ಕರ್ನಾಟಕ

ಸಿದ್ದಾರ್ಥ ಕೊನೆ ಆಸೆ!: ಈ ಕುರಿತು ಹೆಂಡತಿ ಹತ್ತಿರ ಹೇಳಿದ್ದೇನು ಗೊತ್ತಾ?!

Pinterest LinkedIn Tumblr


ಕೆಫೆ ಕಾಪಿ ಡೇ ಸಾಮ್ರಾಜ್ಯದ ಸಾಹುಕಾರ ವಿ.ಜಿ ಸಿದ್ದಾರ್ಥ್​ ಇನ್ನಿಲ್ಲವಾಗಿ ದಿನಗಳು ಕಳೆದಿವೆ. ಯಾವ ಕಾರಣಕ್ಕೆ ಸಿದ್ದಾರ್ಥ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾದ್ರು ಅನ್ನೋ ಇನ್ನು ನಿಗೂಢ. ಆದರೆ ಸದಾ ಮಾನವೀಯತೆ ಕಾರ್ಯಗಳಿಂದಲೇ ಗಮನಸೆಳೆಯುತ್ತಿದ್ದ ಸಿದ್ದಾರ್ಥ ಕೊನೆಯಾಸೆ ಏನಿತ್ತು ಗೊತ್ತಾ? ಇಷ್ಟಕ್ಕೂ ಸಿದ್ದಾರ್ಥ ತಮ್ಮ ಕೊನೆಯಾಸೆಯನ್ನು ಯಾರ ಬಳಿ ಹೇಳಿಕೊಂಡಿದ್ರು ಗೊತ್ತಾ? ಈ ಸ್ಟೋರಿ ಓದಿ.

ಕೊಟ್ಯಾಂತರ ರೂಪಾಯಿಗಳ ಒಡೆಯ, ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟು ಅನ್ನದಾತನಾಗಿ ಆಶಾಕಿರಣವಾಗಿದ್ದ ಸಿದ್ದಾರ್ಥ್​ ರವರನ್ನು ಕಳೆದುಕೊಂಡು ಕುಟುಂಬಸ್ಥರು ಹಾಗೂ ಕೆಫೆ ಕಾಫಿ ಡೇ ಉದ್ಯೋಗಿಗಳು ದುಃಖದಲ್ಲಿ ಮುಳಗಿ ಹೋಗಿದ್ದಾರೆ.ಸಾವಿರಾರು ಕೋಟಿಯ ಒಡೆಯನಾಗಿದ್ದರು ಸ್ವಲ್ಪವೂ ಹಮ್ಮೂ ಬಿಮ್ಮು ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿ ಎಸ್ಎಂಕೆ ರವರ ಮುದ್ದಿನ ಅಳಿಯ, ನೋರಾರು ಕೋಟಿಯ ದಾನ ಧರ್ಮ ಮಾಡಿ ಬಡವ ವರ್ಗದವರ ಆಶಾಕಿರಣವಾಗಿದ್ದಾರೆ.

ವರಕವಿ ಕುವೆಂಪು ರವರ ಪ್ರತಿಮೆಯ ನಿರ್ಮಾಣಕ್ಕೆ, ಅಂಧ ಮಕ್ಕಳ ಆಶಾ ಕಿರಣ ಸಂಸ್ಥೆಗೆ, ಹಾಗೂ ಜೀವನ ಸಂಧ್ಯಾ ಎಂಬ ವೃದ್ಧಾಶ್ರಮಕ್ಕೆ ದೊಡ್ಡ ಮಟ್ಟದಲ್ಲಿ ನೆರವು ನೀಡುತ್ತಾ ಬಂದಿದ್ದರು ಕೂಡಾ ಎಲ್ಲಿಯ ತಮ್ಮ ಧಾನದ ಬಗ್ಗೆ ಹೇಳಿಕೊಂಡಿರಲಿಲ್ಲ. ಬದಲಿಗೆ ಲಕ್ಷಾಂತರ ಅನುದಾನವನ್ನು ನೀಡಿ ಎಲೆಮರೆಯ ಕಾಯಿಯಂತೆ ಜೀವಿಸುತ್ತಿದ್ದರು.

