ಮನೋರಂಜನೆ

ಕೆಜಿಎಫ್ 2ನಲ್ಲಿ ಬಾಲಿವುಡ್​​ನ ಮುನ್ನಾಭಾಯಿ ಆರ್ಭಟ

Pinterest LinkedIn Tumblr


ಕನ್ನಡ ಚಿತ್ರರಂಗದಲ್ಲಿ ಚಿತ್ರವೊಂದಕ್ಕೆ ಖಳನಾಯಕನ ಆಯ್ಕೆ ಈ ರೇಂಜಿಗೆ ಸೆನ್ಸೇಷನ್​ ಕ್ರಿಯೇಟ್ ಮಾಡಿದ್ದು ಇದೇ ಮೊದಲು ಅನ್ಸತ್ತೆ. ಸ್ಯಾಂಡಲ್​ವುಡ್​ ಗೇಮ್ ಚೇಂಜರ್​ ಕೆಜಿಎಫ್​​ ಕ್ರಿಯೇಟ್ ಮಾಡ್ತಿರೋ ಸೌಂಡ್​​​​ ಎಂಥದ್ದು ಅಂತ ಗೊತ್ತೇಯಿದೆ. ಆ ಸೌಂಡನ್ನು ಡಬಲ್ ಮಾಡೋಕ್ಕೆ ಬಾಲಿವುಡ್​​​ ನಟ ಸಂಜಯ್ ದತ್​ ಎಂಟ್ರಿಯಾಗಿದೆ.

ಯಶ್​​ ಮತ್ತು ಸಂಜು ಬಾಬಾ ಜುಗಲ್ಬಂದಿ ಇರೋ ಕೆಜಿಎಫ್​ ಚಾಪ್ಟರ್​-2 ಬಾಕ್ಸಾಫೀಸ್​​ನಲ್ಲಿ ಸುನಾಮಿ ಸೃಷ್ಟಿಸೋದು ಗ್ಯಾರೆಂಟಿ. ರಾಕಿ ಭಾಯ್​​- ಅಧೀರನ ಕಾದಾಟ ನೋಡೋಕ್ಕೆ ಫ್ಯಾನ್ಸ್​​ ಕಾತರದಿಂದ ಕಾಯ್ತಿದ್ದಾರೆ.

3 ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ, ಸೋಮವಾರ ಅಧೀರನನ್ನು ಪರಿಚಯಿಸ್ತೀವಿ ಅಂದಾಗ್ಲೇ, ಅಭಿಮಾನಿಗಳಿಗೇ ಅಧೀರ ಯಾರು ಅನ್ನೋ ಸುಳಿವು ಸಿಕ್ಕಿತ್ತು. ಕೆಜಿಎಫ್​ ಫಸ್ಟ್ ಚಾಪ್ಟರ್​​ ರಿಲೀಸ್​ ವೇಳೆಗೆ ಚಾಪ್ಟರ್​ ಟೂನಲ್ಲಿ ಸಂಜಯ್​ ದತ್ ನಟಿಸ್ತಾರೆ, ಈ ಬಗ್ಗೆ ಪ್ರಶಾಂತ್​ ನೀಲ್​ ಅಂಡ್ ಟೀಮ್, ಅಧೀರ ಪಾತ್ರಕ್ಕೆ ಸಂಜುಬಾಬಾನ ಅಪ್ರೋಚ್​ ಮಾಡಿದ್ದಾರಂತೆ ಅನ್ನೋ ಸುದ್ದಿ ಕೇಳಿಬಂದಿತ್ತು.​​ ಸಂಜಯ್​ ದತ್​ ನಟಿಸೋಕ್ಕೆ ನೋ ಅಂದರು, ಅಂತಾನು ಸುದ್ದಿಯಾಗಿತ್ತು. ಬಟ್​​​ ಫೈನಲಿ ಸಂಜುಬಾಬಾನ ಕನ್ನಡಕ್ಕೆ ಕರ್ಕೊಂಡ್​​ ಬರುವಲ್ಲಿ ಕೆಜಿಎಫ್​ ಟೀಂ ಸಕ್ಸಸ್ ಕಂಡಿದೆ.

