ಮುಂಬೈ

‘ಸಾಮ್ನಾ’ದಲ್ಲಿ ಪ್ರಧಾನಿಯನ್ನು ಹೊಗಳಿದ ಶಿವಸೇನಾ

Pinterest LinkedIn Tumblr


ನವದೆಹಲಿ: ಶಿವಸೇನ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಮತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದೆ. 2019ರ ರಾಜಕೀಯ ಘಟನೆಗಳು ಮೇಲೆ ಟಿಪ್ಪಣಿಗಳನ್ನು ಮಾಡಲಾಗಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಕಲ್ಪವಿಲ್ಲ ಎಂದೂ ಸಹ ಹೇಳಲಾಗಿದೆ.

“ಕಳೆದ ವರ್ಷ ನಡೆದಿದ್ದು ತುಂಬಾ ಮಹತ್ವಪೂರ್ಣವಾಗಿದ್ದು, ಲೋಕಸಭೆಯಲ್ಲಿ ಸಾಧಿಸಿದ ಗೆಲುವಿನ ಬಳಿಕ ಮೋದಿ-ಶಾ ವಿಧಾನಸಭೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಮಹಾರಾಷ್ಟ್ರದಂತಹ ದೊಡ್ಡ ರಾಜ್ಯವನ್ನು ಅವರು ಕಳೆದುಕೊಂಡಿದ್ದಾರೆ. ಟೋಪಿ ತಿರುಗಿಸುವವರು ಹಾಗೂ ಕೊಟ್ಟ ಮಾತನ್ನು ಮುರಿಯುವವರು ಸ್ವತಃ ತಾವೇ ಮುರಿದುಬಿದ್ದಿದ್ದು, ಕಳೆದ ವರ್ಷ ನಡೆದಿದೆ” ಎಂದು ಸಂಪಾದಕೀಯದಲ್ಲಿ ಸೇನೆ ಹೇಳಿಕೊಂಡಿದೆ.

ದೇಶದಲ್ಲಿ ರಾಜಕೀಯ ಸ್ಥಿರತೆ ಇದ್ದು, ಜಬರ್ದಸ್ತ್ ಅಸ್ವಸ್ಥತೆಯಿಂದ ಕೂಡಿದೆ. ಸಮಾಜದಲ್ಲಿ ಅಶಾಂತಿ ತಲೆದೂರಿದ್ದು, ದೇಶ ಹೊತ್ತಿ ಉರಿಯುತ್ತಿದೆ. ಅದರೂ ಸಹ ಎಲ್ಲವು ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅಭಿಮತವಾಗಿದೆ. ಬಹುಮತ ಇದ್ದರೂ ಕೂಡ ದೇಶದಲ್ಲಿ ಅಶಾಂತಿ ತಲೆದೂರಿದ್ದರೆ, ಆಡಳಿತ ನಡೆಸುವವರು ಆತ್ಮಚಿಂತನೆ ನಡೆಸುವ ಅಗತ್ಯವಿದೆ ಎಂದು ಸಂಪಾದಕೀಯದಲ್ಲಿ ಸೇನೆ ಬರೆದುಕೊಂಡಿದೆ

ಕಳೆದ ವರ್ಷ ಬಿತ್ತಿದ್ದಾದರೂ ಏನು? ಹೊಸ ವರ್ಷಕ್ಕೆ ನೀಡುತ್ತಿರುವುದಾದರು ಏನು ಎಂಬುದರ ಕುರಿತು ಚರ್ಚೆಗಳು ನಿಲ್ಲಬೇಕಾದ ಅವಶ್ಯಕತೆ ಇದೇ. ಶಾಸನ ನಡೆಸುವವರು ಸುಳ್ಳು ಹೇಳುತ್ತಿದ್ದಾರೆ. ಜನರನ್ನು ಮೋಸಗೊಳಿಸಲಾಗುತ್ತಿದೆ. ಕುರ್ಚಿ ಉಳಿಸಿಕೊಳ್ಳಲು ಅವರು ಯಾವ ಮಟ್ಟಕ್ಕೂ ಇಳಿಯುತ್ತಿದ್ದಾರೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಕಳೆದ ವರ್ಷ ಲೋಕಸಭೆಗೆ ಚುನಾವಣೆಗಳು ನಡೆದವು. ಇದರಲ್ಲಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿತು. ಆದರೆ, ಈ ವರ್ಷ ನಡೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಹರಿಯಾಣಾ ಹೊರತುಪಡಿಸಿ ಮಹಾರಾಷ್ಟ್ರ ಮತ್ತು ಝಾರ್ಖಂಡ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ವಿಧಾನಸಭೆ ಚುನಾವಣೆಗಳಲ್ಲಿ ಜನರು ಪ್ರಾದೇಶಿಕ ಪಕ್ಷಗಳ ಮೇಲೆ ತಮ್ಮ ವಿಶ್ವಾಸ ತೋರಿದ್ದು, ರಾಷ್ಟ್ರೀಯ ಪಕ್ಷಗಳು ಎರಡನೇ ಸ್ಥಾನಕ್ಕೆ ಜಾರಿದ್ದು, ಕಾಂಗ್ರೆಸ್ ನಂತಹ ಪಕ್ಷಕ್ಕೆ ಈ ಮೂರು ರಾಜ್ಯಗಳಲ್ಲಿ ಮನ್ನಣೆ ದೊರೆತಿದೆ ಎಂದು ಸಂಪಾದಕೀಯ ಬೆಳಕು ಚೆಲ್ಲಿದೆ.

