ರಾಷ್ಟ್ರೀಯ

ಮಾಲಕಿಯೊಂದಿಗೆ ನೃತ್ಯ ಮಾಡುತ್ತದೆ ಈ ಶ್ವಾನ…!

Pinterest LinkedIn Tumblr


ಮುದ್ದಿನ ಶ್ವಾನಗಳು ಹಲವು ಪ್ರತಿಭೆಗಳನ್ನು ಹೊಂದಿರುತ್ತವೆ. ಇದೇ ಕಾರಣಕ್ಕೆ ಶ್ವಾನಗಳ ಹೆಸರಿನಲ್ಲೇ ಮಾಲಿಕರು ಹಾಗೂ ಪ್ರಾಣಿಪ್ರಿಯ ಸಂಘಟನೆಗಳು ಹಲವು ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡುತ್ತಾರೆ. ಈ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಸಾಕಷ್ಟು ಜನ ಫಾಲೋವರ್ಸ್‌ ಕೂಡಾ ಇರುತ್ತಾರೆ. ಇಂಟರ್ನೆಟ್‌ನಲ್ಲಿ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ.

ಸದ್ಯ ಈ ಪಟ್ಟಿಗೆ ಮತ್ತೊಂದು ಕ್ಯೂಟ್ ಶ್ವಾನ ಸೇರಿದೆ. ಈ ಶ್ವಾನ ತನ್ನ ಮಾಲಕಿಯೊಂದಿಗೆ ಸಖತ್ ಆಗಿಯೇ ಡ್ಯಾನ್ಸ್‌ ಮಾಡುತ್ತದೆ. ಈ ಡ್ಯಾನ್ಸಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಅಡುಗೆ ಕೋಣೆಯಲ್ಲಿ ಮಾಲಕಿಯೊಂದಿಗೆ ಶ್ವಾನ ಡ್ಯಾನ್ಸ್‌ ಮಾಡುವ ದೃಶ್ಯ ಈ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೈಲಿ ಎಂಬುದು ಈ ಮುದ್ದಿನ ಶ್ವಾನದ ಹೆಸರು. ಒಬ್ಬ ಮಹಿಳೆಯೊಂದಿಗೆ ಶ್ವಾನದೊಂದಿಗೆ ಡ್ಯಾನ್ಸ್‌ ಮಾಡಿದರೆ, ಮತ್ತೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ತನ್ನ ಎರಡು ಕಾಲನ್ನೂ ಮೇಲೆತ್ತಿ ಬೈಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳನ್ನು ಹಾಕಿದ್ದಾಳೆ. ಬೈಲಿಯ ಈ ಡ್ಯಾನ್ಸ್ ನೋಡಿ ಮನೆಯವರೂ ಸಂಭ್ರಮಿಸಿದ್ದಾರೆ.

ಸುಮಾರು 20 ಸೆಕೆಂಡಿನ ವಿಡಿಯೋ ಇದು. ತನ್ನ ಶ್ವಾನದ ಪ್ರತಿಭೆಯ ವಿಡಿಯೋವನ್ನು ಮಾಲಕಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ, ಈ ವಿಡಿಯೋ ವೈರಲ್ ಆಗುವುದಕ್ಕೆ ಹೆಚ್ಚು ಹೊತ್ತೇನು ಹಿಡಿದಿರಲಿಲ್ಲ. ಲಕ್ಷಾಂತರ ಜನ ಫೇಸ್‌ಬುಕ್ ಒಂದರಲ್ಲೇ ಈ ವಿಡಿಯೋವನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ.

ನಿಜಕ್ಕೂ ಈ ವಿಡಿಯೋ ನೋಡುವುದಕ್ಕೆ ಖುಷಿಯಾಗಿದೆ. ಮುಗ್ಧ ಶ್ವಾನದ ಮುದ್ದು ನೃತ್ಯ ಮನಸ್ಸಿಗೆ ಹಿತ ನೀಡುತ್ತದೆ.

Comments are closed.