ಕರ್ನಾಟಕ

ರಾಜ್ಯದ ಸಮಸ್ತ ಜನರಿಗೆ ಸಂತಸದ ಸುದ್ದಿ

Pinterest LinkedIn Tumblr


ಬೆಂಗಳೂರು: ವಾಯುಯಾನ ಕ್ಷೇತ್ರದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್ ಉತ್ತರ ಕರ್ನಾಟಕದ ಕಲಬುರಗಿಯಿಂದ ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಪ್ರದೇಶದ ಮೈಸೂರುಗಳಿಗೆ ನೇರ ಸೇವೆಯನ್ನು ಪ್ರಾರಂಭಿಸಿತು.

ಈ ಸೇವೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು “ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ(RCS) ಅಂದರೆ UDAN (ಉಡೆ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಕಲಬುರ್ಗಿ-ಮೈಸೂರು ವಾಯಾ ಬೆಂಗಳೂರು ದೈನಂದಿನ ಸೇವೆಯನ್ನು ಆರಂಭಿಸಲಾಗಿದೆ” ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ಮಿಸಿದ ಕಲಬುರ್ಗಿಯ ಈ ವಿಮಾನ ನಿಲ್ದಾಣವನ್ನು ನವೆಂಬರ್ 22 ರಂದು ಕಾರ್ಯಾಚರಣೆಗಾಗಿ ತೆರೆಯಲಾಗಿದೆ. 2008 ರ ಜೂನ್ 14 ರಂದು ಈ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

“ಈ ಪ್ರಾದೇಶಿಕ ವಿಮಾನ ನಿಲ್ದಾಣವು ರಾಜ್ಯದ ಈಶಾನ್ಯ ಪ್ರದೇಶದ ಪ್ರಮುಖ ವಾಣಿಜ್ಯ ಮತ್ತು ಯಾತ್ರಾ ಕೇಂದ್ರವಾದ ಕಲಬುರಗಿಯನ್ನು ರಾಜ್ಯ ರಾಜಧಾನಿ ಬೆಂಗಳೂರ) ಮತ್ತು ಅರಮನೆಗಳ ನಗರ ಮೈಸೂರು ನಡುವೆ ನೇರ ವಾಯು ಸಂಪರ್ಕವನ್ನು ಸಕ್ರೀಯಗೊಳಿಸುತ್ತದೆ.

ಶ್ರೀನಿವಾಸ್ ಸರ್ದಗಿ ಬಳಿ 567 ಎಕರೆ ಕೃಷಿ ಭೂಮಿಯಲ್ಲಿ ವ್ಯಾಪಿಸಿರುವ ಈ ವಿಮಾನ ನಿಲ್ದಾಣವು 3.25 ಕಿ.ಮೀ ಉದ್ದದ ರನ್ ವೆ ಹೊಂದಿದೆ, ಇದು ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದದ ರನ್ವೇ ಆಗಿದೆ.

ಹೈದರಾಬಾದ್-ಕರ್ನಾಟಕ ವಿಭಾಗದ ಕಲಬುರಗಿ ಪಟ್ಟದ ದಕ್ಷಿಣ ಏಷ್ಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಸೂಫಿ ಸಂತ ಹಜರತ್ ಖ್ವಾಜಾ ಬಂದೇ ನವಾಜ್ ಗೈಸು ದಾರಾಜ್ (1321-1422) ಅವರ ಪವಿತ್ರ ದರ್ಗಾಗಾಗಿ ಜನಪ್ರಿಯವಾಗಿದೆ.

ಮೈಸೂರಿನಿಂದ ಬೆಳಗ್ಗೆ 8: 30 ಕ್ಕೆ ಹೊರಡುವ ವಿಮಾನ ಬೆಳಗ್ಗೆ 9.10 ಕ್ಕೆ ಬೆಂಗಳೂರಿಗೆ ತಲುಪಲಿದೆ. ನಂತರ ಬೆಳಗ್ಗೆ 9:5 ಕ್ಕೆ ಹೊರಟು ಬೆಳಗ್ಗೆ 11: 25 ಕ್ಕೆ ಪುನಃ ಕಲಬುರಗಿಗೆ ತಲುಪಲಿದೆ.

ಬೆಳಗ್ಗೆ 11.50 ಕ್ಕೆ ಕಲಬುರಗಿಯಿಂದ ಹಿಂದಿರುಗುವ ವಿಮಾನ ಮಧ್ಯಾಹ್ನ 1.30 ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ಮಧ್ಯಾಹ್ನ 2 ಗಂಟೆಗೆ ನಿರ್ಗಮಿಸಲಿರುವ ಈ ವಿಮಾನ ಮಧ್ಯಾಹ್ನ 2.50 ಕ್ಕೆ ಮೈಸೂರಿನಲ್ಲಿ ಇಳಿಯಲಿದೆ.

Comments are closed.