ಅಂತರಾಷ್ಟ್ರೀಯ

ಇದನ್ನು ನೋಡಿದ ಬಳಿಕ ಧೂಮಪಾನ ಮಾಡುವ ಧೈರ್ಯ ನಿಮಗಿದೆಯೇ?: ಚೀನಾ ವೈದ್ಯರ ಸವಾಲು

Pinterest LinkedIn Tumblr


ಸಿಗರೇಟ್​ ಸೇದಿದರೆ ನಿಮ್ಮ ಶ್ವಾಸಕೋಶದಲ್ಲಿ ಯಾವ ಮಟ್ಟದ ಟಾರ್​ ಸಿಗಬಹುದು ಎಂಬ ಜಾಹೀರಾತನ್ನು ಸಿನಿಮಾ ವೀಕ್ಷಣೆಗೂ ಮುನ್ನ ನೋಡಿರುವುದು ಸಾಮಾನ್ಯ. ಆದರೆ, ನಿಜ ಜೀವನದಲ್ಲಿ ಧೂಮಪಾನ ಸೇವಿಸುವ ವ್ಯಕ್ತಿಯೊಬ್ಬನ ಶ್ವಾಸಕೋಶ ಯಾವ ಮಟ್ಟಕ್ಕೆ ಹಾಳಾಗಿ, ಕಪ್ಪಾಗಿರುತ್ತದೆ ಎಂಬುದನ್ನು ಚೀನಾ ವೈದ್ಯರು ತೋರಿಸಿದ್ದಾರೆ.

ಚೀನಾದ 52 ವರ್ಷದ ವ್ಯಕ್ತಿಯೊಬ್ಬ ಕಳೆದ 30 ವರ್ಷದಿಂದ ಚೈನ್​ ಸ್ಮೋಕಿಂಗ್​ ವ್ಯಸನಕ್ಕೆ ಗುರಿಯಾಗಿದ್ದ. ಈತ ಸಾವನ್ನಪ್ಪಿದ್ದು, ಆತನ ದೇಹವನ್ನು ದಾನ ಮಾಡಿದ್ದಾನೆ. ಮಿದುಳು ನಿಷ್ಕ್ರಿಯಗೊಂಡ ಈ ವ್ಯಕ್ತಿಯನ್ನು ಸಿಟಿ ಸ್ಕ್ಯೂನ್​ಗೆ ಒಳಪಡಿಸದ ಹಿನ್ನೆಲೆ ಆಸ್ಪತ್ರೆಯವರು ದೇಹ ಪಡೆದಿದ್ದಾರೆ.

ದೇಹ ದಾನದ ಬಳಿಕ ಆತನ ದೇಹದ ಅಂಗಾಂಗ ಪಡೆಯುವಾಗ ಆತನ ಶ್ವಾಸಕೋಶ ನೋಡಿ ವೈದ್ಯರು ಬೆರಗಾಗಿದ್ದಾರೆ. ಗುಲಾಬಿ ಬಣ್ಣದಲ್ಲಿರಬೇಕಾದ ಶ್ವಾಸಕೋಶ ಕಪ್ಪು ಬಣ್ಣದಲ್ಲಿದ್ದು, ಅನೇಕ ರಂಧ್ರಗಳು ಕೂಡ ಅದರಲ್ಲಿ ಪತ್ತೆಯಾಗಿದೆ.

ಜಿಯಾಂಗ್ಸುವಿನ ವುಕ್ಸಿ ಪೀಪಲ್ಸ್​ ಆಸ್ಪತ್ರೆಯ ವೈದ್ಯರು ತಕ್ಷಣಕ್ಕೆ ಆತನ ಶ್ವಾಸಕೋಶದ ವಿಡಿಯೋವನ್ನು ಶೇರ್​ ಮಾಡಿದ್ದು, ಧೂಮಪಾನ ವ್ಯಸನಿಗಳಿಗೆ ಎಚ್ಚರಿಕೆ ರವಾನೆ ಮಾಡಿದ್ದಾರೆ. ಅಲ್ಲದೇ ಧೂಮಪಾನ ತ್ಯಜಿಸಿ ಎಂದು ಹ್ಯಾಷ್​ಟ್ಯಾಗ್​ ಬಳಸಿ ಎಂದು ಕೂಡ ಮನವಿ ಮಾಡಿದ್ದಾರೆ.

ಚೀನಾದಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಿದ್ದು, ಈ ಚಿತ್ರವನ್ನು ನೋಡಿದ ಮೇಲಾದರೂ ನಿಮ್ಮ ಶ್ವಾಸಕೋಶದ ಮೇಲೆ ಕಾಳಜಿ ಇರಲಿ. ದೇಶದ ಅನೇಕ ಜನರ ಶ್ವಾಸಕೋಶ ಇದೇ ರೀತಿ ಇರಬಹುದು ಎಂದಿದ್ದಾರೆ.

ಅಲ್ಲದೇ ದೇಹ ದಾನ ಮಾಡಿದ ಈತನ ದೇಹವನ್ನು ತಿರಸ್ಕಾರ ಮಾಡಲಾಗಿದ್ದು, ಇದೇ ರೀತಿ ನೀವು ಹೆಚ್ಚು ಧೂಮಪಾನ ಮಾಡುತ್ತಿದ್ದರೆ, ನಿಮ್ಮ ಶ್ವಾಸಕೋಶವನ್ನು ನಾವು ಸ್ವೀಕರಿಸುವುದಿಲ್ಲ, ದೇಹದಾನ ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಕೂಡ ಎಚ್ಚರವಹಿಸಿ. ಈ ಚಿತ್ರಣ ನೋಡಿದ ಬಳಿಕವೂ ಧೂಮಪಾನ ಮಾಡಲು ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

Comments are closed.