ಇಷ್ಟಕ್ಕೂ ಸಿದ್ದಾರ್ಥ್​ ರವರ ತಮ್ಮ ಮಡದಿ ಮಾಲವಿಕ ರವರ ಬಳಿ ಕೊನೆಯದಾಗಿ ಹೇಳೆಕೊಂಡ ಕನಸು ಏನು ಗೊತ್ತಾ ಕೇಳಿದರೆ ನೀವೆ ಶಾಕ್ ಹಾಗ್ತೀರಾ.! ಹೌದು ಲಕ್ಷ್ಮೀ ಪುತ್ರನಾದ ಸಿದ್ದಾರ್ಥ್​ ಎಂತಹ ಕಾಯಿಲೆಯಾಗಲಿ ಆ ಆಸ್ಪತ್ರೆಯಲ್ಲಿ ಬಡವರಿಗೆ ಚಿಕಿತ್ಸೆ ಸಿಗಬೇಕು.. ಅದೂ ಕೂಡ ಸಂಪೂರ್ಣ ಉಚಿತವಾಗಿ.. ಆ ಆಸ್ಪತ್ರೆಗೆ ಕ್ಯಾಶ್ ಕೌಂಟರ್ ಇರಲೇ ಬಾರದು, ಈಗೆ ಎಲ್ಲಾ ರೀತಿಯ ಉತ್ತಮ ಸೌಲಭ್ಯ ಇರುವ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂಬ ಕನಸನ್ನ ಕಟ್ಟಿಕೊಂಡಿದ್ದರು ಅಲ್ಲದೆ ಇದನ್ನು ಕಾರ್ಯ ರೂಪಕ್ಕೆ ತರಬೇಕು ಬಡವರಿಗೆ ದೀನ ದಲಿತರಿಗೆ ನೆರವಾಗಬೇಕು ಎಂದು ಪದೇ ಪದೇ ಹೇಳಿಕೊಳ್ಳತ್ತಿದ್ದರಂತೆ.

ಆಸ್ಪತ್ರೆಯನ್ನ ನಿರ್ಮಾಣ ಮಾಡಿ ಲಕ್ಷ ಲಕ್ಷ ಸಂಪಾದಿಸಬೇಕು ಎಂದು ಹೇಳುವವರೆ ಹೆಚ್ಚು ಇರುವ ಈಕಾಲದಲ್ಲಿ. ಸಿದ್ದಾರ್ಥ್​ ರವರು ಎಂತಹ ಕಾಯಿಲೆಯಾಗಲಿ ಆ ಆಸ್ಪತ್ರೆಯಲ್ಲಿ ಬಡವರಿಗೆ ಚಿಕಿತ್ಸೆ ಸಿಗಬೇಕು.. ಅದೂ ಕೂಡ ಸಂಪೂರ್ಣ ಉಚಿತವಾಗಿ.. ಆ ಆಸ್ಪತ್ರೆಗೆ ಕ್ಯಾಶ್ ಕೌಂಟರ್ ಇರಲೇ ಬಾರದು ಎಂಬ ಮಹದಾಸೆಯನ್ನ ಹೇಳಿಕೊಂಡಿದ್ದರಂತೆ.

ಇವರು ಈ ಕನಸು ಮಾತಿಗೆ ಮಾತ್ರ ಸೀಮಿತವಾಗಿರಲಿಲ್ಲ, ಈಗಾಗಲೇ ಚಿಕ್ಕ ಮಗಳೂರಿನಲ್ಲಿ 30 ಕೋಟಿ ವೆಚ್ಛದಲ್ಲಿ ಆಸ್ಪತ್ರೆ ನಿರ್ಮಾಣವೂ ಕೂಡ ಆಗುತ್ತಿದೆ..ಇದನ್ನು ಸಂಪೂರ್ಣ ಮಾಡುವಷ್ಟರಲ್ಲಿ ಪಂಚಭೂತಗಳಲ್ಲಿ ಲೀನವಾಗಿಬಿಟ್ಟಿದ್ದಾರೆ.ಯಾವುದೇ ಎಜುಕೇಶನ್ ಕ್ವಾಲಿಫೀಕೇಶನ್ ಇಲ್ಲದಿದ್ದರು ಉದ್ಯೋಗವನ್ನು ನೀಡಿ ಆಸರೆ ಯಾಗಿದ್ದಂತಹ ಇಂತಹ ವ್ಯಕ್ತಿಯ ಕೊನೆಯಾಸೆ ಕೇಳಿ ಅದೇಷ್ಟೋ ಜನರು ಕಣ್ಣೀರಿಟ್ಟಿದ್ದಾರೆ. ಇಂತಹ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರು, ಉದ್ಯೋಗಿಗಳು, ಸಾರ್ವಜನಿಕರು ಅನಾಥರಾದಂತಾಗಿದೆ.

Comments are closed.