ಮನೋರಂಜನೆ

ಟುಮಾರೋಲ್ಯಾಂಡ್ ಪಾರ್ಟಿಗೆ ಮೈಚಳಿ ಬಿಟ್ಟು ಪೋಸುಕೊಟ್ಟ ಹರ್ಷಿಕಾ!!

Pinterest LinkedIn Tumblr


ಸ್ಯಾಂಡಲ್ ವುಡ್ ನಟಿ ಹರ್ಷಿಕ ಪೂಣಚ್ಛ ಸದ್ಯ ಫಾರಿನ್ ಟ್ರಿಪ್ ಮೂಡ್ ನಲ್ಲಿದ್ಧಾರೆ. ಜಗತ್ತಿನ ಫೇಮಸ್ ಬೆಲ್ಜಿಯಂನ ಟುಮಾರೋ ಲ್ಯಾಂಡ್‌ ಪಾರ್ಟಿ ತಾಣಕ್ಕೆ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿರುವ ಹರ್ಷಿಕ ಇದೀಗಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಅಲ್ಲಿನ ಸುಂದರ ತಾಣಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿರುವ ಕೊಡಗಿನ ಕುವರಿ ಹರ್ಷಿಕ ಸಖತ್ ಮೋಜು ಮಸ್ತಿ ಮಾಡುತ್ತಿದ್ದು, ಜೊತೆಗೆ ತುಂಡು ಬಟ್ಟೆ ತೊಟ್ಟು ಫೋಟೋಗೆ ಸಖತ್ ಸ್ಟೈಲಿಷ್ ಆಗಿ ಫೋಸ್ ಕೊಟ್ಟಿದ್ಧಾರೆ. ಅಲ್ಲದೆ ಇತ್ತೀಚೆಗಷ್ಟೇ ಈ ಮ್ಯೂಸಿಕಲ್ ಫೆಸ್ಟಿವಲ್ ನಲ್ಲಿ ಕೊಡವ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು.

ಇನ್ನೂ ದೇಶ ವಿದೇಶದಿಂದ ಶ್ರೀಮಂತರೇ ಬರುವ ಈ ಮ್ಯೂಸಿಕ್ ಫೆಸ್ಟ್ ಗೆ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಒಬ್ಬರೇ ಅಲ್ಲದೆ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಸಹ ಈ ಚೆಂದುಳ್ಳಿ ಚೆಲುವೆಗೆ ಸಾಥ್ ನೀಡಿದ್ದಾರೆ.

ಸದ್ಯ ‘ಚಿಟ್ಟೆ’ ಚಿತ್ರದ ನಂತರ ‘ಉದ್ಘರ್ಷ’ ಚಿತ್ರದ ಶೂಟಿಂಗ್ ಮಾಡುತ್ತಿದ್ದ ಹರ್ಷಿಕ ಇದೀಗಾ ಬ್ರೇಕ್ ತಗೊಂಡು ಹಾಲಿಡೇ ಎಂಜಾಯ್ ಮಾಡುತ್ತಿದ್ದರೆ, ಇನ್ನೊಂದೆಡೆ ಭುವನ್ ‘ರಾಂಧವ’ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮುಗಿಸಿ ಹರ್ಷಿಕಗೆ ಜೊತೆ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

Comments are closed.