ಕರ್ನಾಟಕ

ಅತೃಪ್ತರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಶಿವರಾಜ್​ ತಂಗಡಗಿ!

Pinterest LinkedIn Tumblr


ಕೊಪ್ಪಳ: ಅತೃಪ್ತರನ್ನು ನಮ್ಮನ್ನು ಅನರ್ಹ ಮಾಡಬೇಡಿ ಎಂದು ಕರೆ ಮಾಡಿದರು ನಾವು ಬರ್ತೀವಿ ಅಂತಾ ಸಿದ್ದರಾಮಯ್ಯ ಅವರ ಜೊತೆ ನಾನು ಇದ್ದಾಗ ಅವರೆಲ್ಲ ಫೋನ್​ ಮಾಡಿದ್ದರು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಅತೃಪ್ತರ ಚಟುವಟಿಕೆಗಳನ್ನು ಸೋಮವಾರ ಹೊರ ಹಾಕಿದ್ದಾರೆ.

ಕೊಪ್ಪಳದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅತೃಪ್ತರನ್ನು ಬೀದಿಗೆ ನಿಲ್ಲುವಂತಹ ಸ್ಥಿತಿಯನ್ನು ಬಿಜೆಪಿ ಮಾಡಿದೆ. ನಂಬಿದವರನ್ನು ಬೀದಿಗೆ ನಿಲ್ಲಿಸಿ ಇದೀಗ ಬಿಜೆಪಿ ಸೇಫ್ ಆಗಿದೆ. ಅತೃಪ್ತರನ್ನು ಅನರ್ಹ ಮಾಡಿದ್ರೆ ಬಿಜೆಪಿಗೆ ಯಾಕಿಷ್ಟು ತ್ರಾಸ್ ಆಗೈತಿ(?) ಎಂದು ಅವರು ಪ್ರಶ್ನೆ ಮಾಡಿದರು.

ಇನ್ನು ಮತ್ತೊಬ್ಬರನ್ನು ಹಾಳು ಮಾಡಿ ಬಿಜೆಪಿ ಸರ್ಕಾರ ಮಾಡ್ತಾ ಇದೆ. ಪಕ್ಕದ ಮನೆಯವರ ಮಗುವನ್ನು ನಮ್ಮಮಗು ಅಂತಾ ನಾಮಕರಣ ಮಾಡ್ತಾ ಇದ್ದಾರೆ. ಬಿಜೆಪಿಯವರಿಗೆ ನಾಚಿಕೆ ಮಾನ-ಮರ್ಯಾದೆ ಇಲ್ಲ ಎಂದು ಅವರು ನುಡಿದರು.

ಸದ್ಯ ಅತೃಪ್ತರು ತಮ್ಮ ಮಾನ ಮುಚ್ಚಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯನವರ ಹೆಸರು ಹೇಳ್ತಾ ಇದ್ದಾರೆ. ಸಿದ್ದರಾಮಯ್ಯನವರು ಯಾರನ್ನು ಕಳಿಸಿಲ್ಲ, ಅತೃಪ್ತರ ಚಟುವಟಿಕೆಯಿಂದ ಸಿದ್ದರಾಮಯ್ಯ ತುಂಬಅ ನೊಂದಿದ್ದಾರೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್​ ತಂಗಡಗಿ ಅವರು ಮಾತನಾಡಿದರು.

Comments are closed.