ಕಾಲಿವುಡ್ ನ ಖ್ಯಾತ ನಟಿ ಅಮಲಾ ಪೌಲ್ ಇತ್ತಿಚೆಗೆ ಅವರ ‘ಅಡೈ’ ಚಿತ್ರದ ಟೀಸರ್ ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದು, ಈಗ ಇದೇ ವಿಷಯಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.
ಅದೇ ಚಿತ್ರದ ಒಂದು ದೃಷ್ಯದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿ ಕಾಣಿಸಿಕೊಂಡಿದ್ದು, ಆ ವಿಡಿಯೋವನ್ನು ಅಮಲಾ ಖುದ್ದು ಶೇರ್ ಮಾಡಿದ್ದಾರೆ.ಅಮಲಾ ಪೌಲ್ ಟ್ವಿಟ್ಟರ್ ಅಕೌಂಟ್ನಲ್ಲಿ ನ್ಯೂಡ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊ ಸುಮಾರು 2 ನಿಮಿಷ 31 ಸೆಕೆಂಡ್ ನದ್ದಾಗಿದ್ದು, ಆ ವಿಡಿಯೊದಲ್ಲಿ ಅಮಲಾ ಬೆತ್ತಲಾಗಿದ್ದು,ಅದನ್ನು ಕನ್ನಡಿಯಲ್ಲಿ ನೋಡಿಕೊಂಡಿದ್ದಾರೆ, ಬಳಿಕ ಮೈ ಮೇಲೆ ಬಟ್ಟೆ ಇಲ್ಲದೆ ಕನ್ನಡಿಯನ್ನು ಹಿಡಿದುಕೊಂಡು ಬರುವ ದೃಶ್ಯವಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಈ ವೀಡಿಯೊ ಯೂಟ್ಯೂಬ್ ನಲ್ಲಿ 24 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಅಮಲಾ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ವೀಡಿಯೊವನ್ನು ಶೇರ್ ಮಾಡಿದ್ದಾರೆ, ಹಾಗು ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಓದಿದಾಗ ಈ ದೃಶ್ಯ ಅಷ್ಟೇನು ಆಕರ್ಷಕ ಅನ್ನಿಸಲಿಲ್ಲ , ಆದರೆ ಶೂಟಿಂಗ್ ಸಮಯದಲ್ಲಿ ತಮ್ಮ ಮನಸ್ಸಿಗೆ ಸಂತೋಷವಾಗಿತ್ತು ಎಂದು ಹೇಳಿದ್ದಾರೆ. ‘ಅಡೈ’ ಸಿನಿಮಾದ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ನಗ್ನವಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಪೂರ್ತಿ ಬೆತ್ತಲಾಗಿ ಕಾಣಿಸಿಕೊಂಡಿದ್ದರಿಂದ ಅಮಲಾ ಪೌಲ್ ಮೇಲೆ ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅಮಲಾ ಮೇಲೆ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
Comments are closed.