ಕೆಜಿಎಫ್ ಪ್ರೀಕ್ವೆಲ್​​​​ನಲ್ಲಿ ಅಧೀರ ಸಾವನ್ನಪ್ಪಿದಂತೆ ತೋರಿಸಿದರು, ಕ್ಲೈಮ್ಯಾಕ್ಸ್​ನಲ್ಲಿ ಮತ್ತೆ ಅಧೀರ ದರ್ಶನ ಕೊಡ್ತಾನೆ. ಇಡೀ ಸಿನಿಮಾ ಅಧೀರನನ್ನು ತೋರಿಸೋದೇ ಇಲ್ಲ. ಆದರೆ ಕ್ಲೈಮ್ಯಾಕ್ಸ್​​​ನಲ್ಲಿ ಗರುಡ ಸತ್ತ ಮೇಲೆ ಅಧೀರನ್ನು ತೋರಿಸಿ, ಟ್ವಿಸ್ಟ್​​ ಕೊಟ್ಟಿದರು ನಿರ್ದೇಶಕರು. ಫಸ್ಟ್​ ಪಾರ್ಟ್​​​ನಲ್ಲಿ ದರ್ಶನ ಕೊಡದ ಅಧೀರನೇ ಸೆಕೆಂಡ್​ ಪಾರ್ಟ್​​ನ ಅಸಲಿ ವಿಲನ್. ಹಾಗಾಗಿ ಆ ಪಾತ್ರಕ್ಕೆ ಖಡಕ್​​ ಕಲಾವಿದನ ಹುಡುಕಾಟದಲ್ಲಿತ್ತು ಕೆಜಿಎಫ್​ ಟೀಂ, ನಿರ್ದೇಶಕ ಪ್ರಶಾಂತ್​ ನೀಲ್​ ಅಂತೂ ಸಂಜುಬಾಬಾಗಂತ್ಲೇ ಆ ಪಾತ್ರವನ್ನು ಡಿಸೈನ್​ ಮಾಡಿದ್ದಾರೆ ಅನ್ನಿಸುತ್ತೆ. ಕೊನೆಗೆ ಅವರೇ ಬಂದಿದ್ದಾರೆ.

ಹೀರೋಗಿಂತ ವಿಲನ್​ ಸ್ಟ್ರಾಂಗ್​ ಆಗಿ ಇದ್ದರೆ, ಅವರಿಬ್ಬರ ಕಾದಾಟ ಪ್ರೇಕ್ಷಕನಿಗೆ ಸಿಕ್ಕಾಪಟ್ಟೆ ಕಿಕ್​ ಕೊಡುತ್ತೆ. ಪವರ್​​​ ಬೇಕು ಅಂತ ಮುಂಬೈ ಸೇರಿದ ಚಾಲಾಕಿ ಹುಡುಗ ಮುಂದೆ ಮುಂಬೈ ಡಾನ್​ ರಾಕಿ ಆಗಿದ್ದು, ಅಲ್ಲಿಂದ ಕೆಜಿಎಫ್​​ಗೆ ಬಂದು ಗರುಡನನ್ನು ಕೊಂದು ರಾಕಿ ಭಾಯ್​ ಆಗೋದನ್ನು ನೋಡಿದ್ದೇವೆ. ಇಂತಹ ಪ್ರಳಯಾಂತಕನ ಎದುರು ಅಬ್ಬರಿಸೋಕ್ಕೆ ಚಾಪ್ಟರ್​​​ ಟೂನಲ್ಲಿ ಮತ್ತೊಬ್ಬ ಪ್ರಳಯಾಂತಕ​​ ಬರ್ತಾನೆ. ಅವನೇ ಅಧೀರ. ಈಗ ಗೊತ್ತಾಯ್ತಲ್ಲ, ಅಧೀರನ ಪಾತ್ರ ಎಷ್ಟು ಪವರ್​​ಫುಲ್ ಅಂತ. ಇಂತ ಪವರ್​​ಪುಲ್​​ ರೋಲ್​​​​ನಲ್ಲಿ ಸಂಜುಬಾಬ ಅಬ್ಬರಿಸಿದರೆ ಹೇಗಿರುತ್ತೆ ಹೇಳಿ.

ಕೆಜಿಎಫ್​ ಫಸ್ಟ್ ಚಾಪ್ಟರ್​​ ಬ್ಲಾಕ್​ ಬಸ್ಟರ್ ಹಿಟ್ ಆಗಿದ್ದು, ಚಾಪ್ಟರ್​ ಟೂ ಬಗ್ಗೆ ಸಿಕ್ಕಾಪಟ್ಟೆ ಎಕ್ಸ್​ಪೆಕ್ಟೇಷನ್​ ಇದೆ. ಅದಕ್ಕೆ ತಕ್ಕಂತೆ ಈಗಾಗಲೇ ಭರ್ಜರಿಯಾಗಿ ಶೂಟಿಂಗ್​ ನಡೆಸ್ತಿದೆ ಚಿತ್ರತಂಡ. ಸಂಜಯ್​ ದತ್​ ಆಗಮನದಿಂದ ಕೆಜಿಎಫ್ ​​​ಖದರ್​ ಡಬಲ್ಲಾಗಿದೆ. ಚಿತ್ರತಂಡವೇ ಹೇಳಿದಂತೆ ಚಾಪ್ಟರ್​​ ವನ್​​ಗಿಂತ ಚಾಪ್ಟರ್​ ಟೂ ಹಲವು ಪಟ್ಟು ದೊಡ್ಡದಾಗಿರುತ್ತೆ. ಅದೇ ರೇಂಜ್​​ಗೆ ಎಲ್ಲರ ಕ್ಯಾರೆಕ್ಟರೈಷೇನ್, ಮೇಕಿಂಗ್​, ಪ್ರಮೋಷನ್​, ರಿಲೀಸ್ ಪ್ಲಾನ್ ಮಾಡಲಾಗ್ತಿದೆ. ನಿರ್ದೇಶಕರು ಅಧೀರನ ಪಾತ್ರವನ್ನು ಅದ್ಭುತವಾಗಿ ಡಿಸೈನ್​ ಮಾಡಿದ್ದು, ಸಂಜುಬಾಬಾ ಧೂಳೆಬ್ಬಿಸೋದು ಪಕ್ಕಾ

