ಮನೋರಂಜನೆ

28 ರ ಮಾಡೆಲ್​ ಯುವಕನ ಜೊತೆ 42ರ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿಯ ವಿವಾಹ!

Pinterest LinkedIn Tumblr


ಬಾಲಿವುಡ್ ಬೆಡಗಿ ಹಾಗೂ ಮಾಜಿ ವಿಶ್ವಸುಂದರಿ ಸುಶ್ಮಿತ ಸೇನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. 42 ವರ್ಷವಾದರೂ ಹದಿಹರೆಯದ ಬೆಡಗಿಯಂತೆ ಕಾಣೋ ಸುಶ್ಮಿತಾ ಸೇನ್​ ಮನಗೆದ್ದಿದ್ದು 28 ಹರೆಯದ ಯುವಕ. ಹೌದು ತನಗಿಂತ 14 ವರ್ಷ ಚಿಕ್ಕವನೊಂದಿಗೆ ಮಾಜಿ ವಿಶ್ವಸುಂದರಿ ಸಪ್ತಪದಿ ತುಳಿಯಲಿದ್ದಾರೆ.

ಸದಾ ಸಿನಿಮಾ, ಮಾಡಲಿಂಗ್, ರ್ಯಾಂಪ್ ವಾಕ್ ಎಂದು ಬ್ಯುಸಿಯಾಗಿದ್ದ ಸುಶ್ಮೀತ ಸೇನ್ 42 ವರ್ಷವಾದರೂ ಮದುವೆಯಾಗದೆ ಯಾವಾಗಲೂ ಡೇಟಿಂಗ್, ಬಾಯ್ ಫ್ರೆಂಡ್ಸ್ ಎಂದೆ ಸಖತ್ ಸೌಂಡ್ ಮಾಡುತ್ತಿದ್ದರು. ಸದ್ಯ ಇದೀಗ ಈ ಎಲ್ಲದಕ್ಕೂ ಬ್ರೇಕ್ ಹಾಕಿರೋ ಸುಶ್ಮಿತ ಮದುವೆಯಾಗಲು ನಿರ್ಧರಿಸಿದ್ದಾರೆ.

ಅಂದ್ಹಾಗೆ ಕಳೆದ ಎರಡು ವರ್ಷದಿಂದ ಮಾಡೆಲ್​ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದ ಸುಶ್ಮಿತಾ ಇದೀಗ ಅವರನ್ನೆ ವರಿಸಲು ಸಿದ್ಧವಾಗಿದ್ದಾಳೆ. 2017ರಲ್ಲಿ ಖ್ಯಾತ ಮಾಡೆಲ್ ಆಗಿದ್ದ ರೋಹ್ಮಾನ್ ಶಾಲ್ ಸುಶ್ಮಿತಾ ಅವರಿಗೆ ಪರಿಚಯವಾಗಿದ್ದು, ಇವರಿಬ್ಬರ ಗೆಳೆತನ ನಂತರ ಪ್ರೀತಿಗೆ ತಿರುಗಿ ಸದ್ಯ ಇದೀಗ ಮದುವೆ ಹಂತಕ್ಕೆ ತಲುಪಿದೆ. ಸಾಧ್ಯವಾದರೆ ಈ ವರ್ಷದ ಕೊನೆಯ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಹಸೆ ಮಣೆ ಏರುವುದಾಗಿ ಈ ಜೋಡಿ ಹೇಳಿಕೊಂಡಿದೆ.

ಇನ್ನೂ ಈ ಹಿಂದೆ 35 ವರ್ಷದ ನಟಿ ಪ್ರಿಯಾಂಕ ಚೋಪ್ರಾ ಹಾಗೂ 25 ವರ್ಷದ ನಿಕ್ ಜೋನಸ್ ನನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು. ಇದೀಗಾ 42ರ ಹರೆಯದ ಸುಶ್ಮಿತಾ ಸೇನ್ 28 ವರ್ಷದ ಯುವಕ ರೋಹ್ಮಾನ್ ಶಾಲ್ ರವರನ್ನು ಮದುವೆಯಾಗುತ್ತಿದ್ದು, ಈ ಇಬ್ಬರ ವಯಸ್ಸಿನ ಅಂತರದ ವಿಚಾರವಾಗಿ ಬಿಟೌನ್ ನಲ್ಲಿ ಸಖತ್ ಸೌಂಡ್ ಆಗುತ್ತಿದೆ.

ಅಲ್ಲದೆ ಈಗಾಗಲೆ ಸುಶ್ಮಿತಾಗೆ ಇಬ್ಬರು ಮಕ್ಕಳಿದ್ದಾರೆ ಅದು ಹೇಗಪ್ಪಾ ಅಂತೀರಾ? ಹೌದು 2000ರಲ್ಲಿ ಮೊದಲ ಮಗು ರೆನೀಯನ್ನು ದತ್ತು ಪಡೆದ ಸುಶ್ಮಿತಾ ಬಳಿಕ ಎರಡನೆ ಮಗು ಅಲಿಶಾ ಅವರನ್ನು ದತ್ತು ಪಡೆದಿದ್ದಾರೆ. ಈ ಇಬ್ಬರು ಮಕ್ಕಳು ಕೂಡ ಸಹ ಸಂತಸದಿಂದ ಅಮ್ಮ ಸುಶ್ಮಿತಾ ಮದುವೆ ವಿಚಾರ ಕೇಳಿ ಮದುವೆಗೆ ಒಕೆ ಎಂದಿದ್ದಾರೆ.

Comments are closed.