ಮನೋರಂಜನೆ

ಕನ್ನಡದ ಬೆಲ್ ಬಾಟಂ ಹಿಂದಿಯಲ್ಲಿ ರಿಮೇಕ್: ಅಕ್ಷಯ್ ಕುಮಾರ್ ನಾಯಕ

Pinterest LinkedIn Tumblr


ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಕಾಂಬಿನೇಷನ್‌ನ ‘ಬೆಲ್‌ ಬಾಟಮ್‌’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌. ಈ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿದ್ದು, ಅಕ್ಷಯ್‌ ಕುಮಾರ್‌ ನಾಯಕನಾಗಿ ನಟಿಸಲಿದ್ದಾರೆ ಎಂದು ಟೈಮ್ಸ್‌ ಸಮೂಹದ ಮನಂಜನಾ ವಾಹಿನಿ ‘ಜೂಮ್‌’ ವರದಿ ಮಾಡಿದೆ. ರಂಜಿತ್‌ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ನಿಖಿಲ್‌ ಅಡ್ವಾಣಿ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಅಕ್ಷಯ್‌ ಕುಮಾರ್‌ ಜತೆ ಮಾತುಕತೆ ಕೂಡ ಆಗಿದೆ ಎಂದು ಗೊತ್ತಾಗಿದೆ.

ಈ ಕುರಿತು ಮಾತನಾಡಿದ ರಿಷಭ್‌, ‘ಬೆಲ್‌ ಬಾಟಂ ಸಿನಿಮಾ ಹಿಂದಿ ಮತ್ತು ತೆಲುಗು ರಿಮೇಕ್‌ ರೈಟ್ಸ್‌ ಸೇಲ್‌ ಆಗಿರುವ ವಿಷಯ ಗೊತ್ತು. ಅಕ್ಷಯ್‌ ಕುಮಾರ್‌ ನಟಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅಂತಹ ಹೆಸರಾಂತ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಅದೊಂದು ಸಂಭ್ರಮದ ವಿಷಯ. ನಮ್ಮ ಕನ್ನಡ ಚಿತ್ರಕ್ಕೆ ಸಿಕ್ಕ ಗೌರವ. ನಾನು ಮಾಡಿದ ಪಾತ್ರದಲ್ಲಿಅವರನ್ನು ನೋಡಲು ನಾನೂ ಅಷ್ಟೇ ಕಾತುರನಾಗಿದ್ದೇನೆ’ ಎಂದಿದ್ದಾರೆ.

‘ಬೆಲ್‌ ಬಾಟಂ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿರುವ ವಿಷಯ ಕೇಳಿ ಖುಷಿ ಆಯಿತು. ನಾಯಕನ ಪಾತ್ರದಲ್ಲಿಅಕ್ಷಯ್‌ ಕುಮಾರ್‌ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಇನ್ನೂ ಅಚ್ಚರಿ ತಂದಿದೆ. ನಾಯಕಿಯಾಗಿ ಯಾರು ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ನನ್ನಲ್ಲಿದೆ’ ಎನ್ನುತ್ತಾರೆ ಹರಿಪ್ರಿಯಾ.

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಬಾಕ್ಸಾೕಸ್‌ನಲ್ಲೂ ಭರ್ಜರಿ ಸೌಂಡ್‌ ಮಾಡಿತ್ತು. ಶತದಿನದ ಪ್ರದರ್ಶನ ಕೂಡ ಕಂಡಿತ್ತು. ಈಗ ಸದ್ಯದಲ್ಲೇ ಹಿಂದಿಯಲ್ಲೂ ಸೆಟ್ಟೇರಲಿದೆ.

Comments are closed.