ಮನೋರಂಜನೆ

ಕುರುಕ್ಷೇತ್ರ ಬಿಡುಗಡೆಗೆ 50 ಸಾವಿರ ಲಾಡು ತಯಾರಿ

Pinterest LinkedIn Tumblr


ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಗೆ ಒಂದು ದಿನದ ಮುನ್ನವೇ ರಾಜ್ಯದೆಲ್ಲಡೆ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಕುರುಕ್ಷೇತ್ರಕ್ಕೆ ಸ್ವಾಗತ ಮಾಡಲು ಭರದ ಸಿದ್ಧತೆಗಳು ನಡೆಸಲಾಗುತ್ತಿದೆ.

ನಾಳೆ ಬಹು ನಿರೀಕ್ಷಿತ ಕುರುಕ್ಷೇತ್ರ ಸಿನೆಮಾ ಬಿಡುಗಡೆ ಹಿನ್ನೆಲೆ, ಮಂಡ್ಯದಲ್ಲಿ ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಇಂಡುವಾಳು ಸಚ್ಚಿದಾನಂದ ಹಿತೈಷಿಗಳ ಬಳಗದ ವತಿಯಿಂದ ಹಲವು ಕಾಯಕ್ರಮಗಳನ್ನು ಆಯೋಜಿಸಲಾಗಿದೆ.

ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳಿಂದ ಸಾಮೂಹಿಕ ರಕ್ತದಾನ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೂರು ಕ್ವಿಂಟಾಲ್ ಅಕ್ಕಿ ತಲುಪಿಸಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ಸಿನೆಮಾ ಪ್ರದರ್ಶನಕ್ಕೂ ಮುನ್ನ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಕೂಡ ನಡೆಯಲಿದೆ. ಈ ಮೆರವಣಿಗೆಯಲ್ಲಿ 50 ಜೋಡೆತ್ತು, 50 ಆಟೋ, 50 ಟ್ರ್ಯಾಕ್ಟರ್ ಹಾಗೂ 500 ಬೈಕ್ ಸೇರಿದಂತೆ 50 ಬಗೆಯ ಜಾನಪದ ಕಲಾತಂಡಗಳು ಭಾಗಿಯಾಗಲಿದೆ.

ಕುರುಕ್ಷೇತ್ರ ಬಿಡುಗಡೆಯಾಗಲಿರುವ ಚಿತ್ರ ಮಂದಿರದ ಮುಂಭಾಗ 50 ಅಡಿ ಉದ್ದದ ದರ್ಶನ್ ಕಟೌಟನ್ನು ನಿಲ್ಲಿಸಲಾಗುತ್ತದೆ. ವಿಶೇಷವಾಗಿ ಸಿನಿಆಮ ಪ್ರದರ್ಶನದ ವೇಳೆ ಅಭಿಮಾನಿಗಳಿಗೆ ಹಂಚಲು ಸುಮಾರು 50 ಸಾವಿರ ಲಾಡುಗಳನ್ನ ತಯಾರಿಸಲಾಗುತ್ತಿದೆ.

ಸಿನೆಮಾ ಕನ್ನಡದೊಂದಿಗೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಕೆಲ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಲಿದೆ ಎಂಬ ಮಾಹಿತಿ ಇದ್ದು, ಈಗಾಗಲೇ ಆನ್ ಲೈನ್ ನಲ್ಲಿ 4 ದಿನಗಳ ಪ್ರದರ್ಶನಗಳು ಬಹುತೇಕ ಫುಲ್ ಆಗಿದೆ. ಬಹು ತಾರಾಗಣವನ್ನು ಹೊಂದಿರುವ ಸಿನಿಮಾವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

Comments are closed.