ರಾಷ್ಟ್ರೀಯ

ತ್ರಿವಳಿ ತಲಾಕ್​ ಮಸೂದೆಗೆ ಕೇಂದ್ರದಿಂದ ಕೊನೆಗೂ ಅನುಮೋದನೆ

Pinterest LinkedIn Tumblr


ಹಲವು ವರ್ಷಗಳಿಂದ ಪುರುಷರ ಶೋಷಣೆಗೆ ಒಳಗಾಗಿದ್ದ ಮುಸ್ಲಿಂ ಮಹಿಳೆಯರಿಗೆ ಇದೀಗಾ ನ್ಯಾಯ ದೊರೆತಿದೆ. ಹೌದು ಕೇಂದ್ರ ಸರ್ಕಾರ ಬಹುನಿರೀಕ್ಷಿತ ತ್ರಿವಳಿ ತಲಾಕ್​ ಮಸೂದೆಗೆ ಕೊನೆಗೂ ಅನುಮೋದನೆ ದೊರೆತಿದೆ.

ತ್ರಿವಳಿ ತಲಾಖ್ ನಿಷೇಧ ವಿಧೇಯಕವನ್ನು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇಂದು ರಾಜ್ಯ ಸಭೆಯಲ್ಲಿ ಮಂಡಿಸಿದ್ದು. ಕೊನೆಗೂ ತ್ರಿವಳಿ ತಲಾಕ್​ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಕ್​​ ನಿಷೇಧ ಸುಗ್ರೀವಾಜ್ಞೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇನ್ನೂ ಈ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ ಒಂದೇ ಬಾಕಿ ಇದೆ.

ಈ ಹಿಂದೆ ಲೋಕಸಭೆಯಲ್ಲಿ ತ್ರಿವಳಿ ತಲಾಕ್​​ ತಿದ್ದುಪಡಿ ಮಸೂದೆಗೆ ಅನುಮೋದನೆ ದೊರೆತಿತ್ತು, ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿರಲಿಲ್ಲ. ಇದೀಗ ರಾಜ್ಯಸಭೆಯಲ್ಲಿ 99-84 ಮತಗಳ ಅಂತರದಿಂದ ಅಂಗೀಕಾರಗೊಂಡಿದ್ದು, ಇನ್ನು ಮುಂದೆ ತ್ರಿವಳಿ ತಲಾಕ್​​ ಶಿಕ್ಷಾರ್ಹ ಅಪರಾಧವಾಗಲಿದೆ.

ಪ್ರಸ್ತುತ ತಿದ್ದು ಪಡಿಯ ಪ್ರಕಾರ ತ್ರಿವಳಿ ತಲಾಕ್ ಜಾಮೀನು ರಹಿತ ಅಪರಾಧವಾಗಿಯೇ ಮುಂದುವರಿಯಲಿದೆ. ಆದರೆ, ಪತ್ನಿಯ ಅಭಿಪ್ರಾಯ ಪಡೆದು ನ್ಯಾಯಾಧೀಶರು ಜಾಮೀನು ನೀಡಬಹುದು. ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ತಾಯಿ ಅರ್ಜಿ ಹಾಕಬಹುದಾಗಿದೆ.

Comments are closed.