ ಈ ಪ್ರಶಸ್ತಿಯನ್ನು ಕೊಡಲು ಆರಂಭಿಸಿದರು. ಸ್ವರ್ಣ ಕಮಲದ ಜೊತೆ 10 ಲಕ್ಷ ರೂಪಾಯಿಯನ್ನು ಒಳಗೊಂಡಿದೆ ಈ ಪ್ರಶಸ್ತಿ. ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾಗಲೇ ಬಚ್ಚನ್ ಸಿನಿಮಾರಂಗದ ಕಲಾವಿದರಿಗೆ, ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು. ಇವರ ಜೊತೆ ನಟಿಸಿದ್ದ ಹೇಮಾ ಮಾಲಿನಿ ಹೇಳುವಂತೆ “ಈ ಪ್ರಶಸ್ತಿಗೆ ಅಮಿತಾಭ್ ಬಿಟ್ಟು ಬೇರೆ ಯಾರನ್ನೂ ಯೋಚಿಸಲಾರರಂತೆ.

4 ರಾಷ್ಟ್ರ ಪ್ರಶಸ್ತಿ ಪಡೆದಿರುವ ಅಮಿತಾಭ್ ಬಚ್ಚನ್
ನಟ ಅಭಿಷೇಕ್ ಬಚ್ಚನ್, ರಜನಿಕಾಂತ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಅನಿಲ್ ಕಪೂರ್, ಆಯುಷ್ಮಾನ್ ಖುರಾನಾ, ಹುಮಾ ಖುರೇಷಿ, ಕಾರ್ತಿಕ್ ಆರ್ಯನ್ ಅವರು ಅಮಿತಾಭ್‌ಗೆ ಅಭಿನಂದನೆ ತಿಳಿಸಿದ್ದಾರೆ. ‘ಬದ್ಲಾ’ ಸಿನಿಮಾದಲ್ಲಿ ಅಮಿತಾಭ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ‘ಅಗ್ನೀಪಥ್, ಬ್ಲ್ಯಾಕ್, ಪಾ, ಪಿಕು’ ಸಿನಿಮಾಕ್ಕೆ ಅಮಿತಾಭ್ ನಾಲ್ಕು ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು. 1969ರಲ್ಲಿ ತೆರೆಕಂಡ ‘ಸಾತ್ ಹಿಂದುಸ್ತಾನಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು ಬಿಗ್ ಬಿ. ಪದ್ಮವಿಭೂಷಣ ಪ್ರಶಸ್ತಿ ಗಳಿಸಿದ್ದಾರೆ ಅಮಿತಾಭ್.

Comments are closed.