ಕೆಜಿಎಫ್ ..ರಾಕಿಂಗ್ ಸ್ಟಾರ್ ಸಿನಿಕರಿಯರ್ನಲ್ಲೇ ದೊಡ್ಡ ಮೈಲಿಗಲ್ಲಾದ ಸಿನಿಮಾ.. ಚಾಪ್ಟರ್ ಒನ್ ನಂತ್ರ ಚಾಪ್ಟರ್ 2ನಲ್ಲಿ ಬ್ಯುಸಿಯಾಗಿರೋ ಯಶ್, ತಮ್ಮ ಪೂರ್ತಿ ಟೈಮ್ನ್ನ ಕೆಜಿಎಫ್ಗಾಗೇ ಮೀಸಲಿಟ್ಟಿದ್ದಾರೆ.. ಆದ್ರೆ ಇದೇ ಗ್ಯಾಪ್ನಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೀತಾಯಿದೆ.. ಹಾಗಾದ್ರೆ ಯಶ್ ಮುಂದಿನ ಪ್ರಾಜೆಕ್ಟ್ ಯಾವುದು..? ಈಗ ಕೇಳಿ ಬರ್ತಿರೋ ಸುದ್ದಿ ಎಷ್ಟು ನಿಜಾ..? ಎಷ್ಟು ಸುಳ್ಳು ಅನ್ನೋದು ಇಲ್ಲಿದೆ ಓದಿ..
ರಾಕಿಂಗ್ ಸ್ಟಾರ್ ಯಶ್ ಸತತ 2 ವರ್ಷಗಳಿಂದ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಚಾಪ್ಟರ್ ಒನ್ ಆಯ್ತು ಇದೀಗ ಚಾಪ್ಟರ್ 2 ನಲ್ಲಿ ನಿರತರಾಗಿದ್ದಾರೆ .. ಅಭಿಮಾನಿಗಳು ಕೂಡ ಕೆಜಿಎಫ್ ಗುಂಗಿನಲ್ಲೇ ಇದ್ದಾರೆ.. ಕೆಜಿಎಫ್ ನಂತ್ರ ನ್ಯಾಷನಲ್ ಸ್ಟಾರ್ ಆಗಿರೋ ಯಶ್ಗೆ ನಿರ್ದೇಶನ ಮಾಡೋಕ್ಕೆ ಬಿಗ್ ಡೈರೆಕ್ಟರ್ಸ್ ನಾ ಮುಂದು ತಾ ಮುಂದು ಅಂತಿದ್ದಾರೆ. ಆದ್ರೆ ಇದ್ರ ನಡುವೆ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ.. ಕೆಜಿಎಫ್ ನಂತ್ರ ಯಶ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ದಟ್ಟವಾಗಿದೆ..
ಕೆಜಿಎಫ್ ನಂತ್ರ ಯಶ್ ಮುಂದೆ ಯಾವುದೇ ಸಿನಿಮಾಗೇ ಗ್ರೀನ್ ಸಿಗ್ನಲ್ ಕೊಟ್ರು, ದೊಡ್ಡ ಮಟ್ಟದ ಎಕ್ಸ್ಪೆಕ್ಟೇಶನ್ ಇದ್ದೇ ಇರುತ್ತೆ.. ಕೆಜಿಎಫ್ನ ಮೀರಿದ ಚಿತ್ರವನ್ನೇ ಅಭಿಮಾನಿಗಳು ಕೂಡ ನಿರೀಕ್ಷಿಸ್ತಾರೆ.. ಅದಕ್ಕಾಗೇ ರಾಕಿಂಗ್ ಸ್ಟಾರ್ ದೊಡ್ಡ ಚಿತ್ರವೊಂದಕ್ಕೆ ಸಹಿ ಮಾಡಲಿದ್ದಾರಂತೆ.. ಯಶ್ ಮುಂದಿನ ಸಿನಿಮಾ ಕೂಡ ಬಹುಭಾಷೆಗಳಲ್ಲಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ತೆಲುಗಿನ ಸ್ಟಾರ್ ಡೈರೆಕ್ಟರ್ ಒಬ್ರು ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ..
