ಮನೋರಂಜನೆ

ಸ್ಯಾಂಡಲ್​ವುಡ್​​ನಲ್ಲಿ ಕರಾವಳಿ ಬೆಡಗಿಯ ಸಖತ್​ ಪೋಸ್!!​​

Pinterest LinkedIn Tumblr

ಈಕೆ ಪೌರಾಣಿಕ ಪಾತ್ರಗಳ ಮೂಲಕ ಸ್ಮಾಲ್​ಗೆ ಲಗ್ಗೆ ಇಟ್ಟ ಚೆಂದುಳ್ಳಿ ಚೆಲುವೆ. ಈಗ ಬೆಳ್ಳಿತೆರೆಯಲ್ಲಿ ತನ್ನ ಅದ್ಭುತ ಅಭಿನಯದ ಮೂಲಕ ಚಾಪು ಮೂಡಿಸೋದಿಕ್ಕೆ ರೆಡಿಯಾಗಿರೋ ಕರಾವಳಿ ಬೆಡಗಿ. ಯಾರು ಈ ನಟಿ..? ಈ ಸಾಫ್ಟ್ ಬ್ಯೂಟಿಯ ಸಖತ್​ ಫೋಸ್ ಝಲಕ್ ಹೇಗಿದೆ ಗೊತ್ತಾ..? ಹ್ಯಾವೇ ಲುಕ್​…

ಸ್ಯಾಂಡಲ್​ವುಡ್​ನಲ್ಲಿ ಸ್ಮಾಲ್​ ಸ್ರೀನ್ ಟು ಬಿಗ್​ ಸ್ಕ್ರೀನ್​ಗೆ ಲಗ್ಗೆ ಇಟ್ಟ ಅದೆಷ್ಟೋ ಮಂದಿ ಇಂದು ಸ್ಟಾರ್​ ಪಟ್ಟ ಅಲಂಕರಿಸಿರೋ ಎಕ್ಸಂಪಲ್​ಗಳಿವೆ. ಈಗ ಈ ಪೈಕಿ ಇದೆ ಭರವಸೆ ಮೂಡಿಸೋ ಬ್ಯುಟಿ ಕ್ವೀನ್​ ಒಬ್ಬಳು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಈಕೆಯೇ ಬೃಂದಾ ಆಚಾರ್ಯ.

ನಟನಾ ಶಾಲೆಗೆ ಹೋಗದೆ, ಬಣ್ಣದ ಲೋಕದ ಯಾವುದೇ ಹಿನ್ನೆಲೆ ಇಲ್ಲದೆ, ಸಿನಿಮಾ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡಬೇಕೆಂದು ಬಂದಿರೋ ಚೆಲುವೆಯೆ ಬೃಂದಾ ಆಚಾರ್ಯ. ಕರಾವಳಿ ಮೂಲದ ಬೃಂದಾ ಬೆಳೆದಿದ್ದು ಬೆಂಗಳೂರಿನಲ್ಲಿ. ಓದಿದ್ದು ಇಂಜಿನಿಯರಿಂಗ್.

ಬಳಿಕ ಮುಂಬೈನಲ್ಲಿ ಟೆಕ್ಕಿ ಆಗಿ ಕೆಲಸ ಆರಂಭಿಸಿದ ಅವರು, ಕೆಲ ದಿನಗಳಲ್ಲೇ ಅದಕ್ಕೆ ಗುಡ್ ಬೈ ಹೇಳಿದರು. ನಂತರ ಹಲವು ಧಾರಾವಾಹಿಗಳಿಗೆ ಆಡಿಷನ್ ನೀಡಿದರು. ಪರಿಣಾಮ ಶನಿ ಹಾಗೂ ಮಹಾಕಾಳಿ ಸೀರಿಯಲ್​​ನಲ್ಲಿ ಬಣ್ಣ ಹಚ್ಚೋ ಅವಕಾಶ ಸಿಕ್ತು.ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಶನಿ ಹಾಗೂ ಮಹಾಕಾಳಿಯಲ್ಲಿ ಧಾಮಿನಿ ಹಾಗೂ ರತಿಯಾಗಿ ಪೌರಾಣಿಕ ಪಾತ್ರಗಳಿಗೆ ಬಣ್ಣದ ಹಚ್ಚಿದೆ ಬೃಂದಾಗೆ ನಟನೆ ಕರಗತವಾಯ್ತು. ಯಾವುದೇ ಪಾತ್ರ ಕೊಟ್ರು ಮಾಡ್ತೀನಿ ಅನ್ನೋ ಕಾನ್ಫೀಡೆನ್ಸ್ ಹುಟ್ಟಿತು. ಈ ಭರವಸೆಯಲ್ಲಿದ್ದಾಗ್ಲೇ ಸ್ಯಾಂಡಲ್​ವುಡ್​ ಆಫರ್ ಬಂದಿದ್ದು.

