ಕರ್ನಾಟಕ

ಲಕ್ಷ್ಮಣ ಸವದಿ ಬ್ಲೂ ಫಿಲಂ ನೋಡಿದ್ದು ದೇಶದ್ರೋಹವಲ್ಲ: ಸಚಿವ ಮಾಧುಸ್ವಾಮಿ

Pinterest LinkedIn Tumblr


ಬೆಂಗಳೂರು: ವಿಧಾನಸೌಧದಲ್ಲಿ ಮೊಬೈಲ್ ನಲ್ಲಿ ಬ್ಲೂ ಫಿಲಂ ನೋಡಿದ್ದು ದೇಶದ್ರೋಹದ ಕೆಲಸ ಅಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಡಿಸಿಎಂ ಲಕ್ಷ್ಮಣ ಸವದಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದು, ಬಳಿಕ ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಲಾಗಿತ್ತು. ಏತನ್ಮಧ್ಯೆ ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದ್ದ ವ್ಯಕ್ತಿಗಳಿಗೆ ಬಿಜೆಪಿ ಮಣೆ ಹಾಕಿದೆ ಎಂದು ಆರೋಪ ಕೇಳಿಬಂದಿತ್ತು.

ಶುಕ್ರವಾರ ಈ ಕುರಿತು ಸುದ್ದಿಗಾರರು ಮಾಧುಸ್ವಾಮಿ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿದ್ದು ಅಂತ ದೊಡ್ಡ ತಪ್ಪೇನಲ್ಲ, ಅದನ್ನು ದೇಶದ್ರೋಹ ಅಂತ ಭಾವಿಸಲ್ಲ. ಏನೋ ಆಕಸ್ಮಿಕವಾಗಿ ನೋಡಿದ್ದಾರೆ ಎಂದು ಹೇಳುವ ಮೂಲಕ ಸವದಿಯನ್ನು ಸಮರ್ಥಿಸಿಕೊಂಡರು.

Comments are closed.