ರಾಷ್ಟ್ರೀಯ

ನಾನು ಮದುವೆಯಾಗಿದ್ದು ವಿಜ್ಞಾನಿಯನ್ನು ಎಂದು ಖುಷಿಯಾಗಿದ್ದ ಮಹಿಳೆಗೆ ಅಸಲಿಯತ್ತು ತಿಳಿದು ಶಾಕ್​!

Pinterest LinkedIn Tumblr


ನವದೆಹಲಿ: ಸಾಕಷ್ಟು ಮಹಿಳೆಯರಿಗೆ ತಾನು ಮದುವೆಯಾಗುವ ವ್ಯಕ್ತಿ ಒಳ್ಳೆಯ ಕೆಲಸದಲ್ಲಿರಬೇಕು. ಕೈತುಂಬ ಸಂಬಳ ತರಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆಸೆಗೆ ಬಿದ್ದು ಮೋಸ ಹೋಗಿರುವವರು ಸಾಕಷ್ಟು ಇದ್ದಾರೆ. ಈ ಪ್ರಕರಣದಲ್ಲಿ ಆಗಿದ್ದು ಅದೇ, ತಾನೂ ಒಬ್ಬ ವಿಜ್ಞಾನಿಯನ್ನು ಮದುವೆಯಾಗಿದ್ದೇನೆ ಅಂದುಕೊಂಡಿದ್ದ ಮಹಿಳೆಗೆ ಅಸಲಿಯತ್ತು ತಿಳಿದು ಶಾಕ್​ ಆಗಿದೆ.

ತಾನೊಬ್ಬ ಡಿಆರ್​ಡಿಯಒ ವಿಜ್ಞಾನಿ ಎಂದು ಸುಳ್ಳು ಹೇಳಿದ ವ್ಯಕ್ತಿಯನ್ನು ನಂಬಿ, ದೆಹಲಿ ಮೂಲದ ಮಹಿಳೆ ಮೋಸ ಹೋಗಿದ್ದಾಳೆ. ಇದೀಗ ಆತ ನಿರುದ್ಯೋಗಿ ಮಾತ್ರವಲ್ಲದೆ, ಈ ಹಿಂದೆಯೇ ಆತನಿಗೆ ಮದುವೆಯಾಗಿದೆ ಎಂಬುದನ್ನು ತಿಳಿದು ಶಾಕ್​ಗೆ ಒಳಗಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಆತನ ವಿರುದ್ಧ ಉದ್ಯೋಗ ಮತ್ತು ಮದುವೆ ವಿಚಾರದಲ್ಲಿ ಸುಳ್ಳು ಹೇಳಿ, ಐಡಿ ಕಾರ್ಡ್​ನ್ನು ಫೋರ್ಜರಿ ಮಾಡಿ ವಂಚಿಸಿದ ಪ್ರಕರಣ ದಾಖಲಿಸಿದ್ದಾಳೆ.

ದೂರುದಾರೆಯು ಪಿಎಚ್​ಡಿ ವಿದ್ಯಾರ್ಥಿನಿಯಾಗಿದ್ದು, ಜೀತೆಂದರ್​ ಸಿಂಗ್​ ಎಂಬುವವರನ್ನು ಮದುವೆಯಾಗಿದ್ದಳು. ಡಿಆರ್​ಡಿಒ ವಿಜ್ಞಾನಿ ಎಂದು ಪರಿಚಯ ಮಾಡಿಕೊಂಡಿದ್ದ ಆರೋಪಿ, ಬೇಗನೇ ಮದುವೆಯಾಗಿದ್ದ. ಆದರೆ, ಸತ್ಯವನ್ನು ಎಲ್ಲಿಯವರೆಗೆ ಮರೆಮಾಚಲು ಸಾಧ್ಯ. ಆತ ನಿರುದ್ಯೋಗಿ ಹಾಗೂ ಆಗಲೇ ಮದುವೆಯಾಗಿದೆ ಎಂಬುದು ಬಹುಬೇಗನೆ ಆಕೆಗೆ ತಿಳಿಯಿತು.

ಸದ್ಯ ಆರೋಪಿ ವಿರುದ್ಧ ದೆಹಲಿಯ ದ್ವಾರಕದ ನಾರ್ಥ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸುವ ಯತ್ನ ನಡೆದಿದ್ದು, ತನಿಖೆ ಮುಂದುವರಿದಿದೆ.

Comments are closed.