ಮನೋರಂಜನೆ

ನಾನು ಸನ್ನಿ ಲಿಯೋನ್ ಅಲ್ಲ, ದಯವಿಟ್ಟು ನನ್ನ ಬಿಟ್ಟು ಬಿಡಿ!

Pinterest LinkedIn Tumblr


ಬಾಲಿವುಡ್ ಹಾಟ್ ಬೆಡಗಿ ನಟಿ ಸನ್ನಿ ಲಿಯೋನ್ ಅಂದ್ರೆ ಯುವಕರಿಗೆ ಹಾಟ್ ಫೇವರಿಟ್​ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಅದೇ ಸನ್ನಿ ಲಿಯೋನ್​ನಿಂದ ಯುವಕನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅದು ಏನ್ ಗೊತ್ತಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..

ಕಳೆದ ವಾರವಷ್ಟೇ ಬಾಲಿವುಡ್ ನಲ್ಲಿ ತೆರೆಕಂಡ ಅರ್ಜುನ ಪಟಿಯಾಲಾ ಸಿನಿಮಾದಲ್ಲಿ ನಟಿ ಸನ್ನಿಲಿಯೋನ್ ಸಹ ನಟಿಸಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ನನ್ನು ತಿಳಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ದೆಹಲಿಯ ಪೀತಮಪುರದ ಯುವಕ ಪುನೀತ್ ಅಗ್ರವಾಲ್ ಎಂಬುವವರು ಮೊಬೈಲ್ ನಂಬರ್.

ಆದರೆ ಚಿತ್ರ ಬಿಡುಗಡೆಯಾದಾಗಿನಿಂದ ಆ ನಂಬರ್​ಗೆ ಸನ್ನಿ ಲಿಯೋನ್ ನನ್ನು ಕೇಳಿಕೊಂಡು ಅಭಿಮಾನಿಗಳು ಕರೆ ಮಾಡಲು ಶುರು ಮಾಡಿದ್ದಾರೆ. ಇದರಿಂದ ಬೇಸತ್ತ ಪುನೀತ್ ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಶುಕ್ರವಾರದಿಂದ ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚುಗಳು ಪುನೀತ್ ಸ್ವೀಕರಿಸಿದ್ದು, ಕೇವಲ ಇಲ್ಲಿಯವರು ಮಾತ್ರವಲ್ಲದೆ ವಿದೇಶಗಳಿಂದಲೂ ಕರೆಬರಲು ಆರಂಭಿಸಿದ್ದಾರೆ.

ಅಲ್ಲದೆ ಇದು ಸನ್ನಿ ಲಿಯೋನ್ ಅಲ್ಲ ಎಂದು ಹೇಳಿದರೆ ಕರೆ ಮಾಡಿದವರು ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರಂತೆ. ಇದರೊಂದಿಗೆ ಜೊತೆಗೆ ಚಿತ್ರತಂಡ ನನ್ನ ಮೊಬೈಲ್ ಸಂಖ್ಯೆಯನ್ನು ಬಳಸುವ ಮುನ್ನ ನನ್ನ ಅನುಮತಿ ಸಹ ಪಡೆದಿಲ್ಲ ಚಿತ್ರತಂಡ ಈ ವರ್ತನೆಯಿಂದ ನಾನು ಮಾನಸಿಕವಾಗಿಯೂ ನೊಂದಿದ್ದೇನೆ ಎಂದು ಪುನೀತ್​ ಹೇಳಿಕೊಂಡಿದ್ದಾರೆ. ಇನ್ನೂ ಪೊಲೀಸರು ಸಹ ಸೈಬರ್ ತಜ್ಞರ ಸಲಹೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂದು ಡಿಸಿಪಿ ವಿಜಯಂತ್ ಆರ್ಯ ತಿಳಿಸಿದ್ದಾರೆ.

Comments are closed.