ಮನೋರಂಜನೆ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರ ಬೆಡ್‍ರೂಂ ರಹಸ್ಯ ಬಯಲು!

Pinterest LinkedIn Tumblr


ಬಾಲಿವುಡ್ ನ ಮಾದಕ ಬೆಡಗಿ ಪ್ರಿಯಾಂಕಾ ಚೋಪ್ರಾ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಪಬ್ಲಿಕ್ ನಲ್ಲಿ ಸ್ಮೋಕ್ ಮಾಡಿ ಟ್ರೋಲ್ ಆಗಿದ್ದ ಪಿಗ್ಗಿ ಬಳಿಕ, ಅದ್ದೂರಿ ಹುಟ್ಟುಹಬ್ಬ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ, ಇದೀಗ ಮದುವೆಯಾಗಿ 9 ತಿಂಗಳ ಬಳಿಕ ತಮ್ಮ ಬೆಡ್‍ರೂಂ ಸೀಕ್ರೆಟ್ ರಿವೀಲ್ ಮಾಡಿರುವ ಪ್ರಿಯಾಂಕಾ ಮತ್ತೆ ಸೋಷಿಯಲ್​ ಮೀಡಿಯಾದ ಹಾಟ್ ಟಾಪಿಕ್​.

ಹೌದು ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಅಮೆರಿಕದ ಖ್ಯಾತ ಗಾಯಕ ನಿಕ್ ಜೋನಸ್ ಜೊತೆ ಹಸೆಮಣೆ ಏರಿದ್ದರು.ಇನ್ನು ತಮ್ಮ ಸುಖ ಸಂಸಾರ ಹೇಗೆ ಇದೆ ಎಂಬುದನ್ನು ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಪಿಗ್ಗಿ ತಮ್ಮ ಬೆಡ್ ರೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ನಾನು ಮಲಗಿ ಎದ್ದ ಮೇಲೆ ನಿಕ್ ನನ್ನ ಮುಖ ನೋಡಲು ಬಯಸುತ್ತಾರೆ. ಮತ್ತು ನಾನು ಎದ್ದಾಗ ನನ್ನ ಕಣ್ಣುಗಳು ಭಾರವಾಗಿರುತ್ತದೆ. ಆದರೆ ಆ ಕಣ್ಣುಗಳು ನಿಕ್ ಗೆ ಇಷ್ಟವಾಗುತ್ತದೆ. ನನಗೆ ಇದು ವಿಚಿತ್ರ ಎನಿಸಿದೆ. ಮತ್ತೆ ನಾನು ಅವರಿಗೆ ನನ್ನನ್ನು ನೋಡಲು ಅವಕಾಶ ನೀಡುತ್ತೇನೆ ಎಂದು ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಇನ್ನು ಹಿಂದೆ ಕೂಡ ಯೂಟ್ಯೂಬ್‌ ಚಾನೆಲ್‌ವೊಂದರ ಚಾಟ್‌ ಶೋನಲ್ಲಿ ತಮ್ಮ ಈ ಬೆಡ್‌ರೂಮ್‌ ಸೀಕ್ರೆಟ್‌ ಶೇರ್‌ ಮಾಡಿದ ಅವರು ಫೇಸ್‌ಟೈಮ್‌ ಸೆಕ್ಸ್‌ ಮತ್ತು ಸೆಕ್ಸ್ಟಿಂಗ್‌ನಿಂದಾಗಿ ನಾವು ದೂರವಿದ್ದೇವೆ ಎಂದು ಅನಿಸುವುದೇ ಇಲ್ಲ ಎಂದಿದ್ದರು. ಆ ಚಾಟ್‌ಶೋ ನಿರೂಪಕರು ಪ್ರಿಯಾಂಕಾರ ಬೆಡ್‌ರೂಮ್‌ ಸೀಕ್ರೆಟ್‌ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ನೀಡಿದ ಬಿಂದಾಸ್‌ ಉತ್ತರದ ವಿಡಿಯೊ ಕ್ಲಿಪ್ಪಿಂಗ್‌ ಎಲ್ಲೆಡೆ ವೈರಲ್‌ ಆಗಿತ್ತು.

Comments are closed.