ಕ್ರೀಡೆ

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಶಿಫಾಲಿ ವರ್ಮಾ

Pinterest LinkedIn Tumblr


ಸೈಂಟ್ ಲೂಸಿಯಾ: ಭಾರತದ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ನಲ್ಲಿ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಗೆದ್ದು ಬೀಗಿದೆ. ಈ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಶಿಫಾಲಿ ವರ್ಮಾ ಹೊಸ ದಾಖಲೆಯೊಂದನ್ನು ಬರೆದರು.

ಭಾರತದ ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮಾ ಇಂದು ನಡೆದ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ73 ರನ್ ಚಚ್ಚಿದರು. ಇದು ಆರು ಬೌಂಡರಿ ಮತ್ತು ಬಾಲ್ಕು ಸಿಕ್ಸರ್ ಗಳು ಒಳಗೊಂಡಿತ್ತು. ಈ ಸಾಧನೆಗಾಗಿ ವರ್ಮಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು.

ಆದರೆ ಶಿಫಾಲಿಯ ಈ ಇನ್ನಿಂಗ್ಸ್ 30 ವರ್ಷ ಹಳೆಯ ದಾಖಲೆಯೊಂದನ್ನು ಅಳಿಸಿ ಹಾಕಿದೆ. ಅದೂ ಕೂಡಾ ಸಚಿನ್ ತಂಡೂಲ್ಕರ್ ಅವರ ದಾಖಲೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅರ್ಧಶತಕ ಬಾರಿಸಿದ ಅತೀ ಕಿರಿಯ ಭಾರತೀಯ ಎಂಬ ದಾಖಲೆ ಈಗ ಶಿಫಾಲಿ ವರ್ಮಾ ಹೆಸರಲ್ಲಿದೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿತ್ತು. ಸಚಿನ್ 16 ವರ್ಷ 214ದಿನವಿರುವಾಗ ಅರ್ಧಶತಕ ಬಾರಿಸಿದ್ದರೆ, ಶಿಫಾಲಿಗಿನ್ನು ಕೇವಲ 15 ವರ್ಷ 285 ದಿನ ಪ್ರಾಯ.

Comments are closed.