ಮನೋರಂಜನೆ

ಏರ್‌ಪೋರ್ಟ್‌ನಲ್ಲೇ ಮೇಕಪ್ ಮಾಡಿಕೊಂಡ ಕರೀನಾ ಕಪೂರ್

Pinterest LinkedIn Tumblr


ಬಾಲಿವುಡ್ ನಟಿ ಕರೀನಾ ಕಪೂರ್ ವೈಯಕ್ತಿಕ ಬದುಕಿನ ಜೊತೆಗೆ ವೃತ್ತಿ ಬದುಕನ್ನೂ ಸಮವಾಗಿ ಕಾಣುತ್ತಾರೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿದೆ. ಅದರಲ್ಲೂ ಸಮಯ ನಿರ್ವಹಣೆಯಲ್ಲಿ ಅವರು ತುಂಬಾ ಚಾಣಾಕ್ಷ ಅಂತ ಮತ್ತೊಮ್ಮೆ ನಿರೂಪಿಸಿದ್ದಾರೆ.

ಇತ್ತೀಚೆಗೆ ಕರೀನಾ ಕಪೂರ್ ಫ್ಯಾಷನ್ ಮಳಿಗೆಯೊಂದರ ಉದ್ಘಾಟನೆಗಾಗಿ ಮುಂಬಯಿನಿಂದ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಅದೇ ದಿನ ಕರೀನಾ ಸಹೋದರನ ಮದುವೆ ಆರತಕ್ಷತೆ ಇದ್ದ ಕಾರಣ ಅವರು ವಿಮಾನ ನಿಲ್ದಾಣದಲ್ಲೇ ಮೇಕಪ್ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕರೀನಾ ಮ್ಯಾನೇಜರ್ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕರೀನಾ ಸಹೋದರ ಅರ್ಮಾನ್ ಜೈನ್ ಆರತಕ್ಷತೆ ಕಾರ್ಯಕ್ರಮ ಶನಿವಾರ ಸಂಜೆ ಮುಂಬಯಿನಲ್ಲಿ ನಡೆಯಿತು. ಆದರೆ ಅದೇ ದಿನ ಬೆಳಗ್ಗೆ ಬೆಂಗಳೂರಿನಲ್ಲಿ ಒಂದು ಫ್ಯಾಷನ್ ಸ್ಟೋರ್ ಉದ್ಘಾಟನೆ ಜೊತೆಗೆ ಹಲವು ಕೆಲಸಗಳ ನಿಮಿತ್ತ ಕರೀನಾ ಸಂಜೆವರೆಗೂ ಅಲ್ಲೇ ಇರಬೇಕಾಯಿತು. ಕೆಲಸಗಳೆಲ್ಲಾ ಮುಗಿದ ಕೂಡಲೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಆಕೆ ಅಲ್ಲಿನ ಲಾಂಜ್‌‍ನಲ್ಲಿ ಕುಳಿತು ಆರತಕ್ಷತೆ ಕಾರ್ಯಕ್ರಮಕ್ಕೆ ಮೇಕಪ್ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡ ಕರೀನಾ ಮ್ಯಾನೇಜರ್, “ಈ ರೀತಿ ನಾವು ಸಿದ್ಧವಾಗುತ್ತೇವೆ. ಅರ್ಮಾನ್ ವಿವಾಹಕ್ಕಾಗಿ ಏರ್‌ಪೋರ್ಟ್‌ನಲ್ಲೇ ಸಿದ್ಧವಾಗುತ್ತಿದ್ದೇನೆ” ಎಂದಿದ್ದಾರೆ. ಈ ವಿಡಿಯೋ ನೋಡಿದವರು ಕರೀನಾರ ಟೈಮ್ ಮ್ಯಾನೇಜ್‌ಮೆಂಟ್ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಕರೀನಾ ತನ್ನ ಮದುವೆ ಬಗ್ಗೆ ಮಾತನಾಡುತ್ತಾ, ವೃತ್ತಿ ಬದುಕು ಬೇರೆ, ಪರ್ಸನಲ್ ಜೀವನ ಬೇರೆ. ಲವ್ ಮಾಡುವುದು ಕಾಯಿಲೆ ಏನು ಅಲ್ಲ ಅಲ್ಲವೇ? ಲವ್ ಮಾಡಿದರೆ ನಾವೇನು ಸತ್ತು ಹೋಗಲ್ಲ. ಆದರೆ ಮದುವೆ ಬಳಿಕವೂ ಸಿನಿಮಾ ಬಿಡಲ್ಲ ಎಂದು ಹೇಳಿದ್ದೆ. ಇದಕ್ಕೆ ಸೈಫ್ ನೀನು ಯಾವುದೇ ಕಾರಣಕ್ಕೂ ಬಿಡಬೇಡ ಎಂದಿದ್ದಾಗಿ ಹೇಳಿಕೊಂಡಿದ್ದರು.

ತಮಗೆ ಎರಡನೇ ಮಗು ಹೊಂದುವ ಪ್ಲ್ಯಾನ್‌ ಸದ್ಯಕ್ಕೆ ಇಲ್ಲ ಎಂದು ಕರೀನಾ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಬಳಿ ನೀವು ಎರಡನೇ ಗುಡ್‌ನ್ಯೂಸ್‌ ಯಾವಾಗ ಕೊಡುವಿರಿ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು, ಸದ್ಯಕ್ಕೆ ನಾನು ಮತ್ತು ನನ್ನ ಪತಿ ಸೈಫ್‌ ಆಲಿ ಖಾನ್‌ ಇನ್ನೊಂದು ಮಗು ಹೊಂದುವ ನಿರ್ಧಾರ ಮಾಡಿಲ್ಲ.

ನಮ್ಮ ಮಗ ತೈಮೂರ್‌ ಜೊತೆ ನಾವು ತುಂಬಾ ಸಂತೋಷವಾಗಿದ್ದೇವೆ ಎಂದು ಹೇಳಿದ್ದಾರೆ. ನಾನು ಮತ್ತು ಸೈಫ್‌ ನಮ್ಮ ನಟನಾ ವೃತ್ತಿಯಲ್ಲಿ ತುಂಬಾ ಬಿಝಿಯಾಗಿದ್ದೇವೆ. ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತಿದ್ದೇವೆ. ಆದ್ದರಿಂದ ಸದ್ಯಕ್ಕೆ ಎರಡನೆ ಮಗು ಮಾಡಿಕೊಳ್ಳುವ ಯೋಜನೆ ಇಲ್ಲಎಂದು ತಿಳಿಸಿದ್ದಾರೆ. ಕರೀನಾ ಕಪೂರ್‌ ನಟನೆಯ ಗುಡ್‌ನ್ಯೂಸ್‌ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗಲಿದೆ. ಇದರಲ್ಲಿಅಕ್ಷಯ್‌ ಕುಮಾರ್‌, ದಿಲ್ಜೀತ್‌ ದೊಸಂಜ್‌, ಕೈರಾ ಅಡ್ವಾಣಿ ಮುಂತಾದವರು ಇದ್ದಾರೆ.

Comments are closed.