ಮನೋರಂಜನೆ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣರ ಕಿಸ್ಸಿಂಗ್ ಫೋಟೋ ವೈರಲ್

Pinterest LinkedIn Tumblr


ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಕಿಸ್ಸಿಂಗ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಶ್ಮಿಕಾ ತಮ್ಮ ಇನ್‍ಸ್ಟಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಕಣ್ಣು ಮುಚ್ಚಿಕೊಂಡು ಮುತ್ತು ಕೊಡುವ ರೀತಿ ಪೋಸ್ ನೀಡಿದ್ದಾರೆ. ಅಲ್ಲದೆ ಅದಕ್ಕೆ, “ಉಮ್ಮಾ” ಎಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ.

ಈ ಹಿಂದೆ ನಟ ವಿಜಯ್ ದೇವರಕೊಂಡ ಜೊತೆ ‘ಗೀತಾ ಗೋವಿಂದಂ’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದರು. ಈ ಚಿತ್ರ ಬಿಡುಗಡೆಗೂ ಮುನ್ನವೇ ಕಿಸ್ಸಿಂಗ್ ದೃಶ್ಯ ಲೀಕ್ ಆಗಿತ್ತು. ದೃಶ್ಯ ಲೀಕ್ ಆಗುತ್ತಿದ್ದಂತೆ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಬಳಿಕ ಚಿತ್ರತಂಡ ಆ ದೃಶ್ಯವನ್ನು ಚಿತ್ರದಿಂದ ತೆಗೆಯಲಾಗಿತ್ತು.

ಇದಾದ ಬಳಿಕ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ರಶ್ಮಿಕಾ ಮತ್ತೆ ನಟ ವಿಜಯ್ ಅವರ ಜೊತೆ ಕಿಸ್ಸಿಂಗ್ ಸೀನ್‍ನಲ್ಲೂ ನಟಿಸಿದ್ದರು. ಈ ಬಾರಿ ರಶ್ಮಿಕಾ ಸೇರಿದಂತೆ ವಿಜಯ್ ಅವರು ಕೂಡ ಸಾಕಷ್ಟು ಟ್ರೋಲ್ ಆಗಿದ್ದರು. ಆಗ ಇಬ್ಬರು ಚಿತ್ರಕ್ಕೆ ಅವಶ್ಯಕತೆವಿದ್ದ ಕಾರಣ ಕಿಸ್ಸಿಂಗ್ ಸೀನ್ ಮಾಡಿದ್ದೇವು ಎಂದು ಸ್ಪಷ್ಟನೆ ನೀಡಿದ್ದರು.

ಸದ್ಯ ರಶ್ಮಿಕಾ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆ ನಟಿಸಿದ ‘ಪೊಗರು’ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಂಡಿದೆ. ಇದಲ್ಲದೆ ರಶ್ಮಿಕಾ, ಮಹೇಶ್ ಬಾಬು ಜೊತೆಗೆ `ಸರಿಲೇರು ನೀಕ್ಕೆವ್ವರು’, ನಿತಿನ್ ಅಭಿನಯದ `ಭೀಷ್ಮ’ ಮತ್ತು ಅಲ್ಲು ಅರ್ಜುನ್ ಜೊತೆಗೆ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Comments are closed.