ತೆಲುಗು ಕನ್ನಡ, ತಮಿಳು ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಡೈರೆಕ್ಟರ್ ಪೂರಿ ಜಗನ್ನಾಥ್ ರಾಕಿಂಗ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.. ಇಂಟ್ರೆಸ್ಟಿಂಗ್ ಅಂದ್ರೆ ಈ ಹಿಂದೆ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಪೋಕಿರಿ, ಬ್ಯುಸಿನೆಸ್ ಮ್ಯಾನ್ ಸಿನಿಮಾ ಮಾಡಿದ್ದ ಪೂರಿ ಜಗನ್ನಾಥ್ , ಪ್ರಿನ್ಸ್ ಜೊತೆ ಹ್ಯಾಟ್ರಿಕ್ ಕಾಂಬೋ ನಲ್ಲಿ ಮತ್ತೊಂದು ಚಿತ್ರವನ್ನ ತೆರೆಗೆ ತರೋಕ್ಕೆ ಸಿದ್ದವಾಗಿದ್ರು.. ಚಿತ್ರಕ್ಕೆ ಜನಗಣಮನ ಅಂತ ಟೈಟಲ್ ಕೂಡ ಫಿಕ್ಸ್ ಆಗಿತ್ತು.. ಆದ್ರೆ ಅದ್ಯಾಕೋ ಆ ಸಿನಿಮಾ ಸೆಟ್ಟೇರಲೇಯಿಲ್ಲ..
ಮಹೇಶ್ ಬಾಬು ಬದಲಾಗಿ ಯಶ್ರನ್ನ ಹೀರೋ ಮಾಡಿ ಜನಗಣಮನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋಕ್ಕೆ ಪೂರಿ ಜಗನ್ನಾಥ್ ಮುಂದಾಗಿದ್ಧಾರಂತೆ.. ಅದೇ ನಿಜವಾದ್ರೆ, ಜನಗಣಮನ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿ ಇತರೆ ಭಾಷೆಗಳಿಗೆ ಡಬ್ ಆಗಲಿದೆ..
ದಕ್ಷಿಣ ಭಾರತದ ದೊಡ್ಡ ನಿರ್ಮಾಣ ಸಂಸ್ಥೆ ಪೂರಿ- ಯಶ್ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹೂಡಲಿದ್ಯಂತೆ.. ಈಗಾಗ್ಲೇ ಈ ಬಗ್ಗೆ ಯಶ್ ಜೊತೆ 2 ಸುತ್ತಿನ ಮಾತುಕತೆ ನಡೆದಿದೆ ಅನ್ನೋ ಸುದ್ದಿ ಹರಿದಾಡ್ತಿದ್ದು, ಇದು ಎಷ್ಟು ಸತ್ಯ , ಸುಳ್ಳು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.. ಸದ್ಯ ಯಶ್ ಕೆಜಿಎಫ್ 2 ಮತ್ತು ಪೂರಿ ಇಸ್ಮಾರ್ಟ್ ಶಂಕರ್-2 ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ.. ಈ ಎರಡು ಸಿನಿಮಾಗಳ ನಂತ್ರ ಮುಂದಿನ ವರ್ಷ ಜನಗಣ ಮನ ಸಿನಿಮಾ ಸೆಟ್ಟೇರಿದ್ರೂ ಅಚ್ಚರಿ ಪಡ್ಬೇಕಿಲ್ಲ..
ಇನ್ನು ಫೂರಿ ಜಗನ್ನಾಥ್ ಈಗಾಗ್ಲೇ ಕನ್ನಡದಲ್ಲಿ ಅಪ್ಪು, ಯುವರಾಜ, ರೋಗ್ ಸಿನಿಮಾಗಳನ್ನ ಮಾಡಿದ್ದು, ಒಂದು ವೇಳೆ ಜನಗಣಮನ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ರೆ, ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಕಡೆ ಮುಖ ಮಾಡಲಿದ್ದಾರೆ.. ದೇಶದಲ್ಲಿ ನಡೀತಿರೋ ಅತ್ಯಾಚಾರ, ಕೊಲೆ ಪ್ರಕರಣಗಳನ್ನ ಆಧರಿಸಿ, ಜನಗಣಮನ ಕಥೆ ಸಿದ್ಧವಾಗಿದ್ದು, ಯಶ್- ಪೂರಿ ಕಾಂಬೋ ವರ್ಕ್ಔಟ್ ಆಗಿ ಕಂಟೆಂಟ್ ಪ್ರೇಕ್ಷಕರಿಗೆ ಕನೆಕ್ಟ್ ಆದ್ರೆ, ಬಾಕ್ಸಾಫೀಸ್ನಲ್ಲಿ ರೆಕಾರ್ಡ್ಸ್ ಬ್ರೇಕ್ ಆಗೋದು ಗ್ಯಾರೆಂಟಿ.
Comments are closed.