ರಾಷ್ಟ್ರ ಮಟ್ಟದಲ್ಲಿ ಇಂದು ಪ್ರಧಾನಿ ಮೋದಿ ನೆತ್ರುತ್ವಕ್ಕೆ ವಿಕಲ್ಪವಿಲ್ಲ. 2019ರಲ್ಲಿ ರಾಹುಲ್ ಗಾಂಧಿ ಅವರನ್ನು ಮೋದಿ ಅವರ ವಿಕಲ್ಪವಾಗಿ ಜನರು ಸ್ವೀಕರಿಸಿಲ್ಲವಾದ ಕಾರಣ ಮತ್ತೊಮ್ಮೆ ಮೋದಿ ಭಾರೀ ಬಹುಮತ ಪಡೆದಿದ್ದಾರೆ. ವಿರೋಧಿ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದಿವುರುದು ಹಾಗೂ ಎಲ್ಲರಿಗೂ ಒಪ್ಪಿಗೆಯಾಗುವ ನೇತೃತ್ವ ಇಲ್ಲ. ಈ ಕಾರಣದಿಂದ ಕಾಂಗ್ರೆಸ್ ಲೋಕಸಭೆಯಲ್ಲಿ 60 ಸ್ಥಾನಗಳನ್ನು ಗಳಿಸಲು ಕೂಡ ಶಕ್ತವಾಗಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಆದರೂ ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಿದ್ದಾರೆ. ಜನರಿಗೆ ಬಲಿಷ್ಠ ಪ್ರತಿಪಕ್ಷ ಬೇಕಾಗಿತ್ತು. ಹೀಗಾಗಿ ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರಗಲ್ಲಿ ಅವರು ಬಿಜೆಪಿಗೆ ಪ್ರತಿಪಕ್ಷ ಸ್ಥಾನ ನೀಡಿದ್ದಾರೆ. ಇಂದು ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ, ಝಾರ್ಖಂಡ್ ಹಾಗೂ ಮಹಾರಾಷ್ಟ್ರಗಳಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿರುವ ಪಕ್ಷಕ್ಕೆ ಮಿತ್ರಪಕ್ಷವಾಗಿ ನಿಂತಿದೆ. ಇಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದಲ್ಲಿ ರಚನೆಗೊಂಡಿರುವ ಸರ್ಕಾರದ ಬೆನ್ನಿಗೆ ಕಾಂಗ್ರೆಸ್ ನಿಂತಿದ್ದು, ಈ ಬದಲಾವಣೆಗೆ 2019 ಸಾಕ್ಷಿಯಾಗಿದೆ ಎನ್ನಲಾಗಿದೆ.

ಇದೇ ವೇಳೆ ಈ ಸಂಪಾದಕೀಯದಲ್ಲಿ NCP ಮುಖ್ಯಸ್ಥ ಶರದ್ ಪವಾರ್ ಕುರಿತು ಹೊಗಳಿಕೆಯ ಮಾತುಗಳನ್ನು ಹೇಳಲಾಗಿದೆ. 2019ರಲ್ಲಿ ಶರದ್ ಪವಾರ್ ಅವರ ನೇತೃತ್ವ ಮತ್ತೊಮ್ಮೆ ಮುಂದೆ ಬಂದಿರುವುದಾಗಿ ಸಂಪಾದಕೀಯದಲ್ಲಿ ಹೇಳಲಾಗಿದೆ. 80ರ ಇಳಿವಯಸ್ಸಿನಲ್ಲಿಯೂ ಕೂಡ ಈ ಹಿರಿಯ ರಾಜಕೀಯ ಮುತ್ಸದ್ದಿ ಮಹಾರಾಷ್ಟ್ರದಂತಹ ರಾಜ್ಯವನ್ನು ಬಿಜೆಪಿ ಕೈಯಿಂದ ಕಸಿದುಕೊಂಡು, ಶಿವಸೇನಾ, ಕಾಂಗ್ರೆಸ್ ಬೆಂಬಲ ಪಡೆದು ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಪವಾರ್ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಮಾಹಾರಾಷ್ಟ್ರದಲ್ಲಿ ನಡೆದ ಘಟನೆಗಳ ಬಳಿಕ ದೇಶದ ವಿರೋಧಿ ಪಕ್ಷದ ನೇತೃತ್ವ ಅವರೆಡೆಗೆ ನಡೆದುಕೊಂಡು ಬಂದಿದೆ ಎಂದು ಸಂಪಾದಕೀಯದಲ್ಲಿ ಬಣ್ಣಿಸಲಾಗಿದೆ.

Comments are closed.