ಕರ್ನಾಟಕ

ಬಿ.ಎಸ್.ವೈ ಸಂಪುಟ ಸೇರುವ ಸಂಭವನೀಯ ಸಚಿವರು?: ಲೀಸ್ಟ್‌ಗೆ ಓಕೆ ಅನ್ನತ್ತಾ ಹೈಕಮಾಂಡ್..?

Pinterest LinkedIn Tumblr


ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ, ವಿಶ್ವಾಸಮತಯಾಚಿಸುವಲ್ಲಿ ಸಕ್ಸಸ್ ಆದ ಬಿ.ಎಸ್.ಯಡಿಯೂರಪ್ಪ, ಸಂಪುಟ ರಚನೆ ಮಾಡಲು ರೆಡಿಯಾಗಿದ್ದಾರೆ. ಆದರೆ ಅದಕ್ಕೂ ಮುನ್ನ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಲು ಕೆಲ ಶಾಸಕರ ಲೀಸ್ಟ್ ರೆಡಿ ಮಾಡಿದ್ದಾರೆ.

ಬಿ.ಎಸ್.ವೈ ಸಂಪುಟ ಸೇರುವ ಸಂಭವನೀಯ ಸಚಿವರು?
1. ಶ್ರೀರಾಮುಲು- ಚಿತ್ರದುರ್ಗ ಹಾಗೂ ಎಸ್ಟಿ ಕೋಟಾ, ಹೈಕಮಾಂಡ್ ಒಪ್ಪಿದ್ರೆ ಶ್ರೀರಾಮುಲುಗೆ ಡಿಸಿಎಂ ಪಟ್ಟ, ಇಲ್ಲದಿದ್ರೆ ಪ್ರಮುಖ ಖಾತೆ ಸಿಗುವ ಸಾಧ್ಯತೆ.

2. ಮಾಧುಸ್ವಾಮಿ- ಲಿಂಗಾಯತ ಹಾಗೂ ತುಮಕೂರು ಜಿಲ್ಲಾ ಕೋಟಾ.

3. ಉಮೇಶ್ ಕತ್ತಿ- ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಕೋಟಾ.

4. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ ಹಾಗೂ ಕುರುಬರ ಕೋಟಾ.

5. ಗೋವಿಂದ ಕಾರಜೋಳ- ದಲಿತ ಹಾಗೂ ವಿಜಯಪುರ ಕೋಟಾ.

6. ಆರ್. ಅಶೋಕ್- ಬೆಂಗಳೂರು ಹಾಗೂ ಒಕ್ಕಲಿಗ ಕೋಟಾ.

7. ಡಾ. ಅಶ್ವತ್ಥ ನಾರಾಯಣ- ಬೆಂಗಳೂರು ಹಾಗೂ ಒಕ್ಕಲಿಗ ಕೋಟಾ.

8. ಬಸವರಾಜ್ ಬೊಮ್ಮಾಯಿ- ಲಿಂಗಾಯತ ಹಾಗೂ ಉತ್ತರ ಕರ್ನಾಟಕದ ಕೋಟಾ.

9. ಬಸವರಾಜ್ ಪಾಟೀಲ್ ಯತ್ನಾಳ್- ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಕೋಟಾ.

10. ನಾಗೇಶ್- ಪಕ್ಷೇತರ ಶಾಸಕರು ಹಾಗೂ ಕೋಲಾರ ಜಿಲ್ಲಾ ಕೋಟಾ.

11. ಸಿ.ಟಿ.ರವಿ- ಒಕ್ಕಲಿಗರು ಹಾಗೂ ಚಿಕ್ಕಮಗಳೂರು ಜಿಲ್ಲಾ ಕೋಟಾ.

12. ರೇಣುಕಾಚಾರ್ಯ- ಲಿಂಗಾಯತ ಹಾಗೂ ದಾವಣಗೆರೆ ಜಿಲ್ಲೆಯ ಕೋಟಾ.

ಹೈಕಮಾಂಡ್ ಓಕೆ ಮಾಡಿದ್ರೆ ಈ ಪಟ್ಟಿಗಳಿಗೆ ಮುದ್ರೆ ಬೀಳಲಿದೆ. ಇಲ್ಲದಿದ್ರೆ ಕೊನೆ ಕ್ಷಣದಲ್ಲಿ ಒಂದೆರಡು ಹೆಸರುಗಳು ಬದಲಾವಣೆಗೊಳ್ಳಲಿದೆ. ಆರಂಭದಲ್ಲಿ 10 ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಮತ್ತೊಂದು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಪಕ್ಷೇತರ ಮತ್ತು ರೆಬೆಲ್ ಶಾಸಕರ ರಾಜೀನಾಮೆ ವಿವಾದ ಬಗೆಹರಿದ ಬಳಿಕ ಅತೃಪ್ತರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

Comments are closed.