ಮನೋರಂಜನೆ

ಟ್ವೀಟ್​ ಮೂಲಕ ಸಿದ್ದಾರ್ಥ್​ ಹೆಗ್ಗಡೆ ನಿಧನಕ್ಕೆ ಸಂತಾಪ ಸೂಚಿಸಿದ ನಟ-ನಟಿಯರು!!

Pinterest LinkedIn Tumblr

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಅಸಹಜ ಸಾವಿಗೆ ದೇಶದ ಪ್ರತಿಷ್ಠಿತ ಉದ್ಯಮಿಗಳು ರಾಜಕಾರಣಿಗಳು.IT ದಿಗ್ಗಜರಷ್ಟೇ ಅಲ್ಲದೇ ಕನ್ನಡ ಚಿತ್ರರಂಗವೂ ಕಂಬನಿ ಮಿಡಿದಿದೆ.

ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಸಿದ್ಧಾರ್ಥ್​ ಅವರು ಹೀಗೆ ಇದ್ದಕ್ಕಿದ್ದಂತೆ ಇಂತಹ ನಿರ್ಧಾರಕ್ಕೆ ಬಂದಿದ್ದು ನಿಜಕ್ಕೂ ನೋವಿನ ಸಂಗತಿ. ಅವರ ಅಗಲಿಕೆಗೆ ಸ್ಯಾಂಡಲ್​ವುಡ್​ ಮಂದಿ ಸಂತಾಪ ಸೂಚಿಸಿದ್ದಾರೆ.

ಯಶ್ ಸ್ಯಾಂಡಲ್​ ವುಡ್​ ಸ್ಟಾರ್​ಗಳಾದ ಪುನೀತ್​ ರಾಜ್​ಕುಮಾರ್​, ಗಣೇಶ್​, ಉಪೇಂದ್ರ, ಜಗ್ಗೇಶ್​, ಸುಮಲತಾ ಅಂಬರೀಶ್​, ಹಾಗೂ ರಾಗಿಣಿ ದ್ವಿವೇದಿ ಟ್ವೀಟ್​ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಟ್ವೀಟ್​ ಮಾಡಿದ್ದು, ‘ನಮ್ಮ ಕಾಲದ ಡೈನಮಿಕ್​ ಉದ್ಯಮಿ, ಒಂದು ಕಾಫಿ ಹೇಗೆ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ತೋರಿಸಿಕೊಟ್ಟವರು ಸಿದ್ಧಾರ್ಥ್​. ಅವರು ಮಾಡಿರುವ ಕೆಲಸಗಳು ಸದಾ ಹಸಿರಾಗಿ ಮನಸಿಲ್ಲಿ ಉಳಿಯುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನಿಮ್ಮ ಕನಸನ್ನು ನನಸು ಮಾಡಿ ಆ ಸುಂದರ ಸೂರಿನಡಿ ಲಕ್ಷಾಂತರ ಯುವಕ ಯುವತಿಯರು ಕನಸು ಕಾಣುವಂತೆ ಮಾಡಿದ ಶ್ರೇಷ್ಠ ಉದ್ಯಮಿ ಸಿದ್ದಾರ್ಥ….. ಬುದ್ದನಾಗುವ ಮುಂಚೆ ಈ ರೀತಿ ಮನಸ್ಸು ಮಾಡಬಾರದಿತ್ತು. ನಮ್ಮ ಕರುನಾಡಿನ ಕಾಫಿಯನ್ನು ಪ್ರಪಂಚದ ಮೂಲೆಮೂಲೆಗೂ ತಲುಪಿಸಿದ ಒಡೆಯನ ಆತ್ಮಕ್ಕೆ ಶಾಂತಿ ಸಿಗಲಿ.. ಮತ್ತೆ ಹುಟ್ಟಿ ಬನ್ನಿ ಎಂದು ನಟ ಉಪೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿ ನನ್ನ ಗುರುಗಳು smk ರವರಿಂದ ಪರಿಚಯವಾದ ಮಹೋದಯ..ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿಬಂದು ಚುನಾವಣೆಗೆ ಸಹಾಯ ಮಾಡಿಹೋದರು..ಅನೇಕಬಾರಿ ದೂರವಾಣಿ ಕರೆಮಾಡಿ ನನ್ನವಿನಂತಿಗೆ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇ ಲಿ ಕೆಲಸಕೂಟ್ಟವರು..ನನ್ನ ಗುರುಗಳು #smk & #family ಗೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ..ಓಂಶಾಂತಿ.. ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಇನ್ನು ನಟ ಗಣೇಶ್ ಕೂಡ ಉದ್ಯಮಿಯೊಬ್ಬರ ಇಂಥ ಅಕಾಲಿಕ ಸಾವು ನಿಜಕ್ಕೂ ಆಘಾತಕಾರಿ ಎಂದು ಟ್ವೀಟ್​ನಲ್ಲಿ ದುಃಖ ಹಂಚಿಕೊಂಡಿದ್ದಾರೆ. ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅದ್ಭುತ ವ್ಯಕ್ತಿ,ಅವರ ಆಗಲಿಕೆ ನನ್ನಗೆ ನೋವು ತಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ನಷ್ಟವನ್ನು ಭರಿಸಲು ದೇವರು ಶಕ್ತಿ ನೀಡಲಿ ಎಂದು ಸಂತಾಪ ಸೂಚಿದ್ದಾರೆ.

ಸಿದ್ಧಾರ್ಥ್​ ಸೋಮವಾರ ಸಂಜೆ 7ಕ್ಕೆ ನಾಪತ್ತೆಯಾಗಿದ್ದ ಅವರು, ಇಂದು ಬೆಳಿಗ್ಗೆ 7ಕ್ಕೆ ಶವವಾಗಿ ಸಿಕ್ಕಿದ್ದಾರೆ.ಮಂಗಳೂರಿನ ಹೋಯಿಗೆ ಬಜಾರ್​ ಸಮುದ್ರದ ಅಳಿವೆ ಬಾಗಿಲ ಬಳಿ ಸಿದ್ಧಾರ್ಥ್​ ಅವರ ಮೃತ ದೇಹ ನೀರಿನಲ್ಲಿ ತೇಲುತ್ತಿತ್ತು. ಇದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದು, ಅವರ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿದೆ.

Comments are closed.