ಕರ್ನಾಟಕ

ಅನರ್ಹತೆ ಕುರಿತು ಸುಪ್ರೀಂನಲ್ಲಿ ನ್ಯಾಯಸಿಗುವ ನಂಬಿಕೆ ಇದೆ!: ರಮೇಶ್​ ಜಾರಕಿಹೊಳಿಯ ಪ್ರಥಮ ಪ್ರತಿಕ್ರಿಯೆ

Pinterest LinkedIn Tumblr


ನಾವು ರಾಜೀನಾಮೆ ನೀಡಿದ್ದರೂ ನಮ್ಮ ವಿರುದ್ಧ ದುರುದ್ದೇಶದಿಂದ ಕ್ರಮಕೈಗೊಂಡು ಅನರ್ಹಗೊಳಿಸಲಾಗಿದೆ. ಇದರ ವಿರುದ್ಧ ಸುಪ್ರೀಂ ಮೊರೆ ಹೋಗಿದ್ದೇವೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಅಲ್ಲಿ ನಮಗೆ ನ್ಯಾಯಸಿಗಲಿದೆ ಎಂದು ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅನರ್ಹತೆ ಆದೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಅನರ್ಹತೆ ಆದೇಶದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ರಿಯಾಕ್ಷನ್ ನೀಡಿದ ಶಾಸಕ ರಮೇಶ್ ಜಾರಕಿಹೊಳಿ, ಈಗಾಗಲೇ ನಮ್ಮ ಪರ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ. ಹೀಗಾಗಿ ಈ ವಿಷ್ಯದ ಬಗ್ಗೆ ಮಾತನಾಡಲು ಇಷ್ಟು ಪಡುವುದಿಲ್ಲ. ಸಧ್ಯದಲ್ಲೇ ನಾವೆಲ್ಲ ಅತೃಪ್ತ ಶಾಸಕರು ಸುದ್ದಿಗೋಷ್ಠಿ ನಡೆಸಲಿದ್ದು, ಅವಾಗ ವಿವರವಾದ ಮಾಹಿತಿ ನೀಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಮುಂಬೈಯಿಂದ ಬೆಂಗಳೂರಿಗೆ ಆಗಮಿಸಿದ ರಮೇಶ್ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿದ್ದರು. ಸ್ಪೀಕರ್ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ, ಸ್ಪೀಕರ್ ಒಳ್ಳೆಯವರು. ಆದರೆ ಅವರು ಯಾವ ಒತ್ತಡದಿಂದ ಈ ಕ್ರಮಕೈಗೊಂಡರೋ ಗೊತ್ತಿಲ್ಲ. ಆದರೆ ನಮಗೆ ನ್ಯಾಯಾಂಗದಲ್ಲಿ ಗೆದ್ದು ಬರುವ ವಿಶ್ವಾಸವಿದೆ ಎಂದರು.

Comments are closed.