ಮನೋರಂಜನೆ

ಮದುವೆಯಲ್ಲೂ ಗಡ್ಡ ಬಿಟ್ಟ ಧ್ರುವ ಸರ್ಜಾ; ಪತ್ನಿ ಅಚ್ಚರಿಯ ಹೇಳಿಕೆ

Pinterest LinkedIn Tumblr


ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳಿಗೆಂದೇ ಔತಣಕೂಟ ಕೂಡ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ನವಜೋಡಿ ಮದುವೆ ಸಂಭ್ರಮದ ಬಗ್ಗೆ ಮಾತನಾಡಿದೆ.

“ಅಭಿಮಾನಿಗಳನ್ನು ನೋಡಿ ತುಂಬ ಖುಷಿಯಾಯ್ತು. ಇದೇ ಮೊದಲ ಬಾರಿಗೆ ಈ ರೀತಿಯ ಅಭಿಮಾನಿಗಳನ್ನು ನೋಡುತ್ತಿರೋದು. ಬಿಸಿಲಲ್ಲಿ ನಿಂತು ಕೇವಲ ಒಂದೇ ಒಂದು ಸೆಲ್ಫಿ ಕೇಳ್ತಿದ್ದಾರೆ. ಒಂದು ಸ್ಟಾರ್‌ ಮದುವೆಯಾಗುತ್ತಿದ್ದರೆ ನನಗೆ ಸ್ಟಾರ್ ಪತ್ನಿ ಎಂಬ ಭಾವ ಬರುತ್ತಿತ್ತು. ಆದರೆ ನಾನು ಧ್ರುವನನ್ನು ಚಿಕ್ಕ ವಯಸ್ಸಿನಲಿಂದಲೂ ನೋಡ್ತಿರೋದರಿಂದ ಒಂದು ಕಂಫರ್ಟ್‌ ಜೋನ್ ಬೆಳೆದುಕೊಂಡು ಬಂದಿದೆ, ದೇವರ ದಯೆ. ನನಗೆ ಸ್ಟಾರ್ ಪತ್ನಿ ಎಂಬ ಭಾವ ಬರೋದು ಬೇಡ. ಸಿನಿಮಾಕ್ಕೋಸ್ಕರ ಧ್ರುವ ಗಡ್ಡ ಬಿಟ್ಟಿರೋದು. ಸಿನಿಮಾವೇ ಜೀವನ, ಅದೇ ಎಲ್ಲ. ಸಿನಿಮಾ ಬಿಟ್ಟು, ಗಡ್ಡ ತೆಗೆದು ನಾವು ಮದುವೆಯಾಗಬೇಕಾಗಿದ್ದೇನಿಲ್ಲ. ಅವರು ಹೇಗಿದ್ದರೂ ನನಗೆ ಇಷ್ಟ. ಮನೆಯವರೆಲ್ಲರೂ ತುಂಬ ಖುಷಿಯಾಗಿದ್ದಾರೆ. ಒಳ್ಳೆ ಕುಟುಂಬಕ್ಕೆ ನನ್ನನ್ನು ಕೊಟ್ಟಿದ್ದಕ್ಕೆ ಅವರೆಲ್ಲರೂ ಸಂತಸದಿಂದಿದ್ದಾರೆ” ಎಂದು ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಹೇಳಿದ್ದಾರೆ.

“ನಾನು ಸ್ಟಾರ್ ಆಗಿದ್ದರೂ ಕೂಡ ಪ್ರೇರಣಾ ಪಾಲಿಗೆ ನಾನು ಧ್ರುವ ಅಷ್ಟೇ. ಗಡ್ಡ ಸ್ವಲ್ಪ ಟ್ರಿಮ್ ಮಾಡಿಸಿದೀನಿ. ಆದರೆ ಕಾಣಿಸ್ತಿಲ್ಲ. ಎಲ್ಲರೂ ಮದುವೆಗೆ ಬಂದು ನಮಗೆ ಹಾರೈಸಿದ್ದಾರೆ, ಶುಭಾಶಯ ತಿಳಿಸಿದ್ದಾರೆ. ನಮಗೆ ಉಡುಗೊರೆ ಕೊಡೋಕೆ, ಮದುವೆಗೆ ಬರೋಕೆ ಟೈಮ್ ಕೊಟ್ಟಿದ್ದಾರೆ. ತುಂಬ ಖುಷಿಯಿದೆ. ಪುಣ್ಯ ಮಾಡಿದೀವಿ ಇಂಥ ಪ್ರೀತಿ ಪಡೆಯೋಕೆ. ಸಿನಿಮಾ ನಂತರ ಹನಿಮೂನ್‌ಗೆ ಹೋಗುವ ಪ್ಲ್ಯಾನ್ ಮಾಡ್ತೀವಿ.” ಎಂದು ಧ್ರುವ ಸರ್ಜಾ ಹೇಳಿದ್ದಾರೆ.

Comments are closed.