ಕರ್ನಾಟಕ

ಬಿಜೆಪಿ ಸರಕಾರದಿಂದ ಟಿಪ್ಪು ಜಯಂತಿಗೀಗ ಬ್ರೇಕ್​

Pinterest LinkedIn Tumblr


ಬೆಂಗಳೂರು; ಟಿಪ್ಪು ಜಯಂತಿ ಪ್ರತಿ ವರ್ಷವೂ ಒಂದಲ್ಲಾ ಒಂದು ವಿವಾದದಿಂದ್ಲೇ ಸುದ್ದಿಯಾಗೋ ವಿಷ್ಯವಿದು. ಇದನ್ನೇ ಮುಂದಿಟ್ಕೊಂಡು ಹಲವರು ವೋಟ್​ ಬ್ಯಾಂಕ್​ ರಾಜಕೀಯ ಮಾಡಿದ್ದೂ ಇದೆ.

ಮೂರು ವರ್ಷದ ಹಿಂದೆ ಆಚರಣೆಗೆ ಬಂದಿದ್ದ ಟಿಪ್ಪು ಜಯಂತಿಗೀಗ ಬ್ರೇಕ್​ ಬಿದ್ದಿದೆ. ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೇರ್ತಿದ್ದಂತೆ ವಿವಾದಿತ ಟಿಪ್ಪು ಜಯಂತಿಗೆ ಬ್ರೇಕ್​ಹಾಕಿದ್ದಾರೆ. ಇನ್ಮುಂದೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಅಂತಾ ಹುಕುಂ ಹೊರಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿಗೆ ಮುನ್ನುಡಿ ಇಟ್ಟಿತ್ತು. ಇದ್ರಂತೆಯೇ 2016 ನವೆಂಬರ್​ 10ರಂದು ಅದ್ಧೂರಿಯಾಗಿ ಆಚರಣೆಯನ್ನೂ ಮಾಡಿದರು. ಆದರೆ, ಕೊಡಗು ಜಿಲ್ಲೆಯಲ್ಲಿ ಮಾತ್ರ ರಕ್ತದೋಕುಳಿಯೇ ಹರಿದು ಹೋಗಿತ್ತು. ಟಿಪ್ಪು ಜಯಂತಿ ವಿರುದ್ಧ ಸಿಡಿದೆದ್ದಿದ್ದ ಅಲ್ಲಿನ ಜನ ರಣಾಂಗಣವನ್ನೇ ಸೃಷ್ಟಿ ಮಾಡಿದರು.

ಆದರೆ, ಸಿದ್ದರಾಮಯ್ಯ ಸರ್ಕಾರ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎಂದಿರ್ಲಿಲ್ಲ. ಆಗ್ಲೇ ಯಡಿಯೂರಪ್ಪ ಆ್ಯಂಡ್​ ಟೀಂ ನಾವು ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು ಮಾಡೋದಾಗಿ ಘಂಟಾಘೋಷವಾಗಿ ಸಾರಿದ್ದರು. ಅಂದು ಹೇಳಿದಂತೆಯೇ ಇಂದು ಮಾಡಿ ತೋರಿಸಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಟಿಪ್ಪು ಜಯಂತಿಗೆ ತಿಲಾಂಜಲಿ ಬಿಟ್ಟಿದ್ದಾರೆ.

ಯಾವಾಗ ಬಿಜೆಪಿಯ ಈ ನಿರ್ಧಾರ ಹೊರ ಬಿತ್ತೋ ಕೈ ಪಾಳಯ ಕೆರಳಿ ಕೆಂಡವಾಗಿದೆ. ಅದರಲ್ಲೂ ಸಿದ್ದರಾಮಯ್ಯ ಅಂತೂ ಬಿಎಸ್​ವೈ ವಿರುದ್ಧ ಕೆಂಡಕಾರಿದ್ದಾರೆ. ಅಂದು ಕೈಯಲ್ಲಿ ಕತ್ತಿ ಹಿಡಿದು, ಟಿಪ್ಪು ವೇಷ ಹಾಕಿ ಕುಣಿದಾಡಿದರು. ಈಗ ಸಂಘ ಪರಿವಾರ ಮೆಚ್ಚಿಸಲು ಟಿಪ್ಪು ಜಯಂತಿಯನ್ನೇ ರದ್ದು ಮಾಡಿದ್ದಾರೆ ಅಂತಾ ಮಾತಲ್ಲೇ ಗುದ್ದು ಕೊಟ್ಟಿದ್ದಾರೆ.

Comments are closed.