ಮನೋರಂಜನೆ

ಬೋಲ್ಡ್ ಬ್ಯೂಟಿ ನಟಿಗೆ ಪೋರ್ನ್ ನಾಯಕಿ ಪಟ್ಟ….!

Pinterest LinkedIn Tumblr


ಆರ್​ಎಕ್ಸ್​ 100 ಸಿನಿಮಾ ಮೂಲಕ ಟಾಲಿವುಡ್​ಗೆ ಚಿರಪರಿಚಿತರಾಗಿರುವ ಸ್ಟಾರ್ ನಟಿ, ಬೋಲ್ಡ್ ಬ್ಯೂಟಿ ಪಾಯಲ್ ರಜಪೂತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ಪಂಜಾಬಿ ಸುಂದರಿ ಪಾಯಲ್ ಏನೆಂದು ಟ್ರೊಲ್​ಗೆ ಗುರಿಯಾಗಿದ್ದಾರೆ ಗೊತ್ತಾ? ಕೇಳಿದ್ರೆ ನೀವೆ ಶಾಕ್ ಆಗ್ತೀರಾ. ಪಾಯಲ್ ಟ್ರೋಲ್​ಗೆ ಗುರಿಯಾಗಲು ಮೇಜರ್​ ಕಾರಣ ಏನೆಂದು ನಾವೇಳ್ತೀವಿ ಈ ಸ್ಟೋರಿ ಓದಿ.

ಆರ್​ಎಕ್ಸ್​ 100 ಚಿತ್ರದಲ್ಲಿ ಸಖತ್ ಭೋಲ್ಡ್ ಆಗಿ ನಟಿಸಿ ಪಡ್ಡೆ ಹೈಕ್ಳ ನಿದ್ದೆಗೆಡೆಸಿರುವ ಹಾಟ್ ಡಾಲ್ ಪಾಯಲ್ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ತಾವು ಅಭಿನಯಿಸಿರುವ ಚಿತ್ರದಿಂದಲೇ ಟ್ರೋಲ್​ ಗೆ ಗುರಿಯಾಗಿದ್ದಾರೆ!

ಪಾಯಲ್, ಆರ್​ಎಕ್ಸ್​ 100 ಚಿತ್ರದ ನಂತರ ಆರ್.ಡಿ.ಎಕ್ಸ್ ಲವ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಆರ್.ಡಿ.ಎಕ್ಸ್ ಲವ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಈ ಸಿನಿಮಾದಲ್ಲೂ ಪಾಯಲ್ ಸಖತ್ ಹಾಟ್ ಆಗಿ ನಟಿಸಿದ್ದು, ಇದನ್ನ ನೋಡಿದ ನೆಟ್ಟಿಗರು ”ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ” ಎಂದು ಕಾಮೆಂಟ್ ಮಾಡುತ್ತಿದ್ದಾರಂತೆ. ಅಲ್ಲದೆ ಕೆಲ ಟ್ರೋಲ್ ಪೇಜ್ ಗಳು ಪೋರ್ನ್​ ಸ್ಟಾರ್ ಪಾಯಲ್ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇದರಿಂದ ಮನನೊಂದಿರುವ RX100 ಚಿತ್ರದ ಬ್ಯೂಟಿ ಡಾಲ್ ಪಾಯಲ್ ರಜಪೂತ್, ”ನಾನು ಮಾಡಿದ ತಪ್ಪು ಏನು, ಹಾಟ್ ಆಗಿ ನಟಿಸಿದ್ದು ತಪ್ಪಾ. ಸಿನಿಮಾ ಕಥೆ ಚೆನ್ನಾಗಿದೆ, ಅದಕ್ಕೆ ಬೇಕಾದ ರೀತಿ ಅಭಿನಯ ಮಾಡಿದ್ದೀನಿ. ಅದಕ್ಕೆ ಪೋರ್ನ್ ಸ್ಟಾರ್ ಅಂದ್ರೆ ಏನು ಅರ್ಥ. ಇದು ನನಗೆ ಬೇಸರ ತರಿಸಿದೆ. ರಾತ್ರಿಯಲ್ಲ ಈ ಬಗ್ಗೆ ಯೋಚನೆ ಮಾಡಿದ್ದೀನಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದೀಗ ಪಾಯಲ್ ಟಾಲಿವುಡ್, ಕಾಲಿವುಡ್ ನಲ್ಲೂ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆರ್ ಡಿ ಎಕ್ಸ್ ಲವ್ ಚಿತ್ರದಲ್ಲೂ ಮಾದಕ ಮೈಮಾಟದಿಂದ ಮೋಡಿ ಮಾಡಲು ರೆಡಿಯಾಗಿದ್ದು, ಪಾಯಲ್ ಖಾತೆಗೆ ಮತ್ತೊಂದು ಹಿಟ್​ ಸೇರಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇನ್ನು ಈ ಚಿತ್ರದಲ್ಲಿ ಪಾಯಲ್​ ಗೆ ಜೋಡಿಯಾಗಿ ಕನ್ನಡದ ‘ಒಗ್ಗರಣೆ’ ಸಿನಿಮಾದಲ್ಲಿ ನಟಿಸಿದ ತೇಜಸ್ ಸಾಥ್ ನಿಡಿದ್ದಾರೆ.

ಶಂಕರ್ ಭಾನು ನಿರ್ದೇಶನ ಹಾಗೂ ಸಿ ಕಲ್ಯಾಣ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಆರ್ ಡಿ ಎಕ್ಸ್ ಲವ್ ಸಿನೆಮಾದ ಟ್ರೈಲರ್​ಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ನವೆಂಬರ್ ಆರ್ ಡಿ ಎಕ್ಸ್ ಲವ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

Comments are closed.