ಮನೋರಂಜನೆ

ನಟಿಯ ಎದೆಯಲ್ಲಿ ಸ್ಟಾರ್ ನಟನ ಹಚ್ಚೆ!

Pinterest LinkedIn Tumblr


ಟಾಲಿವುಡ್ ನಟಿಯೊಬ್ಬಳು ತನ್ನ ಎದೆಯ ಭಾಗದಲ್ಲಿ ತನ್ನ ನೆಚ್ಚಿನ ಸ್ಟಾರ್ ನಟನೊಬ್ಬನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇನ್ನೂ ಆಕೆ ಹಾಕಿಸಿಕೊಂಡಿರುವ ಟ್ಯಾಟೂ ಫೋಟೊ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಮಹಿಳಾ ದೊಡ್ಡ ಅಭಿಮಾನಿ ಯಾರು? ಆಕೆ ಹಾಕಿಸಿಕೊಂಡಿರುವ ಟ್ಯಾಟೂವಿನಲ್ಲರುವ ಸ್ಟಾರ್ ನಟ ಯಾರು ಎಂದು ಯೋಚಿಸುತ್ತಿದ್ದೀರಾ ಹಾಗಂದ್ರೆ ಈ ಸ್ಟೋರಿ ಓದಿ..

ಹೌದು ಟಾಲಿವುಡ್ ನ ಕೆಲವು ಚಿತ್ರಗಳಲ್ಲಿ ನಟಿಸಿದ ನಟಿ ಆಶು ರೆಡ್ಡಿ ಸ್ಟಾರ್ ನಟ ಪವನ್ ಕಲ್ಯಾಣ್ ಹೆಸರನ್ನು ತನ್ನ ಎದೆಯ ಭಾಗದ ಪಕ್ಕದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ರಾತ್ರೋರಾತ್ರಿ ಸ್ಟಾರ್ ಆದವರು. ಅಲ್ಲದೆ ಡಬ್ ಸ್ಮಾಶ್ ಮೂಲಕವೇ ಫೇಮಸ್ ಆದ ಈ ನಟಿ ಸ್ವಲ್ಪ ನೋಡಲು ಸಮಂತಾರನ್ನೇ ಹೋಲುವ ಕಾರಣ ಈಕೆಯನ್ನು ಟಾಲಿವುಡ್ ಸಿನಿರಂಗದವರು ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ.

ಆದರೆ ಇದೇ ನಿಜಾವಾದ ಸಂಗತಿಯಲ್ಲ. ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಆಶು ನಂತರ ಯುಎಸ್ ಉನ್ನತ ಶಿಕ್ಷಣ ಪಡೆದರು.ಇನ್ನೂ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆಶು ಮಧ್ಯದಲ್ಲಿ ಒಬ್ಬರ ಜೊತೆ ಲವ್ವಿ-ಡವ್ವಿಯಲ್ಲಿ ಮುಳುಗಿದ್ದರು. ಆದರೆ ಕಾರಣಾಂತರಗಳಿಂದ ಕೆಲವು ದಿನಗಳಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡರು. ಲವ್ ಬ್ರೇಕ್ ಆಪ್ ನಿಂದ ಡಿಪ್ರೆಶನ್ ನಲ್ಲಿದ್ದ ಈ ನಟಿ ಭಾರತಕ್ಕೆ ಮರಳಿ ಇದೀಗಾ ನ್ಯೂ ಲೈಫ್ ಸ್ಟಾರ್ಟ್​ ಮಾಡಿದ್ದು, ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.

ಜೊತೆಗೆ ಈ ಹಿಂದೆ ನಿರ್ದೇಶಕ ಕತ್ತಿ ಮಹೇಶ್ ಅವರಿಗೆ ವಿವಾದದ ಸಂದರ್ಭದ ವೇಳೆ ಆಶು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಹಾಗಾಗಿ, ಪವನ್ ಹೆಸರನ್ನ ತನ್ನ ಎದೆಯ ಭಾಗದಲ್ಲಿ ಟ್ಯಾಟೂ ಹಾಕಿಕೊಂಡಿದ್ದಾರೆ. ಎಂದು ಹೇಳಿದಾಗ ಟ್ಯಾಟೂ ಹಾಕಿಸಿಕೊಂಡ ಮಾತ್ರಕ್ಕೆ ಪವನ್ ಕಲ್ಯಾಣ್ ಜೊತೆ ನನಗೆ ಅಫೇರ್ ಇದ್ಯಾ ಎಂದು ಆಶು ಪ್ರಶ್ನಿಸಿದ್ದರು. ಇನ್ನೂ ಈಕೆ ಬಗ್ಗೆ ಇಷ್ಟೆಲ್ಲಾ ಸುದ್ದಿಯಾಗುತ್ತಿರಲು ಕಾರಣವೆಂದರೆ ಈಕೆ ಈ ಬಾರಿ ತೆಲುಗಿನ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಈ ಹಳೆಯ ಫೋಟೊ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Comments are closed.