ಪ್ರೇಮ್ ಸಿನಿ ಕರಿಯರ್​​ನ 25ನೇ ಸಿನಿಮಾ ಪ್ರೇಮಂ ಪೂಜ್ಯ. ಬಹಳಷ್ಟು ಹೋಮ್ ವರ್ಕ್​ ಮಾಡಿ ಈ ಸಿನಿಮಾ ಚ್ಯುಸ್ ಮಾಡಿರೋ ಪ್ರೇಮ್​ಗೆ ತಕ್ಕ ಜೋಡಿ ಹುಡುಕಿದಾಗ ಸಿಕ್ಕಿದ್ದೇ ಈ ಕರಾವಳಿ ಬೆಡಗಿ. ಈಗಾಗ್ಲೇ ಕಿರುತೆರೆಯಲ್ಲಿ ಅಭಿನಯ ನೋಡಿರೋ ನಿರ್ದೇಶಕ ರಾಘವೇಂದ್ರ, ಬೃಂದಾಳಿಗೆ ಮಣೆ ಹಾಕಿದ್ದಾರೆ.

ಕಿರುತೆರೆಯಲ್ಲಿ ಬರೀ ಪೌರಾಣಿಕ ಪಾತ್ರಕ್ಕೆ ಸೀಮಿತವಾಗಿದ್ದ ಈ ಚೆಲುವೆ ಪ್ರೇಮಂ ಪೂಜ್ಯಂನಲ್ಲಿ ಸಿನಿಮಾದಲ್ಲಿ ಡಿಫರೆಂಟ್​ ಲುಕ್​ನಲ್ಲಿ ಮೋಡಿ ಮಾಡಲಿದ್ದಾಳೆ. ಸಿನಿಮಾದ ಜೊತೆ ಜೊತೆಯಲ್ಲೇ ಬೃಂದಾ ಈಗಾಗ್ಲೇ ಸಖತ್​ ಕಲರ್​ಫುಲ್​ ಪ್ರೋಟೋಶೂಟ್​ ಮಾಡಿಸಿದ್ದಾಳೆ.ಸದ್ಯ ಪ್ರೇಮಂ ಪೂಜ್ಯಂ ಶೂಟಿಂಗ್​ನಲ್ಲಿ ಬ್ಯೂಸಿ ಇರೋ ಈ ಬ್ಯೂಟಿ ಈಗ ಸಖತಾಗಿ​ ಫೋಟೋಶೂಟ್​ವೊಂದನ್ನ ಮಾಡಿಸಿದ್ದಾರೆ. ಭಿನ್ನ-ವಿಭಿನ್ನ ಭಂಗಿಯಲ್ಲಿ ಕ್ಯಾಮಾರಾಗೆ ಬೃಂದಾ ಫೋಸ್ ಕೊಟ್ಟಿದ್ದಾಳೆ. ಒಂದ್ಕಡೆ ರೆಡ್​ ಅಂಡ್​ ಬ್ಲಾಕ್ ಡ್ರೆಸ್​ ತೊಟ್ಟು ಈಕೆ ಕ್ಯಾಮಾರಾಗೆ ಕಣ್ಣು ಹೊಡೆದಿದ್ದಾಳೆ.

ಲೈಟ್​ ಬ್ಲೂ ಗೌನ್ ತೊಟ್ಟು ಸಖತ್ ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಇಷ್ಟೇ ಅಲ್ಲದೇ ಲೈಟ್​ ಗೋಲ್ಡ್ ಅಂಡ್ ವೈಟ್​ ಗೌನ್ ತೊಟ್ಟು ಬಿಂದಾಸ್​ ಸ್ಮೈಲ್ ಕೊಟ್ಟಿದ್ದಾಳೆ ಬೃಂದಾ.

ಗ್ಲ್ಯಾಮರ್​ ಜಗತ್ತಿಗೆ ಹೊಸಬರು ಎಂಟ್ರಿ ಕೊಡ್ತಾನೇ ಇರ್ತಾರೆ. ಆದ್ರೆ ಪ್ರತಿಭೆ, ಚೆಲುವು ಜೊತೆಗೆ ಒಂದಿಷ್ಟು ಅದೃಷ್ಟ ಇರೋರು ಮಾತ್ರ ಬಣ್ಣದ ಜಗತ್ತಿನಲ್ಲಿ ಉಳ್ಕೊಳ್ಳೋಕೆ ಸಾಧ್ಯ. ಚೊಚ್ಚಲ ಚಿತ್ರ ರಿಲೀಸ್​ಗೂ ಮೊದಲೇ, ಬೃಂದಾ ಸ್ಯಾಂಡಲ್​​ವುಡ್​​ನಲ್ಲಿ ಲಾಂಗ್​ ಟೈಮ್​ ಉಳ್ಕೊಳ್ಳೋ ಭರವಸೆ ಹುಟ್ಟಿಸಿದ್ದಾಳೆ.

Comments are closed.