ರಾಷ್ಟ್ರೀಯ

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಶಿಯೋಮಿ ಎಮ್‌ಐ ನೋಟ್‌ 10 ನಲ್ಲಿ 108 ಮೆಗಾಪಿಕ್ಸೆಲ್‌ ಕೆಮರಾ!

Pinterest LinkedIn Tumblr


ಹೊಸದಿಲ್ಲಿ: ಫೋನ್‌ ಯಾವುದೇ ತೆಗೆದುಕೊಳ್ಳಲಿ, ಮೊದಲು ಕೇಳುವುದು ಎಷ್ಟು ಮೆಗಾಪಿಕ್ಸೆಲ್‌ ಕೆಮರಾ? ಇಂತಹ ಪ್ರಶ್ನೆ ಕೇಳಿದವರು ಇನ್ನು ಬೆಚ್ಚಿ ಬೀಳಬೇಕು. ಅತಂಹದ್ದೊಂದು ಭರ್ಜರಿ ಮೆಗಾಪಿಕ್ಸೆಲ್‌ ಕೆಮರಾವನ್ನು ಶಿಯೋಮಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.

ಬರೋಬ್ಬರಿ 108 ಮೆಗಾಪಿಕ್ಸೆಲ್‌ನ ಪ್ರೈಮರಿ ಕೆಮರಾ ಇರುವ ಎಮ್‌ಐ ನೋಟ್‌ 10 ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದರ ಅಂದಾಜು ಬೆಲೆ ಯುರೋಪ್‌ನಲ್ಲಿ ಸುಮಾರು 46 ಸಾವಿರ ರೂ. ಇರಲಿದ್ದು, ಭಾರತದಲ್ಲೂ ಇಷ್ಟೇ ಬೆಲೆ ಇರಲಿದೆಯೇ ಎಂಬುದು ಖಚಿತಗೊಂಡಿಲ್ಲ.

108 ಮೆಗಾಪಿಕ್ಸೆಲ್‌ನ ಕೆಮರಾ ಇರುವ ಫೋನ್‌ನಲ್ಲಿ ಫೀಚರ್ ಕೂಡ ಭರ್ಜರಿಯಾಗಿಯೇ ಇದೆ. 6.47 ಇಂಚಿನ ಡಿಸ್ಪೆ$Éà, 32 ಮೆಗಾ ಪಿಕ್ಸೆಲ್‌ನ ಕೆಮರಾ, ಹಿಂಭಾಗದ ಕೆಮರಾದೊಂದಿಗೆ 20 ಮೆಗಾ ಪಿಕ್ಸೆಲಿನ ವೈಡ್‌ ಆ್ಯಂಗಲ್‌ ಕೆಮರಾ, 12 ಮೆಗಾಪಿಕ್ಸೆಲಿನ ಟೆಲಿಫೋಟೋ ಸೆನ್ಸರ್‌, 5 ಮೆಗಾಪಿಕ್ಸೆಲಿನ ಸೆಕೆಂಡರಿ ಟೆಲಿಫೋಟೋ ಸೆನ್ಸರ್‌, 2 ಮೆಗಾಪಿಕ್ಸೆಲಿನ ಮ್ಯಾಕ್ರೋ ಕೆಮರಾವೂ ಇದೆ. ಇವುಗಳೊಂದಿಗೆ 730 ಜಿ ಜಿಪ್‌ಸೆಟ್‌ನ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌, 8 ಜಿಬಿ ರ್ಯಾಮ್‌, 256 ಜಿಬಿ ಸ್ಟೋರೇಜ್‌, 5260 ಎಂಎಎಚ್‌ ಬ್ಯಾಟರಿ, ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಇರಲಿದೆ.

Comments are closed.