ಕರ್ನಾಟಕ

ಹಾಸನದಲ್ಲಿ ಅತೃಪ್ತರಿಗೆ ಈ ರೀತಿ ಮರ್ಯಾದೆ!

Pinterest LinkedIn Tumblr


ಹಾಸನ: ಅನರ್ಹಗೊಂಡ 14 ಅತೃಪ್ತ ಕಾಂಗ್ರೆಸ್ ಶಾಸಕ ತಿಥಿ ಕಾರ್ಯವನ್ನು ಹಾಸನದ ಕೈ ಭವನದಲ್ಲಿ ಕಾರ್ಯಕರ್ತರು ಸೋಮವಾರ ನೇರವೇರಿಸಿದರು.

ನಮ್ಮ ಪಕ್ಷಕ್ಕೆ ದ್ರೋಹ ಎಸಗಿ ಹೋದವರು ನಮ್ಮ ಪಾಲಿಗೆ ಈ ಸತ್ತಿದ್ದಾರೆ ಎಂದು ಕಾಂಗ್ರೆಸ್​ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ತಿಥಿ ಕಾರ್ಯದಲ್ಲಿ ವಡೆ, ಹೂವಿನ ಹಾರ ಪ್ರದರ್ಶಿಸಿ ಅನರ್ಹ ಶಾಸಕರ ತಿಥಿ ಆಚರಣೆ ಮಾಡಲಾಯಿತು.

ಇನ್ನು ಅನರ್ಹಗೊಂಡ ಶಾಸಕರ ಮುಂದೆ ಪಕ್ಷಕ್ಕೆ ಸೇರಿಸಿದಂತೆ ಹೈಕಮಾಂಡ್​​ಗೆ ಮನವಿ ಮಾಡಿಕೊಂಡ ಕಾರ್ಯಕರ್ತರು, ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಬೀಳಲು ಕಾಂಗ್ರೆಸ್​ನ 14 ಶಾಸಕರು ಹಾಗೂ ಜೆಡಿಎಸ್​ 3 ಶಾಸಕರು ಕಾರಣಕರ್ತರಾಗಿದ್ದರು. ಮೊದಲ ಬಾರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಮೂವರು ಶಾಸಕರನ್ನು ಅನರ್ಹ ಮಾಡಿ ಉಳಿದ 14 ಶಾಸಕರನ್ನು ನಿನ್ನೆ ಅನರ್ಹಗೊಳಿಸುವ ಮೂಲಕ ಅತೃಪ್ತರ ನಡೆಗೆ ಶಾಕ್​ ನೀಡಿದರು.

Comments are closed.