ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಇದಕ್ಕೂ ಮೊದಲೂ ರಕ್ಷಿತ್ ಹೊಸ ಬೇಡಿಕೆಯೊಂದನ್ನು ಪ್ರೇಕ್ಷಕರ ಎದುರಿಟ್ಟಿದ್ದಾರೆ. ಹಾಗಂತ ಇದು ಸಿನಿಮಾ ವಿಚಾರಕ್ಕೆ ಸಂಬಂಧಿಸಿದಲ್ಲ. ಈ ಬಾರಿ ರಕ್ಷಿತ್ ಬೀದಿ ನಾಯಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಅವುಗಳನ್ನು ದತ್ತು ತೆಗೆದುಕೊಳ್ಳಿ ಎಂದು ಅಭಿಮಾನಿಗಳ ಬಳಿ ಕೋರಿದ್ದಾರೆ.
ರಕ್ಷಿತ್ ಈ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. “ನಾವು ನಿತ್ಯ ಸಾಕಷ್ಟು ಬೀದಿ ನಾಯಿಗಳನ್ನು ನೋಡುತ್ತೇವೆ. ಮನೆಯಲ್ಲಿ ಸಾಕುವ ವಿಚಾರ ಬಂದಾಗ ನಾವು ವಿದೇಶಿ ತಳಿಯ ನಾಯಿಯನ್ನು ತರುತ್ತೇವೆ. ಆದರೆ, ನಮ್ಮ ಹವಾಮಾನಕ್ಕೆ ಬೀದಿ ನಾಯಿಗಳು ಉತ್ತಮ. ಜೊತೆಗೆ ಇವುಗಳನ್ನು ಸಾಕಲು ಹೆಚ್ಚು ಹಣ ಖರ್ಚು ಮಾಡಬೇಕೆಂದಿಲ್ಲ. ಜೊತೆಗೆ ಈ ನಾಯಿಗಳಿಗೂ ಮನೆ, ಪ್ರೀತಿ ವಾತ್ಸಲ್ಯ ಸಿಕ್ಕಂತಾಗುತ್ತದೆ” ಎಂದಿದ್ದಾರೆ ಅವರು.
ನಾಯಿಗಳ ಬಗ್ಗೆ ಕಾಳಜಿ ವಹಿಸುವ ‘ಕೇರ್’ ಎನ್ನುವ ಸಂಸ್ಥೆ ಸ್ವತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಬಹುದು. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ರಕ್ಷಿತ್ ಅಭಿನಯದ ‘777ಚಾರ್ಲಿ’ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದೆ. ಈ ಮಧ್ಯೆ ಅವರು ಬೀದಿ ನಾಯಿಗಳ ರಕ್ಷಣೆಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Comments are closed.