ಮನೋರಂಜನೆ

ದೃಢ ಶರೀರಕ್ಕಾಗಿ ಅದನ್ನು ಬಳಸಬೇಡಿ ಎಂದ ಸಲ್ಮಾನ್ ಖಾನ್

Pinterest LinkedIn Tumblr


ಬಹಳಷ್ಟು ಫಿಟ್‌ನೆಸ್ ಪ್ರಿಯರಿಗೆ ಬಾಲಿವುಡ್ ಆಜಾನುಬಾಹು ಸಲ್ಮಾನ್ ಖಾನ್ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಸಲ್ಮಾನ್ ಫಿಟ್‍ನೆಸ್ ಪ್ರಿಯರಿಗೆ ಒಂದು ಕಿವಿಮಾತನ್ನೂ ಹೇಳಿದ್ದಾರೆ. ದಯವಿಟ್ಟು ದೇಹವನ್ನು ಹುರಿಗೊಳಿಸಲು ಸ್ಟೀರಾಯ್ಡ್ ಬಳಸಬೇಡಿ ಎಂದು ಹೇಳಿದ್ದಾರೆ.

ಇವನ್ನು ಬಳಸುವುದರಿಂದ ಲಿವರ್, ಕಿಡ್ನಿಗಳು ಹಾಳಾಗುತ್ತವೆ. ಅಷ್ಟೇ ಅಲ್ಲದೆ ಇದು ದೇಹದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಮುಂಬಯಿನಲ್ಲಿ ನಡೆದ ಬೀಯಿಂಗ್ ಸ್ಟ್ರಾಂಗ್ ಫಿಟ್‍ನೆಸ್ ಎಕ್ವಿಪ್‌ಮೆಂಟ್ ಕಾರ್ಯಕ್ರಮವಲ್ಲಿ ಪಾಲ್ಗೊಂಡ ಸಲ್ಮಾನ್ ಮಾಧ್ಯಮಗಳ ಜತೆಗೆ ಮಾತನಾಡುತ್ತಾ ಇಂದು ಸ್ಟೀರಾಯ್ಡ್ ತೆಗೆದುಕೊಳ್ಳುವ ಟ್ರೆಂಟ್ ಚಾಲ್ತಿಯಲ್ಲಿದೆ ಎಂದಿದ್ದಾರೆ.

ಸ್ಟೀರಾಯ್ಡನ್ನು ಯಾರೂ ಬಳಸಬೇಡಿ. ಈ ವಿಧಾನ ಸರಿಯಲ್ಲ. ಇದು ದೇಹಕ್ಕೆ ಹಾನಿಕಾರಕ. ಸ್ಟೀರಾಯ್ಡ್ ತೆಗೆದುಕೊಂಡು ವ್ಯಾಯಾಮ ಮಾಡುತ್ತಿರುವವರು ಹೃದಯಾಘಾತದಿಂದ ಮೃತಪಟ್ಟ ಹಲವಾರು ನಿದರ್ಶನಗಳೂ ಇವೆ. ಫಿಟ್‍ನೆಸ್, ಆರೋಗ್ಯಕ್ಕಾಗಿ ಸಮಯ ಸಿಕ್ಕಾಗಲೆಲ್ಲಾ ವರ್ಕೌಟ್ ಮಾಡಬೇಕು. ನಾನು ಲಂಚ್ ಬ್ರೇಕ್ ಬಳಿಕ ಅಥವಾ ರಾತ್ರಿ ಹೊತ್ತು ಸಮಯ ಸಿಕ್ಕಾಗ ವ್ಯಾಯಾಮ ಮಾಡುತ್ತೇನೆ ಎಂದಿದ್ದಾರೆ ಸಲ್ಮಾನ್ ಖಾನ್.

ಸದ್ಯಕ್ಕೆ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಖಳನಟನಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದ್ದು ಒಂದು ಕಡೆ ಕಿಚ್ಚನ ಅಭಿಮಾನಿಗಳು ಇನ್ನೊಂದು ಕಡೆ ಸಲ್ಲು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ.

ಒಟ್ಟು 5400ಕ್ಕೂ ಅಧಿಕ ಪರದೆಗಳ ಮೇಲೆ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ ಎನ್ನಲಾಗಿದೆ. ಇಷ್ಟು ದಿನ ಸಲ್ಮಾನ್ ಸಿನಿಮಾಗಳು ಕೇವಲ ಹಿಂದಿ ಭಾಷೆಯಲ್ಲಷ್ಟೇ ಬರುತ್ತಿದ್ದವು. ಆದರೆ ಈ ಬಾರಿ ದಕ್ಷಿಣದ ಮೂರು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಬರೋಬ್ಬರಿ 200ರಿಂದ 250 ಥಿಯೇಟರ್‌ಗಳಲ್ಲಿ ‘ದಬಂಗ್ 3’ ಸಿನಿಮಾ ರಿಲೀಸ್ ಆಗುತ್ತಿದೆ.

Comments are closed.