ಮನೋರಂಜನೆ

ಬಾಲಿವುಡ್ ಮಂದಿಯ ಡ್ರಗ್ ಪಾರ್ಟಿ?

Pinterest LinkedIn Tumblr


ಬಾಲಿವುಡ್ ನ ಸ್ಟಾರ್ ಕಲಾವಿದರ ಮೇಲೆ ಆರೋಪವೊಂದು ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಅದು ನಿಜಕ್ಕೂ ಸತ್ಯವೇ ಸುಳ್ಳೇ ಎಂಬ ಕುತೂಹಲವಿದೆ. ಸದ್ಯ ಇದೀಗಾ ಈ ಸುದ್ದಿಯನ್ನು ಕೇಳಿ ಬಾಲಿವುಡ್ ಇಂಡಸ್ಟ್ರೀಯೇ ದಂಗಾಗಿದೆ. ಇನ್ನೂ ಈ ವಿಷಯವನ್ನು ನೀವು ಕೇಳಿದರೆ ದಿಗ್ಭ್ರಮೆಗೆ ಒಳಗಾಗುತ್ತೀರೋ ಏನೋ ಗೊತ್ತಿಲ್ಲ ಏನದು ಗೊತ್ತಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..

ಇತ್ತೀಚೆಗಷ್ಟೇ ಬಾಲಿವುಡ್ ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಪಾರ್ಟಿಯೊಂದನ್ನು ಏರ್ಪಡಿಸಿದ್ದರು. ಈ ಪಾರ್ಟಿಯನ್ನು ಆಯೋಜಿಸಿದ್ದ ಉದ್ದೇಶ ಮಾತ್ರ ಏನು ಎಂದು ತಿಳಿದಿಲ್ಲ . ಇನ್ನೂ ಈ ಪಾರ್ಟಿಯಲ್ಲಿ ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್, ಅರ್ಜುನ್ ಕಪೂರ್, ವಿಕ್ಕಿ ಕೌಶಲ್, ಶಾಹೀದ್ ಕಪೂರ್, ವರುಣ್ ಧವನ್, ಸಿನಿ ಮೇಕರ್ ಅಯನ್ ಮುಖರ್ಜಿ, ಜೋಯಾ ಅಖ್ತರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸದ್ಯ ಈ ಪಾರ್ಟಿಯ ವಿಡಿಯೋವನ್ನು ಕರಣ್ ಜೋಹರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ ಈ ವಿಡಿಯೋವನ್ನು ವೀಕ್ಷಿಸಿದ ಶಿರೋಮಣಿ ಶಾಸಕ ಮಜಿಂದರ್ ಸಿರ್ಸಾ ಪಾರ್ಟಿಯಲ್ಲಿ ಎಲ್ಲ ಸ್ಟಾರ್ ನಟರು ಡಗ್ರ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇವರು ಮಾಡಿರುವ ಈ ಆರೋಪವನ್ನು ಕಾಂಗ್ರೆಸ್ ನಾಯಕ ಮಿಲಿಂದ್ ಡಿಯ್ರೋ ಆ ಪಾರ್ಟಿಗೆ ನನ್ನ ಪತ್ನಿಯೂ ಹೋಗಿದ್ದಳು. (ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ) ಅಲ್ಲಿ ಯಾರು ಡ್ರಗ್ಸ್ ಸೇವನೆ ಮಾಡಿಲ್ಲ. ನೀವು ಸುಮ್ಮನೆ ಸುಳ್ಳು ಸುದ್ದಿ ಹರಡಿಸುತ್ತಿದ್ದೀರಾ. ಇದಕ್ಕೆ ನೀವು ಕ್ಷಮೆ ಯಾಚಿಸಬೇಕೆಂದು ಟ್ವೀಟ್ ಮಾಡುವ ಮೂಲಕ ಅಲ್ಲೆಗಳೆದಿದ್ದಾರೆ.

ಅಲ್ಲದೆ ಆ ಪಾರ್ಟಿಯಲ್ಲಿ ನಿಜಕ್ಕೂ ಡ್ರಗ್ ಸೇವಿಸಿದ್ದಾರೆ ಎಂಬುವುದಕ್ಕೆ ಸಾಕ್ಷಿ ಎಂಬಂತೆ ಉರಿ ಚಿತ್ರದ ನಟ ವಿಕ್ಕಿ ಕೌಶಲ್ ಪಕ್ಕದಲ್ಲಿ ಬಿಳಿಯ ಬಣ್ಣದ ವಸ್ತುಯೊಂದು ಬಿಂಬಿಸುತ್ತಿರುವಂತೆ ಫೊಟೋವೊಂದು ವೈರಲ್ ಆಗಿದೆ. ನೋಡುವುದಕ್ಕೆ ಅದು ಪೌಡರ್ ಮಾದರಿ ಇದ್ದು ಈ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ ಸೂಕ್ಷವಾಗಿ ವಿಡಿಯೋವನ್ನು ಗಮನಿಸಿದರೆ ಅದು ಬೆಳಕಿನ ಪ್ರತಿಬಿಂಬ .

ಸದ್ಯ ಈ ವಿಚಾರವಾಗಿ ಸ್ಟಾರ್ ನಟರ ಅಭಿಮಾನಿಗಳು ಕಲಾವಿದರ ಪರ ನಿಂತಿದ್ದು, ವಿಡಿಯೋನಲ್ಲಿ ಇರುವುದು ಡ್ರಗ್ಸ್ ಅಲ್ಲ, ಅದು ಬೆಳಕಿನ ಪ್ರತಿಬಿಂಬ ಅಷ್ಟೇ. ಈ ವಿಚಾರವನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ತಾರೆಯರ ಪರ ಬೆಂಬಲ ಸೂಚಿಸಿದ್ದಾರೆ.

ವಿಶೇಷವೆನೆಂದರೆ ಈ ಪಾರ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ರಣ್ಬೀರ್ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದು, ದೀಪಿಕಾ ಪತಿ ರಣ್ವೀರ್ ಸಿಂಗ್ ಆಗಲಿ ಹಾಗೂ ರಣ್ಬೀರ್ ಕಪೂರ್ ಪ್ರೇಯಸಿ ಅಲಿಯಾ ಭಟ್ ಆಗಲಿ ಕಾಣಿಸಿಕೊಂಡಿಲ್ಲ.

Comments are closed.