ಕರ್ನಾಟಕ

ಹುಣಸೂರು ಕ್ಷೇತ್ರದಲ್ಲಿ ದೇವೇಗೌಡ ವರ್ಸಸ್ ಯೋಗೇಶ್ವರ್ ಹಣಾಹಣಿ?

Pinterest LinkedIn Tumblr


ಬೆಂಗಳೂರು (ಆ.1): ಮೈತ್ರಿ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅತೃಪ್ತ ಶಾಸಕರು ಅನರ್ಹಗೊಂಡಿದ್ದು, ಅವರ ರಾಜಕೀಯ ಭವಿಷ್ಯ ದಿಕ್ಕುತಪ್ಪಿದಂತೆ ಆಗಿದೆ. ಬಿಜೆಪಿಗೆ ಸರ್ಕಾರದಲ್ಲಿ ತಾವು ಮಂತ್ರಿಗಿರಿ ಸ್ಥಾನಪಡೆಯಬಹುದೆಂಬ ಹಲವು ಶಾಸಕರ ಲೆಕ್ಕಾಚಾರ ತಲೆಕೆಳಗಾಗಿ ರಾಜಕೀಯ ನಿವೃತ್ತಿಯತ್ತ ಚಿಂತನೆ ನಡೆಸಿದ್ದಾರೆ.

ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಇನ್ನ ಆರು ತಿಂಗಳಿನಲ್ಲಿ ಚುನಾವಣೆ ಎದುರಾಗುವ ಸಾಧ್ಯತೆಇದ್ದು, ಮೂರು ರಾಜಕೀಯ ಪಕ್ಷಗಳು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಚುನಾವಣಾ ತಯಾರಿ ನಡೆಸಲು ಸಜ್ಜಾಗಿದ್ದಾರೆ

ಜೆಡಿಎಸ್​ ಭದ್ರಕೋಟೆಯಾಗಿರುವ ಹುಣಸೂರನ್ನು ವಶಕ್ಕೆ ಪಡೆಯಲು ದೇವೇಗೌಡರು ಈಗಾಗಲೇ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋತಿ್ದ್ದ ದೇವೇಗೌಡರೇ ಸ್ವತಃ ಇಲ್ಲಿಂದ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಇತ್ತ ಬಿಜೆಪಿ ಕೂಡ ಈ ಕ್ಷೇತ್ರವನ್ನು ಪ್ರತಿಷ್ಟೆಯ ಕಣವಾಗಿ ಸ್ವೀಕರಿಸಿದ್ದು, ಈಗಾಗಲೇ ಯೋಜನೆ ರೂಪಿಸಿದೆ. ಈ ಅವಧಿಯಲ್ಲಿ ಅನರ್ಹಗೊಂಡಿರುವ ಶಾಸಕರು ಚುನಾವಣೆ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್​ ಈಗಾಗಲೇ ಆದೇಶ ನೀಡಿರುವ ಹಿನ್ನೆಲೆ ಇಲ್ಲಿನ ಪ್ರಭಾವಿ ನಾಯಕರಾಗಿರುವ ಎಚ್​.ವಿಶ್ವನಾಥ್​ ಈಗಾಗಲೇ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ್ದಾರೆ.

ವಿಶ್ವನಾಥ್​ ಮಗನಿಗೆ ಸೀಟು ಕೊಡುವ ಬಗ್ಗೆ ಬಿಜೆಪಿ ನಾಯಕರು ಯಾವುದೇ ಮಾತನಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವನಾಥ್​ಗೆ ಕೈ ಕೊಟ್ಟು ಈ ಕ್ಷೇತ್ರದಿಂದ ಬೇರೆ ನಾಯಕರನ್ನು ಕಣಕ್ಕೆ ಇಳಿಸುವ ಬಗ್ಗೆ ಯೋಚನೆ ನಡೆದಿದೆ.

ಮೂಲಗಳ ಪ್ರಕಾರ ಈ ಕ್ಷೇತ್ರದಲ್ಲಿ ಚನ್ನಪಟ್ಟಣದ ಬಿಜೆಪಿ ಪ್ರಭಾವಿ ನಾಯಕರಾಗಿರುವ ಸಿಪಿ ಯೋಗೇಶ್ವರ್​ರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಒಕ್ಕಲಿಗರ ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್​ಗೆ ಲಾಭವಾಗಬಹುದು ಎಂಬ ಲೆಕ್ಕಾಚಾರವಿದೆ. ಅಲ್ಲದೇ ವಿಶ್ವನಾಥ್​ ಕೂಡ ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇರುವ ಹಿನ್ನೆಲೆ ಈ ಕ್ಷೇತ್ರ ಗೆಲ್ಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

ತುಮಕೂರಿನಲ್ಲಿ ಈಗಾಗಲೇ ಸೋಲುಂಡಿರುವ ದೇವೇಗೌಡರಿಗೆ ಈ ಕ್ಷೇತ್ರದಲ್ಲಿಯೂ ಮತ್ತೆ ಸೋಲುಣಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಒಂದು ವೇಳೆ ದೇವೇಗೌಡರು ಇಲ್ಲಿ ಸ್ಪರ್ಧಿಸಿದರೆ ಬಹುತೇಕ ಒಕ್ಕಲಿಗ ಮತಗಳು ಅವರಿಗೇ ಬೀಳುವ ಸಾಧ್ಯತೆ ಇರುವುದರಿಂದ ಬಿಜೆಪಿಯ ಲೆಕ್ಕಾಚಾರ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎಂದು ಕಾದುನೋಡಬೇಕು.

Comments are closed.