ಮನೋರಂಜನೆ

ದರ್ಶನ್​ ಚೆಲುವಿಗೆ ಮರುಳಾಗಿದ್ದು ಹೇಗೆ ಗೊತ್ತಾ..?

Pinterest LinkedIn Tumblr


ಕೌರವೇಶ್ವರನ ಗತ್ತು ಗಾಂಭೀರ್ಯ, ಹಠ, ಛಲ, ಬಲ ಎಂಥದ್ದು ಅಂತ ಮಹಾಭಾರತ ಕಾವ್ಯದಲ್ಲಿ ಕೇಳಿದ್ದೇವೆ. ಈಗಾಗಲೇ ಕುರುಕ್ಷೇತ್ರ ಚಿತ್ರದಲ್ಲೂ ದುರ್ಯೋಧನನ ಅಬ್ಬರ ಹೇಗಿರುತ್ತೆ ಅನ್ನೋದ್ರ ಸಣ್ಣ ಝಲಕ್ ನೋಡಿದ್ದೇವೆ. ಆದರೆ, ಇಂತಹ ಸುಯೋಧನನ್ನು ಈಕೆ ತನ್ನ ರೂಪ, ವೈಯ್ಯಾರ ಮತ್ತು ಮೋಹಕ ನೃತ್ಯದಿಂದ ಮರಳು ಮಾಡಿದ್ದಾಳೆ.

ಕುರುಕ್ಷೇತ್ರ ಚಿತ್ರದ ‘ಜುಮ್ಮಾ ಜುಮ್ಮಾ’ ಹಾಡು ಬಿಡುಗಡೆಯಾಗಿದೆ. ರಾಕ್ಷಸ ಶಿಲ್ಪಿ ‘ಮಯ’ ನಿರ್ಮಿಸಿದ ಅದ್ಭುತ ಸದನ. ಸುತ್ತಾ ನರ್ತಕಿಯರ ಬಳಗ. ನಡುವೆ ರಾಣಿ ಜೇನಿನಂತ ಸುರ ಸುಂದರಿ ಮಾಯೆ. ಶತಸೋದರಾಗ್ರಜ ಶರವೀರ ಕೌರವ, ಆಕೆಯ ಮೋಹ ಪಾಶದಲ್ಲಿ ಸಿಲುಕೋಕ್ಕೆ ಇಷ್ಟು ಸಾಕಲ್ವಾ.

ಇದು ಕುರುಕ್ಷೇತ್ರ ಚಿತ್ರದ ಹೊಸ ಹಾಡು. ಆಸ್ಥಾನ ನರ್ತಕಿ ಮಾಯೆ ಮತ್ತು ದುರ್ಯೋಧನನ ನಡುವಿನ ಪ್ರಣಯ ಗೀತೆ. ಚಿತ್ರದಲ್ಲಿ ಸ್ಯಾಂಡಲ್​ವುಡ್ ಬ್ಯೂಟಿ ಕ್ವೀನ್​ ಹರಿಪ್ರಿಯಾ, ಮಾಯೆ ಅನ್ನೋ ನರ್ತಕಿ ಪಾತ್ರದಲ್ಲಿ ಮಿಂಚಿದ್ದಾರೆ. ಹೆಸರಿಗೆ ತಕ್ಕಂತೆ ದುರ್ಯೋಧನನನ್ನು ಮಾಯೆಯ ಮೋಹ ಪಾಶ ಹಾಕಿ ಈ ಹಾಡಿನಲ್ಲಿ ಕಟ್ಟಿಹಾಕುವಂತೆ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ. ಸದ್ಯ ಜುಮ್ಮಾ ಜುಮ್ಮಾ ಲಿರಿಕಲ್ ವೀಡಿಯೋ ರಿಲೀಸ್​ ಆಗಿ ಸಖತ್ ಸೌಂಡ್ ಮಾಡ್ತಿದೆ.

ವಿ.ಹರಿಕೃಷ್ಣರ ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಡಿಗಿದೆ. ಅನುರಾಧ ಭಟ್ ಹಾಗೂ ಶ್ವೇತ ಮೋಹನ್ ಈ ಹಾಡಿಗೆ ದನಿಯಾಗಿದ್ದಾರೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಹಾಡು ಚಿತ್ರೀಕರಿಸಿದ್ದು, ತನ್ನ ರೂಪ, ವೈಯ್ಯಾರ ಮತ್ತು ಮೋಹಕ ನೃತ್ಯದಿಂದ ಮಾಯೆ, ದುರ್ಯೋಧನನನ್ನು ಮರಳು ಮಾಡಿದ್ದಾಳೆ.

ಅಂದಿನ ಕಾಲದ ನರ್ತಕಿಯಂತೆ ಬಹಳ ಸುಂದರವಾದ ಕಾಸ್ಟ್ಯೂಮ್ಸ್​​ನಲ್ಲಿ ಹರಿಪ್ರಿಯಾ ಮೋಡಿ ಮಾಡಿದ್ದಾರೆ. ಸುಮಾರು ಹತ್ತು ಕೆಜಿ ತೂಕದ ಆಭರಣ ತೊಟ್ಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ದರ್ಶನ್​ ದುರ್ಯೋಧನ ಅವತಾರದಲ್ಲಿ ಮೀಸೆ ತಿರುವುತ್ತಾ ಮಾಯೆಯ ಚೆಲುವಿಗೆ ಮರುಳಾಗಿದ್ದಾರೆ. ಸದ್ಯ ‘ಜುಮ್ಮಾ ಜುಮ್ಮಾ’ ಲಿರಿಕಲ್ ವಿಡಿಯೋ ಸಾಂಗ್ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು, ಲಕ್ಷ ಲಕ್ಷ ವೀವ್ಸ್ ಸಾಧಿಸಿ, ಟ್ರೆಂಡ್​ ಕ್ರಿಯೇಟ್​ ಮಾಡಿದೆ.

Comments are closed.