ಕರ್ನಾಟಕ

ಅವರೇ ಕರೆ ಮಾಡಿ ಭೇಟಿಯಾಗೋಣ ಅಂದಿದ್ದರು: ಸಿದ್ದಾರ್ಥ್ ಬಗ್ಗೆ ಡಿಕೆಶಿ ಮಾತು

Pinterest LinkedIn Tumblr


ಬೆಂಗಳೂರು: ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ನನಗೆ ಅವರೇ ಕಾಲ್ ಮಾಡಿ ಮೀಟ್ ಮಾಡೋಣ ಎಂದಿದ್ದರು. ಆದರೆ ಇವತ್ತಿನ ಕಣ್ಮರೆ ವಿಚಾರ ನಂಬೋಕ್ಕೆ ಆಗ್ತಿಲ್ಲ ಎಂದಿದ್ದಾರೆ.

ಸಿದ್ಧಾರ್ಥ್ ಐಟಿ ಬಗ್ಗೆ ಆರೋಪ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ ಡಿಕೆಶಿ, 27ರಂದೇ ಸಿದ್ಧಾರ್ಥ ಆ ಲೆಟರ್ ಬರೆದಿರಬಹುದು. ನನಗೆ ಅವರೇ ಕಾಲ್ ಮಾಡಿ ಮೀಟ್ ಮಾಡೋಣ ಅಂದಿದ್ದರು. ಜುಲೈ 28ರಂದು ಭೇಟಿ ಮಾಡೋಣ ಎಂದಿದ್ದರು. ಆದರೆ ಇವತ್ತಿನ ಕಣ್ಮರೆ ವಿಚಾರ ನಂಬೋಕೆ ಆಗ್ತಿಲ್ಲ ಎಂದು ಸಿದ್ಧಾರ್ಥ್ ಬರೆದ ಲೆಟರ್‌ನ್ನ ಟ್ಯಾಗ್ ಮಾಡಿ ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಧಿಡೀರ್ ಕುಸಿತ ಕಂಡ ಕಾಫಿಡೇ ಎಂಟರ್ಪ್ರೈಸ್ ಶೇರ್ ಗಳು
ಕಾಫಿಡೇ ಎಂಟರ್ಪೈಸ್ ಶೇರ್‌ಗಳು ದಿಢೀರ್ ಕುಸಿತ ಕಂಡಿದೆ. ದಿನದ ಆರಂಭದಲ್ಲೇ ಕಾಫಿ ಡೇ ಶೇರ್ ಗಳ ಬೆಲೆಯಲ್ಲಿ 20% ಕುಸಿತ ಕಂಡಿದೆ. ಕಾಫಿಡೇ ಪ್ರತಿ ಶೇರಿನ ಬೆಲೆ 38 ರೂ ಇಳಿದು, 153₹ ಗಳ ಆಸುಪಾಸಿನಲ್ಲಿದೆ. ಒಂದು ವರ್ಷದ ಅವಧಿಯಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಕಾಫಿ ಡೇ ಶೇರುಗಳು ಕುಸಿತ ಕಂಡಿದೆ. ಇನ್ನು ಕಾಫಿ ಡೇ ಶೇರುಗಳನ್ನು ಖರೀದಿಸಲು ಕೋಕಾಕೊಲಾ ಕಂಪನಿ ಉತ್ಸುಕವಾಗಿತ್ತು. 8-10 ಸಾವಿರ ಕೋಟಿಗೆ ಸಿಸಿಡಿ ಖರೀದಿಗೆ ಕೋಕಾಕೋಲಾ ಮಾತುಕತೆ ನಡೆಸಿತ್ತು. ಆದ್ರೆ ತಾನು ಕಟ್ಟಿ ಬೆಳೆಸಿದ ಕಂಪನಿ ಮಾರಲು ಸಿದ್ಧಾರ್ಥ್ ಒಪ್ಪಿಗೆ ನೀಡಿರಲಿಲ್ಲ.

Comments are closed.