ಚಿತ್ರತಂಡ ಜುಲೈ 29ಕ್ಕೆ ಅಧೀರ ಯಾರು ಅನ್ನೋದನ್ನು ಹೇಳ್ತಿವಿ ಅಂದಾಗ್ಲೇ ಅಭಿಮಾನಿಗಳಿಗೆ ಅದು ಸಂಜಯ್ ದತ್​ ಅನ್ನೋದು ಗೊತ್ತಾಗಿತ್ತು. ಹುಟ್ಟುಹಬ್ಬದ ದಿನ ಪೋಸ್ಟರ್​ ಸಮೇತ ಅಧೀರ ಪಾತ್ರಧಾರಿಯನ್ನು ಘೋಷಿಸಲಾಗಿದೆ. ಕೆಜಿಎಫ್​ ಚಿತ್ರದ ಎಲ್ಲಾ ಪಾತ್ರಗಳಿಗೆ ವಿಭಿನ್ನ ಲುಕ್​ ಮತ್ತು ಮ್ಯಾನರಿಸಂ ಡಿಸೈನ್​ ಮಾಡಿರೋ ಪ್ರಶಾಂತ್​ ನೀಲ್​, ಅಧೀರನನ್ನು ಅಷ್ಟೆ ಸ್ಪೆಷಲ್ಲಾಗಿ ತೋರಿಸ್ತಿದ್ದಾರೆ. ಈಗಾಗಲೇ ಪೋಸ್ಟರ್​​ನಲ್ಲಿ ಅದರ ಝಲಕ್ ನೋಡ್ಬೋದು. ಅರ್ಧ ಮುಖ ಮುಚ್ಚಿಕೊಂಡಿರುವಂತೆ ಸಂಜಯ್​ ದತ್​​, ಅಧೀರ ಖಡಕ್​ ಲುಕ್​​ ಅಭಿಮಾನಿಗಳ ಮನಗೆದ್ದಿದೆ.

ರಾಕಿ ಭಾಯ್​​ ಮತ್ತು ಅಧೀರನ ನಡುವಿನ ಸಂಘರ್ಷ, ಎಲ್ಲಾ ಸಂಘರ್ಷಗಳನ್ನು ಮೀರಿದ ಸಂಘರ್ಷ, ಅಂತ ಸ್ವತ: ಚಿತ್ರತಂಡವೇ ಹೇಳಿದ್ದು, ಈ ಸಂಘರ್ಷ ತೆರೆಮೇಲೆ ಜಾದೂ ಮಾಡಲಿದೆ. ಅಪ್ಪಟ ಕನ್ನಡಿಗರ ಸಿನಿಮಾ ಆದರು, ಕೆಜಿಎಫ್​ ಬಾಲಿವುಡ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು, ಅಂತಾದ್ರಲ್ಲಿ, ಸಂಜಯ್ ದತ್​ ವಿಲನ್​ ಅಂದ್ಮೇಲೆ ಚಾಪ್ಟರ್​ ಟೂ ಯಾವ ರೇಂಜ್​​ಗೆ ಸೌಂಡ್​ ಮಾಡ್ಬೋದು ಊಹಿಸಿ. ಅದೇ ಕಾರಣಕ್ಕೆ ಸಂಜಯ್​ ದತ್​ ಎಂಟ್ರಿ, ಕೆಜಿಎಫ್​ ಟೀಂಗೆ ಆನೆಬಲ ತಂದು ಕೊಟ್ಟಿದೆ. ಚಾಪ್ಟರ್​ ಟೂ ಚಿತ್ರತಂಡದ ಊಹೆಯನ್ನೂ ಮೀರುವ ಸುಳಿವು ಸಿಕ್ತಿದೆ.

ಸಂಜಯ್ ದತ್​​ ಅಧೀರ ಪಾತ್ರ ಮಾಡ್ತಾರೆ ಅನ್ನೋದನ್ನಷ್ಟೆ ಹೇಳಿರೋ ಚಿತ್ರತಂಡ, ಯಾವಾಗ ಶೂಟಿಂಗ್​ನಲ್ಲಿ ಭಾಗವಹಿಸ್ತಾರೆ, ಅನ್ನೋದು ಸೇರಿದಂತೆ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಒಟ್ಟಾರೆ ಕೆಜಿಎಫ್​ ಚಾಪ್ಟರ್​​-2 ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋದು ಪಕ್ಕಾ ಅನ್ನೋದು ಮೇಕಿಂಗ್ ಹಂತದಲ್ಲೇ ಗೊತ್ತಾಗ್ತಿದೆ.

Comments are closed.