
ಪ್ರಭಾಸ್ ನಟನೆಯ ‘ಬಾಹುಬಲಿ 2‘ ಚಿತ್ರ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಇದಾದ ಎರಡು ವರ್ಷಗಳ ಬಳಿಕ ತೆರೆ ಮೇಲೆ ಬಂದ ಪ್ರಭಾಸ್ ಇತ್ತೀಚೆಗೆ ‘ಸಾಹೋ‘ ಚಿತ್ರವನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಮುಖ್ಯವಾಗಿ ಸಾಹೋ ಕರ್ನಾಟಕದಲ್ಲಿ ಎಡವಿದ್ದು, ಇದರ ಪರಿಣಾಮ ದರ್ಶನ್ ತೂಗುದೀಪ್ ಅವರ ಕುರುಕ್ಷೇತ್ರ ಬುಕ್ ಮೈಶೋ ರೇಟಿಂಗ್ನಲ್ಲಿ ಹೆಚ್ಚಿದೆ.
ಡಿಬಾಸ್ ನಟನೆಯ ಕುರುಕ್ಷೇತ್ರ ಸಿನಿಮಾಗೆ ಬುಕ್ ಮೈಶೋನಲ್ಲಿ 84% ರೇಟಿಂಗ್ ದೊರೆತರೆ, ಸಾಹೋ ಸಿನಿಮಾಗೆ 72% ರೇಟಿಂಗ್ ದೊರೆತಿದೆ. ಇವೆರಡು ಚಿತ್ರಗಳನ್ನು ವೀಕ್ಷಿಸಿದ ಜನರು ‘ಸಾಹೋ‘ಗಿಂತ ‘ಕುರುಕ್ಷೇತ್ರ‘ ಸಿನಿಮಾವನ್ನು ಹೆಚ್ಚು ಇಷ್ಟ ಪಟ್ಟಿರುವುದು ಕಂಡು ಬಂದಿದೆ.
ಸಾಹೋ ಸಿನಿಮಾವು ಅನೇಕರು ಇಷ್ಟಪಟ್ಟರೆ, ಇನ್ನೂ ಕೆಲವರು ಸಿನಿಮಾ ನೋಡಿ ಸಮಯ ವ್ಯರ್ಥ ಎಂದು ಬರೆದುಕೊಂಡಿದ್ದಾರೆ. ಇದರ ಮಧ್ಯೆ ಸಾಹೋ ಗಲ್ಲಾ ಪೆಟ್ಟಿಗೆಯಲ್ಲಿ ಆರ್ಭಟಿಸಿದ್ದು ಸುಳ್ಳಲ್ಲ. 5 ದಿನಗಳಲ್ಲಿ 350 ಕೋಟಿ ಗಳಿಸಿದ ‘ಸಾಹೋ‘ ಸಿನಿಮಾ ಹಿಂದಿಯಲ್ಲಿ ಹೆಚ್ಚು ಕಲೆಕ್ಷನ್ ಪಡೆದಿದೆ. ಕರ್ನಾಟಕದಲ್ಲೂ ‘ಸಾಹೋ‘ ಅಬ್ಬರದಿಂದ ಉತ್ತಮ ಕಲೆಕ್ಷನ್ ಆಗಿದೆ.
ಚಾಲೆಂಜಿಂಗ್ ಸ್ಟಾರ್ ಅವರ ಕುರುಕ್ಷೇತ್ರ ಸಿನಿಮಾವು ಹಿಂದಿಯಲ್ಲಿ ತೆರೆ ಕಾಣಬೇಕಿದೆ. ಈಗಾಗಲೇ ಕನ್ನಡ, ಮಲೆಯಾಲಂ ತೆಲುಗು, ತಮಿಳು ಬಿಡುಗಡೆಯಾದ ಸಿನಿಮಾವನ್ನು ಕಾಲಿವುಡ್ ಮತ್ತು ಟಾಲಿವುಡ್ ಪ್ರೇಕ್ಷಕರು ಮೆಚ್ಚಿದ್ದಾರೆ. ಇನ್ನು ಹಿಂದಿಯಲ್ಲಿ ಬಿಡುಗಡೆಯಾಗಲು ಕುರುಕ್ಷೇತ್ರ ಸಜ್ಜಾಗಿದೆ.
‘ಸಾಹೋ‘ ಚಿತ್ರ ಕಲೆಕ್ಷನ್ ಮೂಲದ ಗೆದ್ದಿದ್ದರು ಅಭಿಮಾನಿಗಳ ಮನಸ್ಸಿಗೆ ಅಷ್ಟೊಂದು ಹಿಡಿಸಿಲ್ಲ. ಆದರೆ ಬುಕ್ ಮೈ ಶೋದಲ್ಲಿ ಪ್ರಭಾಸ್ ಸಾಹೋಗಿಂತ ಡಿ ಬಾಸ್ ಅವರ ‘ಕುರುಕ್ಷೇತ್ರ‘ಕ್ಕೆ ಹೆಚ್ಚು.
Comments are closed.