ಮನೋರಂಜನೆ

ನಟಿ ಅನುಷ್ಕಾ ಶರ್ಮಾಗೆ ನೀವು ಗರ್ಭೀಣಿಯ ಎಂದು ಕೇಳಿದ ಸಂದರ್ಶಕ

Pinterest LinkedIn Tumblr


ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎಷ್ಟು ಕ್ಯೂಟಾಗಿ ಕಾಣಿಸಿಕೊಳ್ಳುತ್ತಾರೋ ತಮಗೆ ಇಷ್ಟವಿಲ್ಲದ ಪ್ರಶ್ನೆ ಕೇಳೋರಿಗೆ ಅಷ್ಟೇ ಕಠೋರವಾಗಿಯೂ ಉತ್ತರಿಸುತ್ತಾರೆ. ಹೌದು ಇತ್ತೀಚಿಗೆ ಆಗಾಗ ಎದುರಾಗುತ್ತಿರುವ ಪ್ರಗ್ನೆನ್ಸಿ ಕುರಿತಾದ ಪ್ರಶ್ನೆಗೆ ಖಡಕ್​ ರಿಯಾಕ್ಷನ್ ನೀಡಿರುವ ಬಾಲಿವುಡ್​ ಬೆಡಗಿ ಖಾರವಾಗಿ ಉತ್ತರಿಸಿ ಸುದ್ದಿಯಾಗಿದ್ದಾರೆ.

ಕಳೆದ ವರ್ಷವಷ್ಟೇ ಟೀಂ ಇಂಡಿಯಾದ ನಾಯಕ ವಿರಾಟ್ ಕೋಹ್ಲಿ ಜೊತೆ ಅನುಷ್ಕಾ ಶರ್ಮಾ ಸಪ್ತಪದಿ ತುಳಿದಿದ್ದರು. ಇನ್ನೂ ಮದುವೆಯ ನಂತರವೂ ಸಿನಿಮಾದಲ್ಲಿ ನಟಿಸುತ್ತಿದ್ದ ಅನುಷ್ಕಾ ಈ ಹಿಂದೆ ಸೂಯಿ-ದಾಗ ಚಿತ್ರದ ಪ್ರಮೋಷನ್ ವೇಳೆ ತಲೆ ಸುತ್ತಿ ಬಿದ್ದಿದರಿಂದ ಅನುಷ್ಕಾ ಪ್ರೆಗ್ನೆಟ್ ಎಂಬ ಗಾಳಿಸುದ್ದಿ ಬಿ – ಟೌನ್ ನಲ್ಲಿ ಹರಿದಾಡುತ್ತಿತ್ತು.

ಇದೀಗಾ ಸಂದರ್ಶನವೊಂದರಲ್ಲಿ ನೀವು ಗರ್ಭಿಣಿಯೇ ಎಂಬ ಪ್ರಶ್ನೆ ಕೇಳಿದಾಗ ಈ ವಿರುದ್ಧ ಕೋಪಗೊಂಡ ಅನುಷ್ಕಾ ಜನರು ಕಲಾವಿದರು ನೆಮ್ಮದಿಯಾಗಲು ಬಿಡಿ. ಮದುವೆಗೂ ಮುನ್ನ ಒಂದು ಹುಡುಗ ಹುಡುಗಿ ಡೇಟಿಂಗ್ ಮಾಡುತ್ತಿದ್ದರೆ, ಯಾವಾಗ ಮದುವೆ ಎನ್ನುತ್ತೀರಾ, ಮದುವೆಯಾದ ನಂತರ ಯಾವಾಗ ಮಗು ಎಂದು ಕೇಳುತ್ತೀರಾ ? ಕಲಾವಿದರನ್ನು ನೆಮ್ಮದಿಯಾಗಿರಲು ಬಿಡಿ ಹೋದಲ್ಲಿ ಬಂದಲ್ಲಿ ಎಲ್ಲಾ ಈ ರೀತಿ ಪ್ರಶ್ನೆಗಳನ್ನು ಕೇಳಿ ಮುಜುಗರಗೊಳ್ಳುವಂತಹ ಪ್ರಶ್ನೆಗಳಿಗೆ ಉತ್ತರಿಸುವಂತಹ ಪರಿಸ್ಥಿತಿ ಏಕೆ ಮಾಡುತ್ತೀರಾ , ನನಗೆ ಇಂತಹ ಪ್ರಶ್ನೆಗಳನ್ನು ಕೇಳುವುದು ಇಷ್ಟವಾಗುವುದಿಲ್ಲ. ಎಂದು ಖಡಕ್ ರಿಯಾಕ್ಷನ್ ನೀಡಿದ್ದಾರೆ.

