ಕರ್ನಾಟಕ

ಸುಷ್ಮಾ ನಿಧನದ ಕುರಿತು ಪಾಕ್ ನಟಿ ವೀಣಾ ಮಲಿಕ್ ವಿವಾದಾತ್ಮಕ ಟ್ವೀಟ್

Pinterest LinkedIn Tumblr


ನವದೆಹಲಿ: ಕೇಂದ್ರ ಮಾಜಿ ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ, ಇದೇ ವೇಳೆ ಪಾಕಿಸ್ತಾನ ನಟಿಯೊಬ್ಬಳು ಸುಷ್ಮಾ ನಿಧನದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.

ಪಾಕಿಸ್ತಾನದ ನಟಿ ವೀಣಾ ಮಲಿಕ್. ಸುಷ್ಣಾ ಸ್ವರಾಜ್ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು RIH (ರೆಸ್ಟ್ ಇನ್ ಹೆಲ್) ಎಂದು ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಪಾಕಿಸ್ತಾನ ನಟಿ ವೀಣಾ ಮಲ್ಲಿಕ್ ಕನ್ನಡದ ಡರ್ಟಿ ಪಿಕ್ಚರ್ ಸಿನಿಮಾದಲ್ಲಿ ನಟಿಸಿದ್ದಾಳೆ, ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಆರ್ಟಿಕಲ್ 370 ರದ್ದತಿ ವಿಚಾರದಲ್ಲೂ, ಭಾರತದ ವಿರುದ್ದ ವೀಣಾ ಆಕ್ರೋಶ ಹೊರಹಾಕಿದ್ದರು.

‘ಇದು ಜಿನಿವಾ ಒಪ್ಪಂದದ ಉಲ್ಲಂಘನೆ, ಕಾಶ್ಮೀರವನ್ನು ಬಲಾತ್ಕಾರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ’ ಎಂದು ವೀಣಾ ಟ್ವೀಟ್ ಮಾಡಿದ್ದಳು. ಈಗ ಸುಷ್ಮಾ ವಿರುದ್ಧ ಮಾಡಿರುವ ಟ್ವೀಟಿಗೆ, ಟ್ವಿಟ್ಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ಬಂದಿದೆ.

Comments are closed.