ಮನೋರಂಜನೆ

ಬಾಲಿವುಡ್​ ನಟಿ ಹೇಮಾಮಾಲಿನಿಯ ನೃತ್ಯಕ್ಕೆ ಮನಸೋತ ಅಭಿಮಾನಿಗಳು!

Pinterest LinkedIn Tumblr


ನಟಿ ಹಾಗೂ ಸಚಿವೆ ಹೇಮಮಾಲಿನಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಇದೀಗಾ ಹೇಮಮಾಲಿನಿ ಮಥುರಾದ ಶ್ರೀ ರಾಧಾ ರಮಣ ದೇವಸ್ಥಾನದ ಜುಲನ್​​​ ಉತ್ಸವದಲ್ಲಿ ರಾಧೆಯಾಗಿ ಭರತನಾಟ್ಯ ಮಾಡಿದ್ದಾರೆ. 70 ಹರೆಯದಲ್ಲೂ ಹೇಮಾಮಾಲಿನಿ ನೃತ್ಯ ಮನಸೆಳೆದಿದ್ದು, ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಹೌದು 70 ಇಳಿ ವಯಸ್ಸಿನಲ್ಲೂ ಹೇಮಾಮಾಲಿನಿ ಅವರ ಭರತನಾಟ್ಯಕ್ಕೆ ಕಲಾರಸಿಕರು ಮನಸೋತಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​​​ ಆಗಿದೆ. ಇನ್ನು ಈ ಹಿಂದೆಯೂ ಕೂಡ ಚುನಾವಣಾ ಪ್ರಚಾರದ ವೇಳೆ ಭತ್ತದ ಕೊಯ್ಲು ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದರು .

ಇನ್ನು ಬಿಜೆಪಿ ಸಂಸದೆ, ಖ್ಯಾತ ನಟಿ ಹೇಮಾಮಾಲಿನಿ ಅವರಿಗೆ ಈಗ 70 ವರ್ಷ ವಯಸ್ಸು ಆದರೆ ಈಗಲೂ ಅವರು ಯುವಕರನ್ನೂ ನಾಚಿಸುವಂತೆ ನರ್ತಿಸುತ್ತಾರೆ.ಸಧ್ಯ ಹೇಮಾಮಾಲಿನಿ ಅವರ ನೃತ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ನೃತ್ಯ ಮಾಡಿದ ಹೇಮಾಮಾಲಿನಿ ಅವರಿಗೆ ದೇವಸ್ಥಾನದ ಕಡೆಯಿಂದ ಒಂದು ಕೊಳಲು ಮತ್ತು ಸೀರೆಯನ್ನು ನೀಡಿ ಗೌರವಿಸಿದ್ದಾರೆ.

ಕಾರ್ಯಕ್ರಮದ ನಂತರ ಮಾತನಾಡಿದ ಹೇಮಾಮಾಲಿನಿ ಅವರು, ‘ಶ್ರೀಕೃಷ್ಣನ ಮುಂದೆ ನೃತ್ಯ ಮಾಡಲು ಅವಕಾಶ ದೊರೆತದ್ದು ಬಹಳ ಹೆಮ್ಮೆ ಎನಿಸಿದೆ. ನನ್ನ ಇಂದಿನ ಪ್ರದರ್ಶನದಲ್ಲಿ ಕೃಷ್ಣನನ್ನು ಭೇಟಿಯಾಗುವ ರಾಧೆಯ ಭಾವಗಳನ್ನು ಪ್ರಕಟಿಸಿದೆ, ಎರಡನೇಯ ಭಾಗದಲ್ಲಿ ಮೀರಾಳ ಭಾವಗಳನ್ನು ಪ್ರಕಟಿಸಿದೆ’ ಎಂದು ಹೇಳಿದ್ದಾರೆ.

Comments are closed.