ಮನೋರಂಜನೆ

ತನ್ನ ಈ ತಪ್ಪಿಗೆ ಯುವಕನಿಗೆ ಕೊನೆಗೂ ಕ್ಷಮೆಯಾಚಿಸಿದ ಸನ್ನಿಲಿಯೋನ್​!!

Pinterest LinkedIn Tumblr


ಸನ್ನಿ ಲಿಯೋನ್​ ಅಂದ್ರೆ ಯುವಕರಿಗೆ ಅಚ್ಚುಮೆಚ್ಚು. ಆದರೆ ಹುಡುಗರ ಹೃದಯದ ಈ ಹಾಟ್​ ಬೆಡಗಿಯೇ ಹುಡುಗನೊಬ್ಬನ ದುಃಖಕ್ಕೆ ಕಾರಣವಾಗಿದ್ದರು. ಆದರೆ ಕೊನೆಗೂ ಸನ್ನಿ ಆ ಹುಡುಗನ ಕ್ಷಮೆ ಕೋರಿದ್ದು, ಹೃದಯ ವೈಶ್ಯಾಲತೆ ಮೆರೆದಿದ್ದಾರೆ. ಇಷ್ಟಕ್ಕೂ ಸನ್ನಿ ಯಾಕೆ ಕ್ಷಮೆ ಕೇಳಿದ್ರು ಅಂದ್ರಾ? ಈ ಸ್ಟೋರಿ ಓದಿ.

ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಆಭಿನಯ ಅರ್ಜುನ್ ಪಟಿಯಾಲಾ ಸಿನಿಮಾದಲ್ಲಿ ಸನ್ನಿ ಲಿಯೋನ್​ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿದ್ದರು. ಆದರೆ ಅಸಲಿಗೆ ಆಗ ನಂಬರ್ ಅವರದ್ದಾಗಿರಲಿಲ್ಲ. ಬದಲಾಗಿ ದೆಹಲಿಯ ಪೀತಮಪುರದ ಯುವಕ ಪುನೀತ್ ಅಗರ್ ವಾಲ್ ಅವರದ್ದಾಗಿತ್ತು.

ಈ ಚಿತ್ರ ತೆರೆಗೆ ಬರುತ್ತಿದ್ದಂತೆ ಪುನೀತ್​ಗೆ ಗಂಟೆಯೊಂದಕ್ಕೆ 500-600 ಕರೆಗಳು ಬರಲಾರಂಭಿಸಿದ್ದು, ಟಾರ್ಚರ್ ತಾಳಲಾರದೇ ಪುನೀತ್ ಸೈಬರ್ ಕ್ರೈಂ ಮೊರೆ ಹೋಗಿದ್ದರು. ಅಲ್ಲದೇ ಚಿತ್ರತಂಡ ತಮ್ಮ ಅನುಮತಿ ಪಡೆಯದೇ ನಂಬರ್ ಬಳಸಿಕೊಂಡು ಅವಾಂತರ ಸೃಷ್ಟಿಸಿದೆ ಎಂದು ಆರೋಪಿಸಿದ್ದರು.

ಈ ಮಧ್ಯೆ ಇತ್ತೀಚಿಗೆ ಖಾಸಗಿ ಚಾನೆಲ್‍ ಇಂಟರ್​ ವ್ಯೂನಲ್ಲಿ ಮಾತನಾಡಿದ ಸನ್ನಿಲಿಯೋನ್, ಚಿತ್ರದ ದೃಶ್ಯವೊಂದರಲ್ಲಿ ನಿಮ್ಮ ಫೋನ್ ನಂಬರ್ ದುರುಪಯೋಗಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅಲ್ಲದೆ ನಿಮಗೆ ಈ ರೀತಿ ಆಗಬೇಕು ಎಂದು ನಾನು ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ರೀತಿಯ ಕರೆಗಳಿಂದ ಬೇಸತ್ತ ಪುನೀತ್ ಜುಲೈ 30ರಂದು ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದರು. ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ.ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದ್ರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ,ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ನಾನು ಸ್ವೀಕರಿಸಿದ್ದೇನೆ ಇನ್ನು ನನ್ನ ಮೊಬೈಲ್ ನಂಬರ್ ಬಳಸುವ ಮುನ್ನ ಚಿತ್ರತಂಡ ನನ್ನ ಅನುಮತಿ ಪಡೆದುಕೊಂಡಿಲ್ಲ ಎಂದು ಪುನೀತ್ ಆರೋಪಿಸಿದ್ದು, ಇದೀಗ ಸನ್ನಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಆ ನಂಬರ್ ನನ್ನದಲ್ಲ ಕರೆಮಾಡಬೇಡಿ ಎಂದು ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ.

Comments are closed.