ನಟಿಯರು ಮದುವೆಯಾಗದಿದ್ದಕ್ಕೂ ಪ್ರಶ್ನೆ ಮಾಡುತ್ತೀರಾ, ಮದುವೆಯಾದರೂ ಪ್ರಶ್ನೆ ಮಾಡುತ್ತೀರಾ.. ಯಾವುದಾದರೂ ನಟಿ ಲೂಸ್ ಡ್ರೆಸ್ ಹಾಕಿಕೊಂಡರೆ ಆಕೆ ಪ್ರಗ್ನೆಂಟ್ ಎನ್ನುತ್ತಿರಾ. ಟ್ರೆಂಡಿ ಆಗಿರುವ ಬಟ್ಟೆಗಳನ್ನು ನಟಿಯರು ಧರಿಸುತ್ತಾರೆ. ಅದಕ್ಕೂ ನೀವ್ಯಾಕೆ ಅಷ್ಟು ಅನಗತ್ಯ ಪ್ರಚಾರ ನೀಡುತ್ತಿರಾ ಎಂದು ಅನುಷ್ಕಾ ಪ್ರಶ್ನಿಸಿದ್ದಾರೆ.

ನಿಮಗೆ ಇಂತಹ ಸುದ್ದಿಗಳು ಹೇಗೆ ಬರುತ್ತದೆ ಎಂದು. ಇನ್ನೂ ಮದುವೆ ಆಗಿರುವುದನ್ನು ಮುಚ್ಚಿಡಬಹುದು, ಆದರೆ ಪ್ರೆಗ್ನೆಂಟ್ ಆಗುವುದನ್ನೂ ಮುಚ್ಚಿಡಲು ಸಾಧ್ಯವವೇ? ಇದೆಲ್ಲಾ ಕೆಲಸಕ್ಕೆ ಬಾರದ ಮಾತುಗಳು. ಇಲ್ಲಿ ಜನರು ನಟಿಯರು ಮದುವೆಯಾಗುವುದಕ್ಕೆ ಮುನ್ನವೆ ಮುತ್ತೈದೆ ಮಾಡುತ್ತಾರೆ. ಮಗು ಆಗುವ ಮುನ್ನವೇ ತಾಯಿ ಎಂದು ಮಾತನಾಡುತ್ತಾರೆ. ಈ ಎರಡರಲ್ಲಿಯೂ ನನಗೆ ಯಾವುದೇ ರೀತಿಯ ವ್ಯತ್ಯಾಸ ಕಾಣಿಸುತ್ತಿಲ್ಲ .ಇದಕ್ಕೆಲ್ಲಾ ನಾನು ತಲೆಯೂ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದು, ಅನುಷ್ಕಾ ಉತ್ತರ ನೋಡಿ ಗ್ಲ್ಯಾಮರ್​ ಜೊತೆ ಅನುಷ್ಕಾ ಸಖತ್​ ಜೋರು ಅನ್ನೋ ಅಭಿಪ್ರಾಯಕ್ಕೆ ಬಾಲಿವುಡ್​ ಬಂದುನಿಂತಿದೆ.

Comments are closed.