ಮನೋರಂಜನೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಶ್ರುತಿ ಹರಿಹರನ್‌; ಡಬಲ್ ಖುಷಿಯಲ್ಲಿ ಲೂಸಿಯಾ ಬೆಡಗಿ!

Pinterest LinkedIn Tumblr

ಬೆಂಗಳೂರು: ನಟ ಅರ್ಜುನ್​ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ಶ್ರುತಿ ಹರಿಹರನ್ ಇದೀಗ ಡಬಲ್‌ ಖುಷಿಯಲ್ಲಿದ್ದಾರೆ. ಒಂದೆಡೆ ವೈಯಕ್ತಿಕ ಜೀವನ, ಮತ್ತೊಂದೆಡೆ ವೃತ್ತಿ ಜೀವನ. ಎರಡರಲ್ಲೂ ಅವರಿಗೆ ಖುಷಿ ನೀಡುವ ಸಮಾಚಾರಗಳಿವೆ.

ಪರ್ಸನಲ್ ಲೈಫಿನಲ್ಲಿ ಶ್ರುತಿ ತಾಯಿಯಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೊಂದೆಡೆ ಇದೇ ವೇಳೆ ಶ್ರುತಿ ಅಭಿನಯದ ನಾತಿಚರಾಮಿ ಚಿತ್ರ, 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅದರಲ್ಲೂ ಶ್ರುತಿ ಹರಿಹರನ್ ಅಭಿನಯಕ್ಕೆ ನಿರ್ಣಾಯಕರ ವಿಶೇಷ ಪ್ರಶಸ್ತಿ ಲಭ್ಯವಾಗಿದ್ದು, ಭಾರಿ ಸಂತಸಕ್ಕೆ ಕಾರಣವಾಗಿದೆ.

ಈಗ ನಾನು ಡಬಲ್‌ ಸಂಭ್ರಮದಲ್ಲಿದ್ದೇನೆ. ಏಕೆಂದರೆ ನಾನು ಮತ್ತು ನನ್ನ ಪತಿ ರಾಮ್‌ ಹೆಣ್ಣು ಮಗುವನ್ನು ಪಡೆದಿದ್ದೇವೆ. ಜು. 26ರಂದು ನನ್ನ ಮಗಳು ಜನಿಸಿದಳು. ಬಹಳಷ್ಟು ಸಂತೋಷ ಮತ್ತು ಕೆಲಸವಿದೆ. ಇಲ್ಲಿಯವರೆಗೂ ನಾನು ತಾಯಂದಿರು ಮತ್ತು ಮಾತೃತ್ವವನ್ನು ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಆದರೆ ಈಗ ನಾನು ಅದನ್ನು ಹೆಚ್ಚಾಗಿ ಪ್ರಶಂಸಿಸುತ್ತೇನೆ ಎನ್ನುತ್ತಾರೆ ಶ್ರುತಿ.

ಮೀಟೂ ಆರೋಪದ ಬಳಿಕ ಕಾಣೆಯಾಗಿದ್ದ ಶ್ರುತಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತಾನು ಗರ್ಭಿಣಿಯಾಗಿರುವ ಫೋಟೊವೊಂದನ್ನು ಅಪ್​ಲೋಡ್​ ಮಾಡಿದ್ದರು. ಜೀವನ ನಿನ್ನೊಳಗೆ ಬಡಿದುಕೊಳ್ಳುತ್ತಿದೆ ಎಂದು ಭಾಸವಾಗುತ್ತಿದೆ. ಇದೊಂದು ಹೊಸದಾದ ಪ್ರಯಾಣವಾಗಿದ್ದು, ನಿನ್ನ ನೋಡಲು ನನಗೆ ಕಾಯಲು ಆಗುತ್ತಿಲ್ಲ ಎಂದು ಹೇಳುವ ಮೂಲಕ ತಾಯಿಯಾಗುವ ನಿರೀಕ್ಷೆಯಲ್ಲಿರುವುದನ್ನು ಶ್ರುತಿ ತಿಳಿಸಿದ್ದರು.

Comments are closed.